ವಿರಾಟ್ ಕೊಹ್ಲಿ ನೇತೃತ್ವದ ಟೀಂ ಇಂಡಿಯಾ ವಿಶ್ವಕಪ್ಗೂ ಮುನ್ನವೇ ಭಾರೀ ಮುಖ ಭಂಗ ಅನುಭವಿಸಿದೆ. ವಿಶ್ವ ಯುದ್ದ ಆಡಲು ಆಂಗ್ಲರ ನಾಡಿಗೆ ತೆರೆಳುವ ಬಡಾಯಿ ಬಿಟ್ಟಿದ್ದ ವಿರಾಟ್ ಕೊಹ್ಲಿ ವಿಶ್ವ ಕದನಕ್ಕೂ ಮುನ್ನ ನಡೆದ ಅಭ್ಯಾಸ ಪಂದ್ಯದಲ್ಲಿ ನ್ಯೂಜಿಲೆಂಡ್ ವಿರುದ್ಧ ಮುಗ್ಗರಿಸಿ ಬಿದ್ದಿದೆ.
ಕಳೆದ ನಾಲ್ಕು ವರ್ಷದಿಂದ ಏಕದಿನ ಫಾರ್ಮೆಟ್ನಲ್ಲಿ ಇನ್ನಿಲ್ಲದ ಸಾಧನೆ ಮಾಡಿರುವ ಕೊಹ್ಲಿ ಸೈನ್ಯ ಈ ಬಾರಿ ವಿಶ್ವಕಪ್ ಎತ್ತಿ ಹಿಡಿಯುವ ಫೇವರಿಟ್ ತಂಡ ಎನಿಸಿದೆ. ಹೀಗಾಗಿ ಟೀಂ ಇಂಡಿಯಾ ಅಭಿಮಾನಿಗಳು ಈ ಬಾರಿ ವಿಶ್ವಕಪ್ನ್ನ ಕೊಹ್ಲಿ ಗೆದ್ದೆ ತೀರುತ್ತೆ ಅಂತಾ ನಂಬಿದ್ದಾರೆ.
ಇದಕ್ಕೆ ತಕ್ಕಂತೆ ಕ್ಯಾಪ್ಟನ್ ವಿರಾಟ್ ಕೊಹ್ಲಿ ಕೂಡ ಆಂಗ್ಲರ ನಾಡಿಗೆ ತೆರೆಳುವ ಮುನ್ನ ಬಡಾಯಿ ಬಿಟ್ಟಿದ್ರು. ಕೊಹ್ಲಿ ಏನು ಮಾತಾನಾಡಿದ್ರು ಏನು ಅನ್ನೊದನ್ನ ನೀವೆ ನೋಡಿ.
ಕಿವೀಸ್ ವಿರುದ್ಧ ಕಿವಿ ಹಿಂಡಿಸಿಕೊಂಡ ಟೀಂ ಇಂಡಿಯಾ
ಹೌದು ಮೊನ್ನೆ ಓವೆಲ್ ಅಂಗಳದಲ್ಲಿ ನಡೆದ ನ್ಯೂಜಿಲೆಂಡ್ ವಿರುದ್ಧದ ಅಭ್ಯಾಸ ಪಂದ್ಯದಲ್ಲಿ ಹೀನಾಯವಾಗಿ 6 ವಿಕೆಟ್ಗಳಿಂದ ಸೋಲು ಕಂಡಿತ್ತು. ಅಭ್ಯಾಸ ಪಂದ್ಯದಲ್ಲಿ ಕೊಹ್ಲಿ ಸೈನ್ಯ ಆಡಿದನ್ನ ನೋಡಿ ಇದೇನಾ ವಿಶ್ವಕಪ್ ತಯಾರಿ ಅಂತಾ ಅಭಿಮಾನಿಗಳು ಮಾತನಾಡಿಕೊಂಡಿದ್ರು. ಮೊದಲೇ ಇಂಜುರಿ ಸಮಸ್ಯೆಗೆ ಗುರಿಯಾಗಿರುವ ಟೀಂ ಇಂಡಿಯಾಕ್ಕೆ ಅಭ್ಯಾಸ ಪಂದ್ಯದ ಸೋಲು ಗಾಯದ ಮೇಲೆ ಬರೆ ಎಳೆದಂತಾಗಿದೆ.
ತಂಡದ ಆಟಗಾರರಿಗೆ ಕ್ಯಾಪ್ಟನ್ ಕೊಹ್ಲಿ ವಾರ್ನಿಂಗ್
ಕಿವೀಸ್ನಿಂದ ಕಿವಿ ಹಿಂಡಿಸಿಕೊಂಡಿರುವ ಕ್ಯಾಪ್ಟನ್ ಕೊಹ್ಲಿ ಇದೀಗ ತಂಡದ ಆಟಗಾರರ ಮೇಲೆ ಗರಂ ಆಗಿದ್ದಾರೆ. ಮೊದಲ ಪಂದ್ಯದಲ್ಲಿ ಸೋಲನ್ನ ಅರಗಿಸಿಕೊಳ್ಳಲಾಗದೇ ಕೊಹ್ಲಿ ತಂಡದ ಆಟಗಾರರಿಗೆ ವಾರ್ನಿಂಗ್ ಕೊಟ್ಟಿದ್ದಾರೆ.ಅಭ್ಯಾಸ ಪಂದ್ಯದಲ್ಲಿ ತಂಡದ ಆಟಗಾರರ ಮೇಲೆ ಎಕ್ಸ್ಪೆರಿಮೆಂಟ್ ನಡೆಸುತ್ತಿರುವ ವಿರಾಟ್ ಅಭ್ಯಾಸ ಪಂದ್ಯದಲ್ಲಿ ಆಡದಿದ್ದರೇ ತಂಡದ ಪ್ಲೇಯಿಂಗ್ ಇಲೆವೆನ್ನಿಂದಲೇ ಗೇಟ್ ಪಾಸ್ ಕೊಡುವ ಎಚ್ಚರಿಕೆ ಕೊಟ್ಟಿದ್ದಾರೆ. ಬ್ಯಾಟಿಂಗ್ ಮಾಡಲು ಕಷ್ಟವಾಗಿತ್ತು.
