ನವದೆಹಲಿ: ನರೇಂದ್ರ ಮೋದಿ ಅವರು ಎರಡನೇ ಅವಧಿಗೆ ಪ್ರಧಾನಿಯಾಗಿ ನೆನ್ನೆ ಪ್ರಮಾಣವಚನ ಸ್ವೀಕರಿಸಿದ್ದಾರೆ. ಅವರೊಂದಿಗೆ 57 ಮಂದಿ ಸಚಿವರು ಪ್ರಮಾಣವಚನ ಸ್ವೀಕರಿಸಿದ್ದರು. ಇಂದು ನಡೆದ ಮೊದಲ ಸಚಿವ ಸಂಪುಟ ಸಭೆಯ ನಂತರ ನೂತನ ಸಚಿವರಿಗೆ ಖಾತೆ ಹಂಚಿಕೆ ಮಾಡಲಾಗಿದೆ.
ಅಮಿತ್ ಶಾ ಅವರಿಗೆ ಗೃಹ ಖಾತೆಯನ್ನು ನೀಡಲಾಗಿದೆ. ರಾಜನಾಥ್ ಸಿಂಗ್ ಅವರಿಗೆ ರಕ್ಷಣಾ ಖಾತೆಯ ಜವಾಬ್ದಾರಿ ವಹಿಸಲಾಗಿದೆ. ನಿರ್ಮಲಾ ಸೀತಾರಾಮನ್ಗೆ ಹಣಕಾಸು, ಪಿಯೂಷ್ ಗೋಯೆಲ್ ರೈಲ್ವೆ, ಎಸ್. ಜೈಶಂಕರ್ ವಿದೇಶಾಂಗ ಇಲಾಖೆಯ ಜವಾಬ್ದಾರಿ ನೀಡಲಾಗಿದೆ.
ಯಾರಿಗೆ ಯಾವ ಖಾತೆ:
- ಅಮಿತ್ ಷಾ- ಗೃಹ ಇಲಾಖೆ
- ರಾಜ್ನಾಥ್ ಸಿಂಗ್ – ರಕ್ಷಣಾ ಇಲಾಖೆ, ಕಾರ್ಪೊರೇಟ್ ಅಫೇರ್ಸ್
- ನಿರ್ಮಲಾ ಸೀತಾರಾಮನ್- ಹಣಕಾಸು ಇಲಾಖೆ
- ಪಿಯೂಷ್ ಗೋಯಲ್- ರೈಲ್ವೇ ಇಲಾಖೆ, ವಾಣಿಜ್ಯ ಮತ್ತು ಕೈಗಾರಿಕೆ
- ಎಸ್.ಜೈಶಂಕರ್- ವಿದೇಶಾಂಗ ಇಲಾಖೆ
- ಡಿ.ವಿ.ಸದಾನಂದಗೌಡ- ರಾಸಾಯನಿಕ, ರಸಗೊಬ್ಬರ ಇಲಾಖೆ
- ಡಾ.ಹರ್ಷವರ್ಧನ್- ಆರೋಗ್ಯ ಇಲಾಖೆ
- ಪ್ರಕಾಶ್ ಜಾವ್ಡೇಕರ್- ಪರಿಸರ ಇಲಾಖೆ
- ನಿತಿನ್ ಗಡ್ಕರಿ- ಭೂಸಾರಿಗೆ, ಹೆದ್ದಾರಿ
- ಸದಾನಂದ ಗೌಡ- ರಾಸಾಯನಿಕ ಮತ್ತು ರಸಗೊಬ್ಬರ
- ರಾಮ್ ವಿಲಾಸ್ ಪಾಸ್ವಾನ್ – ಆಹಾರ ಮತ್ತು ನಾಗರಿಕ ಸರಬರಾಜು, ಗ್ರಾಹಕ ವ್ಯವಹಾರಗಳು
- ನರೇಂದ್ರ ಸಿಂಗ್ ತೋಮರ್ – ಕೃಷಿ, ರೈತ ಕಲ್ಯಾಣ, ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್
- ಥಾವರ್ ಚಾಂದ್ ಗೆಹ್ಲೋಟ್- ಸಾಮಾಜಿಕ ನ್ಯಾಯ ಮತ್ತು ಸಬಲೀಕರಣ
