ಹಿಂದು ಧರ್ಮಕ್ಕೆ ವಿಶ್ವ ಮಟ್ಟದಲ್ಲಿ ಗೌರವ ದೊರಕಿಸಿಕೊಡುವಲ್ಲಿ ಆರ್‍ಎಸ್‍ಎಸ್ ಪಾತ್ರ ಹಿರಿದು: ನಾ .ತಿಪ್ಪೇಸ್ವಾಮಿ

ಹಾಸನ: ಹಿಂದು ಧರ್ಮಕ್ಕೆ ವಿಶ್ವ ಮಟ್ಟದಲ್ಲಿ ಗೌರವ ದೊರಕಿಸಿಕೊಡುವಲ್ಲಿ ರಾಷ್ಟ್ರೀಯ ಸ್ವಯಂ ಸೇವಕ ಸಂಘದ ಪಾತ್ರ ಪ್ರಮುಖವಾದುದು ಎಂದು ಆರ್‍ಎಸ್‍ಎಸ್ ದಕ್ಷಿಣ ಮಧ್ಯ ಕ್ಷೇತ್ರೀಯ ಕಾರ್ಯವಾಹ ನಾ .ತಿಪ್ಪೇಸ್ವಾಮಿ ಹೇಳಿದರು.
ನಗರ ಹೊರವಲಯದ ಎಚ್.ಕೆ.ಎಸ್. ಅಂತರಾಷ್ಟ್ರೀಯ ಶಾಲಾ ಆವರಣದಲ್ಲಿ ಇತ್ತೀಚೆಗೆ ನಡೆದ ಸಂಘ ಶಿಕ್ಷಾ ವರ್ಗಗಳ ಸಮಾರೋಪ ಸಮಾರಂಭದಲ್ಲಿ ಮುಖ್ಯ ಭಾಷಣಕಾರರಾಗಿ ಭಾಗವಹಿಸಿ ಅವರು ಮಾತನಾಡಿದರು.
ಹಿಂದು ಎಂದು ಹೇಳಿಕೊಳ್ಳಲು ಹಿಂಜರಿಯುತ್ತಿದ್ದ ಅನೇಕರು ಪ್ರಸ್ತುತ ದಿನಗಳಲ್ಲಿ ರಾಷ್ಟ್ರೀಯ ಸ್ವಯಂ ಸೇವಕ ಸಂಘದ ಕಾರ್ಯವನ್ನು ಹೊಗಳಿ ಕೊಂಡಾಡುತ್ತಿದ್ದಾರೆ. ಕೆಲ ವರ್ಷಗಳ ಹಿಂದೆ ಕೆಲವರು ತಮ್ಮನ್ನು ಕತ್ತೆ ಎಂದು ಕರೆಯಿರಿ ಹೊರತಾಗಿ ಹಿಂದು ಎನ್ನಬೇಡಿ ಎನ್ನುತ್ತಿದ್ದರು. ಆದರೆ ಈಗ ಪರಿಸ್ಥಿತಿ ಬದಲಾಗಿದೆ ಎಂದರು.
ಆರ್‍ಎಸ್‍ಎಸ್‍ನ ಕಾರ್ಯ, ಸೇವಾ ಚಟುವಟಿಕೆ, ಶಾಖೆಯ ಅರಿವು ಹೊಂದಿದ ಅನೇಕರು ನಮ್ಮನ್ನು ಬೆಂಬಲಿಸುತ್ತಿದ್ದಾರೆ. ದೇಶಾದ್ಯಂತ 75 ಸಾವಿರ ಗ್ರಾಮಗಳಲ್ಲಿ ಶಾಖೆ ನಡೆಸುತ್ತಿರುವ ಏಕೈಕ ಸಂಸ್ಥೆ ಆರ್‍ಎಸ್‍ಎಸ್. ವಿಶ್ವದ 1025 ಕಡೆಗಳಲ್ಲಿ ಶಾಖೆ ನಡೆಯುತ್ತಿರುವುದು ಸಂತಸದ ವಿಚಾರ ಎಂದರು.
ದೇಶ ಹಾಗೂ ಗಡಿ ರಕ್ಷಣೆಗಾಗಿ ಅನೇಕ ಕಾರ್ಯಕ್ರಮಗಳು ನಡೆದಿದ್ದರೂ ಫಲಪ್ರದವಾಗಿರಲಿಲ್ಲ. ಆದರೆ  ಅವರು 1925 ರಲ್ಲಿ ಶಾಖೆ ಪ್ರಾರಂಭಿಸುವ ಮೂಲಕ ಅದಕ್ಕೆ ಅಡಿಪಾಯ ಹಾಕಿದರು. ಯುವಕರನ್ನು ಒಂದುಕಡೆ ಸೇರಿಸಿ ವ್ಯಾಯಾಮ, ಯೋಗ ಹೇಳಿಕೊಟ್ಟರೆ ದೇಶ ಕಟ್ಟುವುದು ಹೇಗೆ ಎಂದು ಕೆಲವರು ಪ್ರಶ್ನಿಸಿದ್ದರು. ಆ ಪ್ರಶ್ನೆಗೆ ಈಗ ಉತ್ತರ ಕಂಡುಕೊಂಡಿz್ದÉೀವೆ. ಆರ್‍ಎಸ್‍ಎಸ್ ಹುಟ್ಟು ಸಾಕಷ್ಟು ಆಶ್ಚರ್ಯ ಹುಟ್ಟಿಸಿದೆ ಎಂದು ಹೇಳಿದರು.
ಸಾಮಾನ್ಯ ಜನರೂ ದೇಶ ಸೇವೆಯಲ್ಲಿ ತೊಡಗಬೇಕು ಎನ್ನುವುದು ಗುರೂಜಿ ಅವರ ಗುರಿಯಾಗಿತ್ತು. ಆದ್ದರಿಂದಲೇ ಶಾಖೆಗಳನ್ನು ತೆರೆದರು. ಸಂಘ ಇಷ್ಟೊಂದು ಬೃಹದಾಕಾರವಾಗಿ ಬೆಳೆಯಲು ಸ್ವಯಂ ಸೇವಕರ ಪಾತ್ರ ಹಿರಿದಾಗಿದೆ. ಆರ್‍ಎಸ್‍ಎಸ್‍ನಿಂದ ದೇಶಾದ್ಯಂತ 1.74 ಲಕ್ಷ ಸೇವಾ ಕಾರ್ಯಗಳು ನಡೆಯುತ್ತಿವೆ ಎಂದರು.
ಭಾರತದಲ್ಲಿರುವ ಅಸ್ಪೈಶ್ಯತೆ ಪಿಡುಗನ್ನು ತೊಡೆದು ಹಾಕಲು ಎಲ್ಲರೂ ಒಟ್ಟಾಗಿ ಕೆಲಸ ಮಾಡಬೇಕಿದೆ. ಮಕ್ಕಳಿಗೆ ಉತ್ತಮ ಸಂಸ್ಕಾರ ಕಲಿಸಿಕೊಡುವುದು ತಾಯಿ ಹಾಗೂ ಶಿಕ್ಷಕರ ಕರ್ತವ್ಯ. ಮಕ್ಕಳನ್ನು ಬೆಳೆಸುವ ಸಂದರ್ಭದಲ್ಲಿ ಹೊಂದಾಣಿಕೆಗೆ ಅವಕಾಶ ಕೊಟ್ಟರೆ ಅಸ್ಪೈಶ್ಯತೆ, ಭ್ರಷ್ಟಾಚಾರ, ಅಪ್ರಮಾಣಿಕತೆ ಬೆಳೆಯುತ್ತದೆ. ಹೀಗಾದರೆ ಸದೃಢ ದೇಶ ನಿರ್ಮಾಣ ಅಸಾಧ್ಯ ಎಂದರು.

