ವಿಶ್ವಕಪ್ನಲ್ಲಿ ಇವರೇ ಫೇವರಿಟ್ ಬ್ಯಾಟ್ಸಮನ್ಸ್ : ಈ ನಾಲ್ಕು ಬ್ಯಾಟ್ಸ್ಮನ್ಗಳೇ ಮೇಲೆಯೇ ಎಲ್ಲರ ಕಣ್ಣು

ಈ ಬಾರಿಯ ವಿಶ್ವಕಪ್ ಬ್ಯಾಟ್ಸ್ಮನ್ಗಳ ಟೂರ್ನಿಯಾಗಿದೆ. ಆಂಗ್ಲರ ನಾಡಲ್ಲಿ ನಡೆಯಲಿರುವ ವಿಶ್ವಕಪ್ ಮಹಾ ಸಂಗ್ರಾಮ ಬ್ಯಾಟ್ಸ್ಮನ್ಗಳ ಪಾಲಿಗೆ ಸ್ವರ್ಗ ಆಗಿದೆ. ಅದರಲ್ಲೂ ಈ ನಾಲ್ಕು ಬ್ಯಾಟ್ಸ್ಮನ್ಗಳ ಮೇಲೆ ಎಲ್ಲರ ಕಣ್ಣಿದೆ. ಹಾಗಾದ್ರೆ ಈ ಬ್ಯಾಟ್ಸ್ಮನ್ಗಳು ಯಾರು ಅನ್ನೋದನ್ನ ನೋಡೋಣ ಬನ್ನಿ.

ನಂ.1 ಸ್ಟೀವ್ ಸ್ಮಿತ್
ಸ್ಟೀವ್ ಸ್ಮಿತ್ ಆಸ್ಟ್ರೇಲಿಯಾ ತಂಡದ Consistent Performer.. ವರ್ಷದ ಹಿಂದೆ Ball Tampering ಮಾಡಿ ಕ್ರಿಕೆಟ್ ಆಸ್ಟ್ರೇಲಿಯಾದಿಂದ ಒಂದು ವರ್ಷಗಳ ಕಾಲ ಬ್ಯಾನ್ ಆಗಿದ್ರು. ಇದೀಗ ಶಿಕ್ಷೆಯನ್ನೆಲ್ಲ ಅನುಭವಿಸಿ ವಿಶ್ವಕಪ್ ಟೂರ್ನಿ ಮೂಲಕ ತಂಡಕ್ಕೆ ಕಮ್ ಬ್ಯಾಕ್ ಮಾಡಿದ್ದಾರೆ.

ಇದುವರೆಗೂ ಎರಡು ವಿಶ್ವಕಪ್ ಆಡಿರುವ ಈ ಆಸಿಸ್ ಮಾಜಿ ನಾಯಕ 14 ಪಂದ್ಯಗಳನ್ನಾಡಿ 56.55 ರವರೇಜ್ನೊಂದಿಗೆ ನಾಲ್ಕು ಅರ್ಧ ಶತಕ ಹಾಗೂ ಒಂದು ಶತಕ ಬಾರಿಸಿ 455 ರನ್ ಗಳಿಸಿದ್ದಾರೆ. ಕಳೆದ ವಿಶ್ವಕಪ್ನಲ್ಲಿ ನಿಣಾ್ಯಕ ಪಾತ್ರವಹಿಸಿದ್ದ ಸ್ಮಿತ್ ಈ ಬಾರಿಯ ವಿಶ್ವಕಪ್ನಲ್ಲಿ ತಮ್ಮನ್ನ ಟೀಕಿಸುವವರಿಗೆ ಬ್ಯಾಟ್ ಮೂಲಕ ಉತ್ತರ ಕೊಡಲು ರೆಡಿಯಾಗಿದ್ದಾರೆ. ಸ್ಮಿತ್ ಮೊನ್ನೆ ಆಂಗ್ಲರ ವಿರುದ್ಧದ ಅಭ್ಯಾಸ ಪಂದ್ಯದಲ್ಲಿ ಶತಕ ಬಾರಿಸಿದ್ದೆ ಎಲ್ಲ ತಂಡಗಳಿಗೂ ವಾರ್ನಿಂಗ್ ಆಗಿದೆ.