- ಎಸ್.ಜೈಶಂಕರ್- ವಿದೇಶಾಂಗ ಇಲಾಖೆ
- ರಮೇಶ್ ಪೋಕ್ರಿಯಾಲ್ – ಮಾನವ ಸಂಪನ್ಮೂಲ ಅಭಿವೃದ್ಧಿ
- ಅರ್ಜುನ್ ಮುಂಡಾ – ಬುಡಕಟ್ಟು ವ್ಯವಹಾರಗಳ ಖಾತೆಹರ್ಸಿಮ್ರತ್ ಕೌರ್ ಬಾದಲ್ – ಆಹಾರ ಸಂಸ್ಕರಣ
- ರವಿಶಂಕರ್ ಪ್ರಸಾದ್ – ಕಾನೂನು, ಸಂವಹನ, ಐಟಿ
- ಸ್ಮೃತಿ ಇರಾನಿ – ಮಹಿಳಾ ಮತ್ತು ಮಕ್ಕಳ ಕಲ್ಯಾಣ, ಟೆಕ್ಸ್ಟೈಲ್ಸ್
- ಹರ್ಷವರ್ಧನ್ – ಆರೋಗ್ಯ ಮತ್ತು ಕುಟುಂಬ ಕಲ್ಯಾಣ, ವಿಜ್ಞಾನ ಮತ್ತು ತಂತ್ರಜ್ಞಾನ, ಭೂವಿಜ್ಞಾನ
- ಪ್ರಕಾಶ್ ಜಾವ್ಡೇಕರ್ – ಪರಿಸರ, ಅರಣ್ಯ, ಹವಾಮಾನ ಮತ್ತು ವಾರ್ತಾ ಇಲಾಖೆ
- ಧರ್ಮೇಂದ್ರ ಪ್ರಧಾನ್ – ಪೆಟ್ರೋಲಿಯಂ ಮತ್ತು ನೈಸರ್ಗಿಕ ಅನಿಲ, ಉಕ್ಕು
- ಮುಖ್ತಾರ್ ಅಬ್ಬಾಸ್ ನಖ್ವಿ – ಅಲ್ಪಸಂಖ್ಯಾತ ವ್ಯವಹಾರಗಳು
- ಪ್ರಹ್ಲಾದ್ ಜೋಶಿ – ಸಂಸದೀಯ ವ್ಯವಹರಾಗಳು, ಕಲ್ಲಿದ್ದಲು ಮತ್ತು ಗಣಿಗಾರಿಕೆ
- ಮಹೇಂದ್ರನಾಥ್ ಪಾಂಡೆ – ಕೌಶಲಾಭಿವೃದ್ಧಿ, ಉದ್ಯಮಶೀಲತೆ
- ಅರವಿಂದ್ ಗಣಪತ್ ಸಾವಂತ್ – ಬೃಹತ್ ಕೈಗಾರಿಕೆ ಮತ್ತು ಸಾರ್ವಜನಿಕ ಉದ್ದಿಮೆ
- ಗಿರಿರಾಜ್ ಸಿಂಗ್ – ಪಶುಪಾಲನೆ, ಹೈನುಗಾರಿಕೆ, ಮೀನುಗಾರಿಕೆ
- ಗಜೇಂದ್ರ ಸಿಂಗ್ ಶೇಖಾವತ್ – ಜಲಶಕ್ತಿ
- ಫಗನ್ ಸಿಂಗ್ ಕುಲಸ್ತೆ – ಉಕ್ಕಿನ ಇಲಾಖೆ ರಾಜ್ಯ ಖಾತೆ
- ಅಶ್ವಿನ್ ಕುಮಾರ್ ಚುಬೆ – ಆರೋಗ್ಯ ಮತ್ತು ಕುಟುಂಬ ಕಲ್ಯಾಣ (ರಾಜ್ಯ ಖಾತೆ)
- ಅರ್ಜುನ್ ರಾಮ್ ಮೇಘವಾಲ್ – ಸಂಸದೀಯ ವ್ಯವಹಾರಗಳು, ಬೃಹತ್ ಕೈಗಾರಿಕೆ, ಸಾರ್ವಜನಿಕ ಉದ್ದಿಮೆ (ರಾಜ್ಯ ಖಾತೆ)