ಸಮಾಜ ಪರಿವರ್ತನೆ ಮಾಡುವ ಕೆಲಸದಲ್ಲಿ ‌93 ವರ್ಷಗಳಿಂದ ಸಕ್ರಿಯವಾಗಿರುವ ಆರೆಸ್ಸೆಸ್ ಜೊತೆ ಸೇರಿ ಕೆಲಸ ಮಾಡಲು ಸಮಾಜದ ಸಜ್ಜನ ಶಕ್ತಿಯು ಉತ್ಸುಕವಾಗಿದೆ ಎಂದು ಆರೆಸ್ಸೆಸ್ ನ ದಕ್ಷಿಣ ಮಧ್ಯ ಕ್ಷೇತ್ರದ ಕಾರ್ಯವಾಹರಾದ ನಾ. ತಿಪ್ಪೇಸ್ವಾಮಿ ಅವರು ಹೇಳಿದರು. ಅವರು ಹಾಸನದ ಹೆಚ್. ಪಿ. ಎಸ್. ಶಿಕ್ಷಣ ಸಂಸ್ಥೆಯ ಪರಿಸರದಲ್ಲಿ ನಡೆಯುತ್ತಿರುವ 20 ದಿನಗಳ ಕರ್ನಾಟಕ ‌ರಾಜ್ಯದ ಸಂಘ‌ ಶಿಕ್ಷಾ ವರ್ಗಗಳ ಸಮಾರೋಪ ಸಮಾರಂಭದಲ್ಲಿ ಮಾತನಾಡುತ್ತಿದ್ದರು. ಸಮಾಜದ ಪರಿವರ್ತನೆಯು ಜನರ ಸಂಘಟನೆ ಮತ್ತು ಸಹಭಾಗಿತ್ವದಿಂದಷ್ಟೇ ಸಾಧ್ಯವಾಗುತ್ತದೆ, ಸಮಾಜವನ್ನು ಸಂಘಟಿಸುವ ಕೆಲಸವನ್ನು ಸಂಘ ಮಾಡುತ್ತಿದೆ ಎಂದವರು ಹೇಳಿದರು.

