ಕರ್ನಾಟಕದಲ್ಲಿ ಇರೋದು ಯಾವ ಕಾಂಗ್ರೆಸ್ – ರಾಹುಲ್ ಗಾಂಧಿ ಬಗ್ಗೆ ಎಚ್ಡಿಡಿ ವಾಗ್ದಾಳಿ…

ನಗರದ ಖಾಸಗಿ ಹೋಟೆಲ್ ನಲ್ಲಿ ಮಾಜಿ ಪ್ರಧಾನಿ ಎಚ್. ಡಿ.ದೇವೇಗೌಡ ಅವರ ಪತ್ರಿಕಾಗೋಷ್ಠಿ

ಎ ಐ ಸಿಸಿ ಅಧ್ಯಕ್ಷ ರಾಹುಲ್ ಗಾಂಧಿ, ರಾಜ್ಯದಲ್ಲಿ ಚುನಾವಣಾ ಪ್ರಚಾರ ಮಾಡ್ತಾ ಇದಾರೆ. ಹಾಸನದಲ್ಲಿ ಜೆಡಿಎಸ್ ಅನ್ನು ಬಿ ಟೀಮ್ ಎಂದಿದ್ದಾರೆ. ನಿನ್ನೆ ಮಳವಳ್ಳಿ ಯಲ್ಲಿ ಜನತಾದಳ ಸಂಘ ಪರಿವಾರ ಎಂದಿದ್ದಾರೆ

ರಾಹುಲ್ ಗಾಂಧಿ ಬಗ್ಗೆ ಎಚ್ಡಿಡಿ ವಾಗ್ದಾಳಿ… ರಾಹುಲ್ ಅಣತಿಯನ್ನು ನಾನೂ ಪಾಲನೆ ಮಾಡ್ತೀನಿ ಅಂತ ಸೋನಿಯಾ ಹೇಳಿದ್ದಾರೆ. ಆದ್ರೆ, ನಾವೇನು ರಾಹುಲ್ ಮಾತು ಕೇಳಬೇಕಾಗಿಲ್ಲ

ದೇವೇಗೌಡ ಬಗ್ಗೆ ರಾಹುಲ್ ಏನು ಅಂದುಕೊಂಡಿದ್ದಾರೆ?
ಚೀಟಿಯಲ್ಲಿ ಬರೆದುಕೊಟ್ಟದ್ದನ್ನು ಓದೋರು.. ಹುಷಾರಾಗಿ ಮಾತನಾಡಲಿ.
ನನ್ನ ತಾಳ್ಮೆಗೂ ಮಿತಿ ಇದೆ. ಸ್ವೇಚ್ಚಾಚಾರವಾಗಿ ಮಾತನಾಡಿದ್ರೆ ಸಹಿಸಲ್ಲ

ಬಿಜೆಪಿಯನ್ನು ಯಾಕೆ ಬೆಂಬಲಿಸುತ್ತಿದ್ದೀರಿ ಎಂದು ಸ್ಪಷ್ಟಪಡಿಸಿ ಎಂದಿದ್ದಾರೆ ರಾಹುಲ್
ಇನ್ನೂ ಬೆಳೆಯಬೇಕಾದ ಯುವ ನಾಯಕ ಅವರು
ಇದನ್ನ ಮೊದಲು ಅರ್ಥ ಮಾಡಿಕೊಳ್ಳಬೇಕು
ಕರ್ನಾಟಕದಲ್ಲಿ ಇರೋದು ಯಾವ ಕಾಂಗ್ರೆಸ್ ಎಂದು ಅವರು ತಿಳಿದುಕೊಳ್ಳಬೇಕು

ಇಂದಿರಾಗಾಂಧಿ ಕಾಂಗ್ರೆಸ್, ಸೋನಿಯಾ ಗಾಂಧಿ ಕಾಂಗ್ರೆಸ್ ಅಥವಾ ಸಿದ್ದರಾಮಯ್ಯ ಕಾಂಗ್ರೆಸ್ ಅನ್ನೋದು ತಿಳಿಯಬೇಕು
ರಾಹುಲ್ ಅವರಿಗೆ ಪ್ರಬುದ್ಧತೆ ಇದ್ರೆ ಇದನ್ನ ಅರಿಯಬೇಕು

ನಾವು ರಾಹುಲ್ ಗಾಂಧಿ ಅಥವಾ ಮೋದಿಯವರ ಆದೇಶ ಪಾಲನೆ ಮಾಡಬೇಕಾಗಿಲ್ಲ ಇವರ ಮನೆ ಬಾಗಿಲಿಗೆ ನಾವು ಹೋಗಿಲ್ಲ