ನಂ.2 ವಿರಾಟ್ ಕೊಹ್ಲಿ
ಕ್ಯಾಪ್ಟನ್ ವಿರಾಟ್ ಕೊಹ್ಲಿ ವಿಶ್ವದ ಬೆಸ್ಟ್ ಬ್ಯಾಟ್ಸ್ಮನ್. ಕಳೆದ ನಾಲ್ಕು ವರ್ಷಗಳಲ್ಲಿ ವಿಶ್ವದ ಎಲ್ಲ ಮೈದಾನಗಳಲ್ಲೂ ಕೊಹ್ಲಿ ರನ್ ಶಿಖರವನ್ನ ಕಟ್ಟಿ ದಿಗ್ಗಜರ ದಾಖಲೆಗಳನ್ನೆಲ್ಲ ಪೀಸ್ ಪೀಸ್ ಮಾಡಿ ಟೆಸ್ಟ್ ಮತ್ತು ಏಕದಿನ ಱಂಕಿಂಗ್ನಲ್ಲಿ ನಂ.1 ಪಟ್ಟ ಅಲಂಕರಿಸಿದ್ದಾರೆ.

ವಿರಾಟ್ ಕೊಹ್ಲಿಗೆ ಇದು ಮೂರನೇ ವಿಶ್ವಕಪ್ ಇದಾಗಿದ್ದು ಇದುವರೆಗೂ ಮಹಾ ಸಂಗ್ರಾಮದಲ್ಲಿ ವಿರಾಟ್ 17 ಪಂದ್ಯಗಳನ್ನಾಡಿ 41.93 ಎವರೇಜ್ನಲ್ಲಿ 587 ರನ್ ಗಳಿಸಿದ್ದಾರೆ. 107 ರನ್ ಬೆಸ್ಟ್ ಸ್ಕೋರ್ ಆಗಿದೆ. ಇದರಲ್ಲಿ ಒಂದು ಶತಕ ಎರಡು ಅರ್ಧ ಶತಕ ಒಳಗೊಂಡಿದೆ.

ಟೀಂ ಇಂಡಿಯಾದ ಬ್ಯಾಟಿಂಗ್ ಟ್ರಂಪ್ಕಾರ್ಡ್ ಆಗಿರುವ ವಿರಾಟ್ ಕೊಹ್ಲಿ ಮಹಾ ಯುದ್ದಲ್ಲಿ ಕೊಹ್ಲಿ ಬಗ್ಗೆ ಅಪಾರ ನಿರೀಕ್ಷೆಗಳನ್ನ ಇಟ್ಟುಕೊಳ್ಳಲಾಗದೆ. ಈ ಹಿಂದೆ ಆಂಗ್ಲರ ನಾಡಲ್ಲಿ ಸಿಡಿಲಬ್ಬರದ ಬ್ಯಾಟಿಂಗ್ ಮಾಡಿದ್ದ ವಿರಾಟ್ ವಿಶ್ವಕಪ್ನಲ್ಲಿ ಬೆಸ್ಟ್ ಬ್ಯಾಟ್ಸ್ಮನ್ ಆಗೋದ್ರಲ್ಲಿ ಅನುಮಾನವೇ ಇಲ್ಲ.

ನಂ.3 : ಜೋ ರೂಟ್
ಇತ್ತಿಚಿನ ವರ್ಷಗಳಲ್ಲಿ ಮೂರು ಫಾರ್ಮೆಟ್ನಲ್ಲಿ ಅಬ್ಬರಿಸಿ ವಿಶ್ವ ಕ್ರಿಕೆಟ್ನ ಗಮನ ಸೆಳೆದ ಬ್ಯಾಟ್ಸ್ಮನ್ ಅಂದ್ರೆ ಅದು ಇಂಗ್ಲೆಂಡ್ ತಂಡದ ಸ್ಟಾರ್ ಬ್ಯಾಟ್ಸ್ಮನ್ ಜೋ ರೂಟ್. ಕ್ರಿಕೆಟ್ನ ಮೂರು ಫಾರ್ಮೆಟ್ನಲ್ಲಿ ಆಡುವ ಜೋ ರೂಟ್ ತಂಡದ ಆಪಾದ್ಬಾಂಧವರಾಗಿದ್ದಾರೆ.

28 ವರ್ಷದ ಜೋ ರೂಟ್ಗೆ ಇದು ಎರಡನೇ ವಿಶ್ವಕಪ್ ಆಗಿದೆ. 2015ರ ವಿಶ್ವಕಪ್ನಲ್ಲಿ ತಂಡದ ಪರ ಬೊಂಬಾಟ್ ಬ್ಯಾಟಿಂಗ್ ಮಾಡಿದ್ದ ಜೋ ರೂಟ್ ಆರು ಪಂದ್ಯಗಳಿಂದ 202 ರನ್ ಗಳಿಸಿ ತಂಡದ ಪರ ಹೈಯೆಸ್ಟ್ ಸ್ಕೋರರ್ ಆಗಿದ್ರು.