- ವಿ.ಕೆ.ಸಿಂಗ್ – ಭೂಸಾರಿಗೆ ಮತ್ತು ಹೆದ್ದಾರಿ (ರಾಜ್ಯ ಖಾತೆ)
- ಕೃಷ್ಣ ಪಾಲ್ – ಸಾಮಾಜಿಕ ನ್ಯಾಯ ಮತ್ತು ಸಬಲೀಕರಣ (ರಾಜ್ಯ ಖಾತೆ)
- ದಾನ್ವೆ ರಾವ್ ಸಾಹೇಬ್ ದಾದಾರಾವ್ – ಗ್ರಾಹಕ ಸೇವೆ ಮತ್ತು ಆಹಾರ ಮತ್ತು ನಾಗರಿಕ ಸೌಲಭ್ಯ (ರಾಜ್ಯ ಖಾತೆ)
- ಜಿ.ಕೃಷ್ಣ ರೆಡ್ಡಿ – ಗೃಹ (ರಾಜ್ಯ ಖಾತೆ)
- ಪುರುಷೋತ್ತಮ್ ರೂಪಾಲ್ – ಕೃಷಿ ಮತ್ತು ರೈತ ಕಲ್ಯಾಣ (ರಾಜ್ಯ ಖಾತೆ)
- ರಾಮ್ ದಾಸ್ ಅಠಾವಳೆ – ಸಾಮಾಜಿಕ ನ್ಯಾಯ ಮತ್ತು ಸಬಲೀಕರಣ (ರಾಜ್ಯ ಖಾತೆ)
- ಸಾಧ್ವಿ ನಿರಂಜನ್ ಜ್ಯೋತಿ – ಗ್ರಾಮೀಣಾಭಿವೃದ್ಧಿ (ರಾಜ್ಯ ಖಾತೆ)
- ಬಾಬುಲ್ ಸುಪ್ರಿಯೋ – ಪರಿಸರ, ಅರಣ್ಯ ಮತ್ತು ಹವಾಮಾನ (ರಾಜ್ಯ ಖಾತೆ)
- ಸಂಜೀವ್ ಕುಮಾರ್ ಬಾಲ್ಯಾನ್ – ಪಶುಸಂಗೋಪನೆ, ಹೈನುಗಾರಿಕೆ, ಮೀನುಗಾರಿಕೆ (ರಾಜ್ಯಖಾತೆ)
- ಧೋತ್ರೆ ಸಂಜಯ್ ಶ್ಯಾಮ್ ರಾಮ್ – ಮಾನವ ಸಂಪನ್ಮೂಲಾಭಿವೃದ್ಧಿ, ಸಂವಹನ, ಐಟಿ, (ರಾಜ್ಯ ಖಾತೆ)
- ಅನುರಾಗ್ ಸಿಂಗ್ ಠಾಕೂರ್ – ಹಣಕಾಸು, ಕಾರ್ಪೊರೇಟ್ ವ್ಯವಹರಾಗಳು (ರಾಜ್ಯ ಖಾತೆ)
- ಸುರೇಶ್ ಅಂಗಡಿ – ರೈಲ್ವೇ (ರಾಜ್ಯ ಖಾತೆ)
- ನಿತ್ಯಾನಂದ್ ರಾಯ್ – ಗೃಹ (ರಾಜ್ಯ ಖಾತೆ)
- ರತನ್ ಲಾಲ್ ಕಠಾರಿಯಾ – ಜಲಶಕ್ತಿ, ಸಾಮಾಜಿಕ ನ್ಯಾಯ ಮತ್ತು ಸಬಲೀಕರಣ (ರಾಜ್ಯ ಖಾತೆ)
- ವಿ.ಮುರಳೀಧರನ್ – ವಿದೇಶಾಂಗ ವ್ಯವಹಾರಗಳು ಮತ್ತು ಸಂಸದೀಯ ವ್ಯವಹಾರಗಳು (ರಾಜ್ಯ ಖಾತೆ)
- ರೇಣುಕಾ ಸಿಂಗ್ ಸರೂಟಾ – ಬುಡಕಟ್ಟು ವ್ಯವಹಾರಗಳು (ರಾಜ್ಯ ಖಾತೆ)
- ಸೋಮ್ ಪ್ರಕಾಶ್ – ವಾಣಿಜ್ಯ ಮತ್ತು ಕೈಗಾರಿಕೆ (ರಾಜ್ಯ ಖಾತೆ)