ನೀವು ಮಾತ್ರ ಸ್ವಚ್ಚನಾ? ಬನ್ನಿ ನಾನೂ ಪ್ರಧಾನಿ ಆಗಿದ್ದಾಗ ಏನ್ ಭ್ರಷ್ಟಾಚಾರ ಮಾಡಿದೀನಿ ಹೇಳಿ?
ಯಾರ ಹತ್ರ ಮಾತನಾಡುತ್ತಾರೆ? ಸಿದ್ದರಾಮಯ್ಯ ಅವರದ್ದು ಭ್ರಷ್ಟಾಚಾರದ ಬಂಡಲ್

ಸಿದ್ದರಾಮಯ್ಯ ಅವರನ್ನ ಕಾಂಗ್ರೆಸ್ ಗೆ ಕರೆತರಲು ಯಶಸ್ವಿಯಾದೆ ಎಂದು ಡಿಕೆಶಿ ಹೇಳ್ತಾರೆ
ಸಿದ್ದರಾಮಯ್ಯ ಕಾಂಗ್ರೆಸ್ ಗೆ ಹೋದಮೇಲೆ ಕಾಂಗ್ರೆಸ್ ಪರಿಶುದ್ದವಾಗೋಯ್ತು

ಖರ್ಗೆ ಅವರನ್ನು ತೆಗೆದು ಸಿದ್ದರಾಮಯ್ಯ ಅವರನ್ನ ಕೂರಿಸಿದ್ರಿ ,, ಅಲ್ಲಿಗೆ ಕಾಂಗ್ರೆಸ್ ತುಂಬಾ ಸ್ವಚ್ಚವಾಗೋಯ್ತು

ಡಿಕೆಶಿ ಹಾಗೂ ಸಿದ್ದರಾಮಯ್ಯ ವಿರುದ್ಧ ವ್ಯಂಗ್ಯವಾಡಿದ ದೇವೇಗೌಡ ಅವರು
ನೀವು ಜೆಡಿಎಸ್ ನಾಶ ಮಾಡಕ್ಕೆ ಎಂದಿಗೂ ಆಗಲ್ಲ. ನಮ್ಮಲಿದ್ದ ಏಳು ಶಾಸಕರನ್ನು ಕರೆದುಕೊಂಡ್ರೆ, ಅಧಿಕಾರಿಗಳಿಂದ ದರ್ಪ ಪ್ರದರ್ಶನ ಮಾಡಿಸಿದ್ರೆ? ಇದೆಲ್ಲಾ ಆಗುತ್ತಾ?

ರಾಹುಲ್ ಗಾಂಧಿ ರಾಜ್ಯಕ್ಕೆ ಮತ್ತೆ ಮತ್ತೆ ಬರ್ತಾರಂತೆ.. ಬರ್ಲಿ ಹತ್ತು ಬಾರಿ ಬರ್ಲಿ….
ಈಗ ಅವರಿಗೆ ಉಳಿದಿರೊದು ಕರ್ನಾಟಕ ಮಾತ್ರ. ಹೀಗಾಗಿ ಮತ್ತೆ ಮತ್ತೆ ಬರ್ತಾರೆ….

ಇವರು ಮಾತ್ರ ಸ್ವಚ್ಚ , ನನ್ ಮೈಯೆಲ್ಲ ಕೊಳಕು
ರಾಹುಲ್ ಗಾಂಧಿ ಸೋಪ್ ಕಳಿಸಲಿ, ಅದರಲ್ಲೇ ತೊಳೆದುಕೊಳ್ತಿನಿ ಎಂದು ರಾಹುಲ್ ಗಾಂಧಿ ವಿರುದ್ಧ ವಾಗ್ದಾಳಿ

ನನಗೇನು ಅವಮಾನ ಇಲ್ಲ. ನನ್ನ ಜನರಿಗಾಗಿ ನಾನು ಎಲ್ಲಿಗೆ ಬೇಕಿದ್ದರೂ ಹೋಗ್ತೀನಿ. ಯಾರನ್ನು ಬೇಕಿದ್ರೂ ಭೇಟಿ ಮಾಡ್ತೀನಿ.‌ ಇದರಲ್ಲಿ ತಪ್ಪು ಕಂಡು ಹಿಡಿದ್ರೆ ಏನ್ ಮಾಡ್ಲಿ

