ಬೆಂಗಳೂರು; ದೇವನಹಳ್ಳಿ ಬಳಿಯಿರುವ ಕ್ಲಾರ್ಕ್ ಎಕ್ಸೋಟಿಕಾ ರೆಸಾರ್ಟ್ ನಲ್ಲಿ ಇಂದು ಬೆ.೧೧ಕ್ಕೆ ಕಾಂಗ್ರೆಸ್ ಚುನಾವಣಾ ಸಮಿತಿ ಸಭೆ.ಆರಂಭ
ಕೆಪಿಸಿಸಿ ಅಧ್ಯಕ್ಷ ಪರಂ ನೇತೃತ್ವದಲ್ಲಿ ನಡೆಯುತ್ತಿರುವ ಸಭೆಯಲ್ಲಿ ಸಮಿತಿಯ ೪೩ ಸದಸ್ಯರು ಪಾಲ್ಗೊಂಡಿದ್ದಾರೆ, ಮಲ್ಲಿಕಾರ್ಜುನ ಖರ್ಗೆ,ವೀರಪ್ಪ ಮೊಯ್ಲಿ, ಆಸ್ಕರ್ ಮಾರ್ಗರೇಟ್ ಆಳ್ವಾ, ಡಿಕೆಶಿ,ಬಿ.ಕೆ.ಹರಿಪ್ರಸಾದ್, ಹೆಚ್.ಸಿ.ಮಹದೇವಪ್ಪ,ರೋಷನ್ ಬೇಗ್, ರಾಮಲಿಂಗಾರೆಡ್ಡಿ ,ದಿನೇಶ್ ಗುಂಡೂರಾವ್, ಎಸ್.ಆರ್.ಪಾಟೀಲ್,ಜಾರ್ಜ್, ಹೆಚ್ಕೆಪಿ, ವೇಣು ಸೇರಿ ಎಲ್ಲ ಸದಸ್ಯರು ಭಾಗಿ… ಇಂದಿನ ಸಭೆಯಲ್ಲಿ ಹಾಲಿ ಶಾಸಕರ ಭವಿಷ್ಯ ನಿರ್ಧಾರ ೧೩೨ ಕ್ಷೇತ್ರಗಳ ಅಭ್ಯರ್ಥಿಗಳ ಪಟ್ಟಿ ರೆಡಿಯಾಗಲಿದೆ. ೨೦ ಹಾಲಿ ಶಾಸಕರಿಗೆ ಕೈ ಟಿಕೆಟ್ ತಪ್ಪುವ ಸಾಧ್ಯತೆಯೂ ಇದೆ. ಎಐಸಿಸಿಗೆ ಅಭ್ಯರ್ಥಿಗಳ ಪಟ್ಟಿ ರವಾನಿಸಲಿರುವ ಕೆಪಿಸಿಸಿ
ಮಾ.೨೮,೨೯ ರಂದು ದೆಹಲಿಯಲ್ಲಿ ನಡೆಯಲಿರುವ ಸ್ಕ್ರೀನಿಂಗ್ ಕಮಿಟಿ ಸಭೆಯಲ್ಲಿ ಟಿಕೆಟ್ ಫೈನಲ್ ಏಫ್ರಿಲ್ ಮೊದಲವಾರದಲ್ಲಿ ಅಭ್ಯರ್ಥಿಗಳ ಪಟ್ಟಿ ಬಿಡುಗಡೆ ಸಾಧ್ಯತೆ ಇದೆ. ಆದರೆ ಕೊನೆ ಘಳಿಗೆಯಲ್ಲಿ ಏ.2 ಕ್ಕೆ ಸಭೆ ಮುಂದೂಡಲಾಯಿತು