ತಂಡದ ಆಟಗಾರರು ಪ್ರದರ್ಶನ ಮಟ್ಟ ಹೆಚ್ಚಿಸಿಕೊಳ್ಳಬೇಕಿದೆ. ಟಾಪ್ ಆರ್ಡರ್ ಬ್ಯಾಟ್ಸ್ಮನ್ಗಳಿಂದ ನಿರೀಕ್ಷಿತ ರನ್ ಹರಿದು ಬರ್ಲಿಲ್ಲ . ಹೀಗಾಗಿ ಒಂದು ಸಣ್ಣ ತಪ್ಪು ಫಲಿತಾಂಶದ ಮೇಲೆ ಪರಿಣಾಮ ಬೀರಲಿದೆ. ಮೊದಲ ಇನ್ನಿಂಗ್ಸ್ ಬ್ಯಾಟಿಂಗ್ ಮಾಡಲು ಕಷ್ಟವಾಗಿತ್ತು. ಆದರೆ 2ನೇ ಇನ್ನಿಂಗ್ಸ್ ವೇಳೆ ಪಿಚ್ ಬದಲಾಗಿತ್ತು. ಕಠಿಣ ಸಂದರ್ಭದಲ್ಲಿ ರವೀಂದ್ರ ಜಡೇಜಾ ಅದ್ಬುತ ಇನ್ನಿಂಗ್ಸ್ ಕಟ್ಟಿದರು. ಪ್ರತಿಷ್ಠಿತ ಟೂರ್ನಿಗಳಲ್ಲಿ ಕೆಳ ಕ್ರಮಾಂಕವೂ ಕೂಡ ನೆರವು ನೀಡಬೇಕು. ಇದೀಗ ಜಡೇಜಾ ಜವಾಬ್ದಾರಿ ನಿರ್ವಹಿಸಿದ್ದಾರೆ. ನ್ಯೂಜಿಲೆಂಡ್ ವಿರುದ್ದದ ಸೋಲಿನ ಕುರಿತು ಕ್ಯಾಪ್ಟನ್ ಕೊಹ್ಲಿ ಹೀಗೆ ಹೇಳಿದ್ದಾರೆ.
ಜಡ್ಡುನ ಹಾಡಿ ಹೊಗಳಿದ ಕ್ಯಾಪ್ಟನ್ ವಿರಾಟ್
ಕೇನ್ ವಿಲಿಯಮ್ಸನ್ ಪಡೆ ವಿರುದ್ಧ ಸೋತ ಹೊರತಾಗಿಯೂ ಕ್ಯಾಪ್ಟನ ವಿರಾಟ್ ಕೊಹ್ಲಿ ಅರ್ಧ ಶತಕ ಬಾರಿಸಿದ ರವೀಂದ್ರ ಜಡೇಜಾ ತಂಡದ ವಿಕೆಟ್ ಕೀಪರ್ ಎಂ.ಎಸ್.ಧೋನಿ ಹಾಗೂ ಹಾರ್ದಿಕ್ ಪಾಂಡ್ಯ ಅವರನ್ನ ಹಾಡಿ ಹೊಗಳಿದ್ದಾರೆ.
ಬಾಂಗ್ಲ ವಿರುದ್ಧ ಗೆಲ್ಲಬೇಕು ಟೀಂ ಇಂಡಿಯಾ
ಕಾರ್ಡಿಫ್ನಲ್ಲಿ ನಡೆಯಲಿರುವ ಎರಡನೇ ಅಭ್ಯಾಸ ಪಂದ್ಯದಲ್ಲಿ ಟೀಂ ಇಂಡಿಯಾ ಬಾಂಗ್ಲಾದೇಶ ತಂಡವನ್ನ ಎದುರಿಸಲಿದೆ. ಎರಡನೇ ಅಭ್ಯಾಸ ಪಂದ್ಯದಲ್ಲಿ ಟೀಂ ಇಂಡಿಯಾ ಗೆಲ್ಲಲ್ಲೇಬೇಕಾದ ಅನಿವಾರ್ಯತೆಯನ್ನ ಎದುರಿಸಿದೆ. ಇದಾದ ನಂತರ ಜೂನ್ 5ರಂದು ದಕ್ಷೀಣ ಆಫ್ರಿಕಾ ವಿರುದ್ಧ ಮೊದಲ ಅಭ್ಯಾಸ ಪಂದ್ಯವನ್ನ ಆಡಲಿದೆ.
ಒಟ್ಟಾರೆ ವಿಶ್ವಕಪ್ಗೂ ಮುನ್ನ ಕೊಹ್ಲಿ ಪಡೆ ತನ್ನ ತಾಕತ್ತು ಏನೆಂಬುದನ್ನ ಅರಿತುಕೊಂಡಿದ್ದು ಆಗಿರುವ ತಪ್ಪುಗಳನ್ನ ಸರಿಪಡಿಸಿಕೊಂಡು ಸಜ್ಜಾಗಬೇಕಿದೆ.