ಮುಂದಿನ ಲೋಕಸಭಾ ಚುನಾವಣೆಯಲ್ಲಿ ಸ್ಪರ್ಧೆ ಮಾಡಕ್ಕೆ ಆಸೆ ಇಲ್ಲ.. ಆರೋಗ್ಯ ಉತ್ತಮವಾಗಿದ್ದರೆ ಮಾತ್ರ ಸ್ಪರ್ಧೆ ಮಾಡ್ತೀನಿ ಅಷ್ಟೇ. ಚುನಾವಣೆ ಬೇರೆ ಇರೋದ್ರಿಂದ ಈಗ ಯೋಗ ಬೇರೆ ಬಿಟ್ಟಿದ್ದೀನಿ

ಕುಮಾರ ಸ್ವಾಮಿ ವ್ಯಂಗ್ಯವಾಗಿ ಹೇಳಿದ್ದಾರೆ. ನಾವೂ ಯಾರ ಜೊತೆ ಹೊಗುವ ಪ್ರಶ್ನೆಯೆ ಇಲ್ಲ.
ನಮ್ಮ ಸ್ವಂತ ಬಲದ ಮೇಲೆ ಹೋರಾಟ ಮಾಡ್ತೀವಿ. ಬಹುಮತ ಬರದಿದ್ರೆ ವಿರೋಧ ಪಕ್ಷದಲ್ಲಿ ಕೂರ್ತಿವಿ…..

ನಾನು ಬಿಜೆಪಿ ಪಕ್ಕ ನಿಂತು ಕೆಮ್ಮಿದ್ರೆ ಕಾಂಗ್ರೆಸ್ ಧೂಳಿಪಟ ವಾಗುತ್ತೆ ಎಂಬ ಹೇಳಿಕೆಗೆ ದೇವೇಗೌಡರ ಸ್ಪಷ್ಟನೆ…

ಪ್ರಜ್ವಲ್ ರೇವಣ್ಣ ಬಗ್ಗೆ ಬಿಟ್ಟು ಹೋಗಿದ್ದವರಿಗೆ ಬಹಳ ಕಾಳಜಿ ಇದೆ…
ಇದಕ್ಕೆ ಪಜ್ವಲ್ ರೇವಣ್ಣ ಉತ್ತರ ಕೊಟ್ಟಿದ್ದಾರೆ…
ನನ್ನ ಕುಟುಂಬ ,ಒಡೆಯಕ್ಕೆ ಆಗಲ್ಲ…

ನನ್ನ ಚಿಕ್ಕಪ್ಪ ಎಲ್ಲವನ್ನೂ ನಿರ್ಧಾರ ಮಾಡ್ತಾರೆ…
ನನ್ನ ಚಿಕ್ಕಪ್ಪ ಹೇಳಿದ ಹಾಗೇ ನಾನು ಕೇಳುತ್ತೀನಿ ಅಂತ ಹೇಳಿದ್ದಾನೆ
ಚಿಕ್ಕಪ್ಪ ಕುಮಾರಸ್ವಾಮಿ ಟಿಕೆಟ್ ವಿಚಾರವಾಗಿ ತೀರ್ಮಾನ ಮಾಡ್ತಾರೆ…

ರಾಜರಾಜೇಶ್ವರಿ ನಗರ ಟಿಕೆಟ್ ವಿಚಾರವಾಗಿ ಕುಮಾರಸ್ವಾಮಿ ನಿರ್ಧಾರ ಮಾಡುತ್ತಾರೆ…

ರೇವಣ್ಣ ಅಣ್ಣ ಆಗಿರಬಹುದು, ಅದ್ರೆ ರಾಜಕೀಯದಲ್ಲಿ ಕುಮಾರಸ್ವಾಮಿ ಸೀನಿಯರ್…
ಅವರು ಪಕ್ಷ ಮತ್ತು ಕುಟುಂಬವನ್ನು ಮುನ್ನಡೆಸುತ್ತಾರೆ…

ಸಿ ವೋಟರ್ಸ್ ಸಮೀಕ್ಷೆ ವಿಚಾರ
ಸಮೀಕ್ಷೆ ಬಗ್ಗೆ ನಾನು ಮಾತನಾಡಲ್ಲ
ನನ್ನ ಸಮೀಕ್ಷೆಯೇ ಬೇರೆ ಇದೆ ಎಂದ ಮಾಜಿ ಪ್ರಧಾನಿ ದೇವೇಗೌಡ ಅವರು ಹೇಳಿದರು

ಸ್ಥಳೀಯ ಸುದ್ದಿ ಮತ್ತು ವೇಗದ ವಿತರಣೆಗಾಗಿ ನಮ್ಮ Android ಅಪ್ಲಿಕೇಶನ್ ಅನ್ನು ಡೌನ್ಲೋಡ್ ಮಾಡಿ