ಕಥುವಾ ಗ್ಯಾಂಗ್ ರೇಪ್-ಹತ್ಯೆ ಪ್ರಕರಣ: 5 ಆರೋಪಿಗಳು ದೋಷಿಗಳೆಂದು ತೀರ್ಪು

ನವದೆಹಲಿ: ಕಥುವಾದಲ್ಲಿ ಅಪ್ರಾಪ್ತ ಬಾಲಕಿಯ ಮೇಲೆ ನಡೆದಿದ್ದ ಅತ್ಯಾಚಾರ ಹಾಗೂ ಕೊಲೆ ಪ್ರಕರಣಕ್ಕೆ ಸಂಬಂಧಿಸಿದಂತೆ 7 ಆರೋಪಿಗಳಲ್ಲಿ ಐವರು ಆರೋಪಿಗಳು ದೋಷಿಗಳೆಂದು ಪಠಾಣ್​​ಕೋಟ್‌ ಕೋರ್ಟ್‌ ತೀರ್ಪು ನೀಡಿದೆ.

ಐವರು ಆರೋಪಿಗಳಾದ ಕಥುವಾ ಗ್ರಾಮದ ಮುಖ್ಯಸ್ಥ ಸಾಂಜಿ ರಾಮ್​, ಆತನ ಮಗ ವಿಶಾಲ್​​ ಹಾಗೂ ಇಬ್ಬರು ವಿಶೇಷ ಪೊಲೀಸ್​ ಅಧಿಕಾರಿಗಳಾದ ದೀಪಕ್​ ಖಜುರಿಯಾ ಮತ್ತು ಸುರೇಂಸರ್​ ವರ್ಮಾ ಮತ್ತು ಹೆಡ್​ ಕಾನ್ಸ್​​ಟೇಬಲ್​ ತಿಲಕ್​ ರಾಜ್​ ಎಂಬುವವರು ದೋಷಿಗಳು ಎಂದು ಕೋರ್ಟ್​ ತೀರ್ಪು ನೀಡಿದ್ದು, ಎಲ್ಲರೂ ಜೀವಾವಧಿಯಿಂದ ಗಲ್ಲುಶಿಕ್ಷೆಯನ್ನು ಎದುರಿಸುವ ಸಾಧ್ಯತೆ ಇದೆ.

2018, ಜನವರಿ 10ರಂದು ಜಮ್ಮು ಮತ್ತು ಕಾಶ್ಮೀರದ ಕಥುವಾದಲ್ಲಿ ಬಕರ್​ವಾಲ್ ಅಲೆಮಾರಿ ಸಮುದಾಯದ 8 ವರ್ಷದ ಬಾಲಕಿಯ ಮೇಲೆ ಸಾಮೂಹಿಕ ಅತ್ಯಾಚಾರ ನಡೆಸಿ ಕಲ್ಲಿನಿಂದ ಮುಖವನ್ನು ಜಜ್ಜಿ ಕೊಲೆ ಮಾಡಲಾಗಿತ್ತು. ಘಟನೆ ವಿರೋಧಿಸಿ ದೇಶಾದ್ಯಂತ ತೀವ್ರ ಪ್ರತಿಭಟನೆ ಆಕ್ರೋಶಗಳು ವ್ಯಕ್ತವಾಗಿದ್ದವು. ಆರೋಪಿಗಳಿಗೆ ಕಠಿಣ ಶಿಕ್ಷೆ ನೀಡಬೇಕೆಂಬ ಕೂಗು ಕೇಳಿಬಂದಿತ್ತು.

ಕಳೆದ ವರ್ಷ ಏಪ್ರಿಲ್​ 9ರಂದು ಆರೋಪಿಗಳ ವಿರುದ್ಧ ಚಾರ್ಜ್​ಶೀಟ್​ ದಾಖಲಿಸಿದ ಜಮ್ಮು ಮತ್ತು ಕಾಶ್ಮೀರದ ಅಪರಾಧ ಇಲಾಖೆ, ಬಾಲಕಿಯನ್ನು ದೇವಸ್ಥಾನದಲ್ಲಿ ಕೂಡಿಟ್ಟು ನಾಲ್ಕು ದಿವಸಗಳ ಕಾಲ ಆಕೆಗೆ ಡ್ರಗ್ಸ್​ ನೀಡಿ ನಿರಂತರವಾಗಿ ಅತ್ಯಾಚಾರ ನಡೆಸಿ, ಬಳಿಕ ಕೊಲೆ ಮಾಡಿ ಹತ್ತಿರದ ಅರಣ್ಯದಲ್ಲಿ ಆಕೆಯ ಶವವನ್ನು ಎಸೆಯಲಾಗಿತ್ತು ಎಂದು ಚಾರ್ಜ್​ಶೀಟ್​ನಲ್ಲಿ ತಿಳಿಸಿತ್ತು.

ಅತ್ಯಾಚಾರಕ್ಕೆ ಸಹಾಯ ಮಾಡಿದ ಹಾಗೂ ಸಾಕ್ಷ್ಯ ನಾಶಮಾಡಲು ಪ್ರಯತ್ನಿಸಿದವರನ್ನೂ ಸೇರಿ ಒಟ್ಟು 8 ಮಂದಿಯನ್ನು ಆರೋಪಿಗಳು ಎಂದು ಗುರುತಿಸಲಾಗಿತ್ತು. ಎಲ್ಲ ಆರೋಪಿಗಳ ವಿರುದ್ಧ ಐಪಿಸಿ ಸೆಕ್ಸನ್​ 302, 376, 201 ಮತ್ತು 120 ಬಿ ಪ್ರಕರಣಗಳನ್ನು ದಾಖಲಿಸಲಾಗಿತ್ತು. ಆದರೆ, ಎಂಟು ಮಂದಿ ಆರೋಪಿಗಳಲ್ಲಿ ಏಳು ಮಂದಿಯ ವಿರುದ್ಧ ಅತ್ಯಾಚಾರ ಹಾಗೂ ಕೊಲೆ ಪ್ರಕರಣವನ್ನು ದಾಖಲು ಮಾಡಲಾಗಿತ್ತು. ಉಳಿದ ಒಬ್ಬನನ್ನು ಬಾಲಾಪರಾಧಿ ಎಂಬ ಕಾರಣಕ್ಕೆ ಪ್ರಕರಣದಿಂದ ಕೈಬಿಡಲಾಗಿತ್ತು.

Kathua rape-murder case: Mastermind Sanji Ram, five others convicted by special court

ಸ್ಥಳೀಯ ಸುದ್ದಿ ಮತ್ತು ವೇಗದ ವಿತರಣೆಗಾಗಿ ನಮ್ಮ Android ಅಪ್ಲಿಕೇಶನ್ ಅನ್ನು ಡೌನ್ಲೋಡ್ ಮಾಡಿ