- ರಾಮೇಶ್ವರ್ ಥಾಲಿ – ಆಹಾರ ಸಂಸ್ಕರಣೆ (ರಾಜ್ಯ ಖಾತೆ)
- ಪ್ರತಾಪ ಚಂದ್ರ ಸಾರಂಗಿ – ಸಣ್ಣ, ಅತಿಸಣ್ಣ ಮತ್ತು ಮಧ್ಯಮ ಕೈಗಾರಿಕೆ, ಪಶುಸಂಗೋಪನೆ,
- ಹೈನುಗಾರಿಕೆ, ಮೀನುಗಾರಿಕೆ (ರಾಜ್ಯ ಖಾತೆ)
- ಕೈಲಾಶ್ ಚೌಧರಿ – ಕೃಷಿ ಮತ್ತು ರೈತೋಪಯೋಗಿ (ರಾಜ್ಯ ಖಾತೆ)
- ದೇಬೊಶ್ರೀ ಚೌಧರಿ – ಮಹಿಳಾ ಮತ್ತು ಮಕ್ಕಳ ಕಲ್ಯಾಣ (ರಾಜ್ಯ ಖಾತೆ)
- ಸಂತೋಷ್ ಗಂಗ್ವಾರ್ – ಕಾರ್ಮಿಕ ಮತ್ತು ಉದ್ಯೋಗ (ಸ್ವತಂತ್ರ ಖಾತೆ)
- ರಾವ್ ಇಂದ್ರಜಿತ್ ಸಿಂಗ್ – ಸಂಖ್ಯಾಶಾಸ್ತ್ರ, ಯೋಜನಾ ಅನುಷ್ಠಾನ (ಸ್ವತಂತ್ರ)
- ಶ್ರೀಪಾದ್ ನಾಯ್ಕ್ – ಆಯುರ್ವೇದ, ಯೋಗ, ನ್ಯಾಚುರೋಪತಿ, ಆಯುಷ್ (ಸ್ವತಂತ್ರ), ರಕ್ಷಣಾ ಇಲಾಖೆ (ರಾಜ್ಯ)
- ಡಾ.ಜಿತೇಂದ್ರ ಸಿಂಗ್ – ಈಶಾನ್ಯ ಪ್ರದೇಶ (ಸ್ವತಂತ್ರ), ಪ್ರಧಾನ ಮಂತ್ರಿಗಳ ಸಚಿವಾಲಯ, ಸಿಬ್ಬಂದಿ ಮತ್ತು ಸಾರ್ವಜನಿಕ ಕುಂದುಕೊರತೆಗಳ ಇಲಾಖೆ (ರಾಜ್ಯ ಖಾತೆ)
- ಕಿರಣ್ ರಿಜಿಜು – ಯುವಜನ ಸಬಲೀಕರಣ ಮತ್ತು ಕ್ರೀಡೆ (ಸ್ವತಂತ್ರ), ಅಲ್ಪಸಂಖ್ಯಾತ ವ್ಯವಹಾರಗಳು (ರಾಜ್ಯ)
- ಪ್ರಹ್ಲಾದ್ ಪಟೇಲ್ – ಸಂಸ್ಕೃತಿ ಇಲಾಖೆ, ಪ್ರವಾಸೋದ್ಯಮ (ಸ್ವತಂತ್ರ, ರಾಜ್ಯ)
- ರಾಜ್ ಕುಮಾರ್ – ಇಂಧನ (ಸ್ವತಂತ್ರ)
- ಹರ್ದೀಪ್ ಸಿಂಗ್ ಪುರಿ – ವಸತಿ ಮತ್ತು ನಗರಾಭಿವೃದ್ಧಿ (ಸ್ವತಂತ್ರ), ವಾಣಿಜ್ಯ ಮತ್ತು ಕೈಗಾರಿಕೆ (ರಾಜ್ಯ ಖಾತೆ)
- ಮನ್ ಸುಖ್ ಲಾಲ್ ಮಾಂಡವ್ಯ – ಶಿಪ್ಪಿಂಗ್ (ಸ್ವತಂತ್ರ), ರಾಸಾಯನಿಕ ಮತ್ತು ರಸಗೊಬ್ಬರ (ರಾಜ್ಯ ಖಾತೆ)