ಈ ಬಾರಿ ತವರಿನಲ್ಲಿ ವಿಶ್ವಕಪ್ ನಡೆಯೊತಿರೊದ್ರಿಂದ ತಂಡಕ್ಕೆ ಚೊಚ್ಚಲ ವಿಶ್ವಕಪ್ ತಂದುಕೊಡಲೇ ಬೇಕೂಂತ ಟೊಂಕ ಕಟ್ಟಿ ನಿಂತಿದ್ದಾರೆ. ಇತ್ತಿಚೆಗೆ ಪಾಕಿಸ್ತಾನ ವಿರುದ್ಧದ ಏಕದಿನ ಸರಣಿಯಲ್ಲಿ ಭರ್ಜರಿ ಬ್ಯಾಟಿಂಗ್ ಮಾಡಿ ವಾರ್ನಿಂಗ್ ಕೊಟ್ಟಿದ್ರು.

ನಂ.4 ಕೇನ್ ವಿಲಿಯಮ್ಸನ್
ಕ್ರಿಕೆಟ್ನ ಮೂರು ಫಾರ್ಮೆಟ್ನಲ್ಲಿ ಅಬ್ಬರಿಸಿರುವ ನ್ಯೂಜಿಲೆಂಡ್ ತಂಡದ ಕ್ಯಾಪ್ಟನ್ ಕೇನ್ ವಿಲಿಯಮ್ಸನ್ ವಿಶ್ವದ ಶ್ರೇಷ್ಠ ಬ್ಯಾಟ್ಸಮನ್ ಆಗಿದ್ದಾರೆ. ವಿಶ್ವಕಪ್ನಲ್ಲಿ ತಂಡದ ಪರ Consistent ಪ್ಲೇಯರ್ ಆಗಿದ್ದಾರೆ. ಈ ಕಿವೀಸ್ ನಾಯಕ ಇದುವರೆಗೂ ಎರಡು ವಿಶ್ವಕಪ್ ಆಡಿದ ಅನುಭವ ಪಡೆದಿದ್ದಾರೆ.

ವಿಶ್ವಕಪ್ನಲ್ಲಿ 13 ಪಂದ್ಯಗಳನ್ನಾಡಿರುವ ಕೇನ್ ವಿಲಿಯಮ್ಸನ್ 37 ಎವರೇಜ್ನೊಂದಿಗೆ ಒಂದು ಅರ್ಧ ಶತಕದೊಂದಿಗೆ 333 ರನ್ ಕಲೆ ಹಾಕಿದ್ದಾರೆ. ಇದು ವಿಶ್ವಕಪ್ನಲ್ಲಿ ಕೇನ್ ವಿಲಿಯಮ್ಸನ್ ದಾಖಲಿಸಿರುವ ಸಾಧರಣ ಮೊತ್ತ ಆಗಿರಬಹುದು ಆದರೆ ಈ ಕಿವೀಸ್ ನಾಯಕನ ತಾಕತ್ತನ್ನ ಈಗ ಪ್ರಶ್ನಿಸುವಂತಿಲ್ಲ. ಕೇನ್ ವಿಲಿಯಮ್ಸನ್ ಯಾವ ಸಂದರ್ಭದಲ್ಲೂ ಬೇಕಾದ್ರು ಸಿಡಿಯುವ ತಾಕತ್ತು ಹೊಂದಿದ್ದು ಈ ಬಾರಿಯ ವಿಶ್ವಕಪ್ನಲ್ಲಿ ರನ್ ಹೊಳೆಯನ್ನ ಹರಿಸ್ತಾರೆ.

ಒಟ್ಟಾರೆ ಈ ಟಾಪ್ ನಾಲ್ಕು ಬ್ಯಾಟ್ಸ್ಮನ್ಗಳು ಈ ಬಾರಿಯ ವಿಶ್ವಕಪ್ನಲ್ಲಿ Fabulous ಬ್ಯಾಟ್ಸ್ಮನ್ಗಳಾಗಿದ್ದು ಇವರಲ್ಲಿ ಯಾರು ರನ್ ಶಿಖರ್ ಕಟ್ತಾರೆ ಅನ್ನೋದನ್ನ ಕಾದು ನೋಡಬೇಕಿದೆ.

ಸ್ಥಳೀಯ ಸುದ್ದಿ ಮತ್ತು ವೇಗದ ವಿತರಣೆಗಾಗಿ ನಮ್ಮ Android ಅಪ್ಲಿಕೇಶನ್ ಅನ್ನು ಡೌನ್ಲೋಡ್ ಮಾಡಿ