ದೇಶದಲ್ಲಿ ಇಂದು ಆರೆಸ್ಸೆಸ್ ನ ಚಟುವಟಿಗಳು 72000 ಹಳ್ಳಿಗಳಲ್ಲಿ ನಡೆಯುತ್ತಿವೆ. ಗ್ರಾಮ, ನಗರ, ಗುಡ್ಡಗಾಡು ಪ್ರದೇಶಗಳಲ್ಲಿ 1.5 ಲಕ್ಷಕ್ಕೂ ಹೆಚ್ಚು ಸೇವಾ ಕಾರ್ಯದ ಮೂಲಕ ವ್ಯಕ್ತಿಯ ಮತ್ತು ಸಮಾಜ ಜೀವನದಲ್ಲಿ ಬದಲಾವಣೆ ತರುವ ಕೆಲಸವನ್ನು ಆರೆಸ್ಸೆಸ್ ಮಾಡುತ್ತಿದೆ ಎಂದು ನಾ ತಿಪ್ಪೇಸ್ವಾಮಿಯವರು ಹೇಳಿದರು.

ಸಮಾಜದಲ್ಲಿ ಇರುವ ಅಸ್ಪೃಶ್ಯತೆಯ ಪಿಡುಗನ್ನು ದೂರಗೊಳಿಸಿ ಸಮರಸ ಜೀವನವನ್ನು ನೆಲೆಗೊಳಿಸುವ ಸಾರ್ಥಕ ಪ್ರಯತ್ನವನ್ನು ಆರೆಸ್ಸೆಸ್ ಮಾಡುತ್ತಿದೆ ಎಂದು ತಿಪ್ಪೇಸ್ವಾಮಿಯವರು ತಮ್ಮ ಭಾಷಣದಲ್ಲಿ ತಿಳಿಸಿದರು. ಜಲ ಸಂರಕ್ಷಣೆ, ಪರಿಸರ ಸಂರಕ್ಷಣೆಯ ಕೆಲಸಗಳಲ್ಲೂ ಆರೆಸ್ಸೆಸ್ ಸಕ್ರಿಯವಾಗಿದೆ ಎಂದು ನುಡಿದರು.

Sri Na Tippeswamy addressing the valedictory of Sangha Shiksha Vargas at Hassan

ಸಮಾರಂಭದ ಅಧ್ಯಕ್ಷತೆಯನ್ನು ವಹಿಸಿದ್ದ ಬೆಳೆಗಾರರ ಸಂಘದ ಅಧ್ಯಕ್ಷರಾದ ಶ್ರೀ ತೀರ್ಥಮಲ್ಲೇಶ್, ಆರೆಸ್ಸೆಸ್ ಶಿಸ್ತು ಮತ್ತು ಸಮಯಪಾಲನೆಗೆ ಮಾದರಿ ಎಂದರು. ದೇಶಭಕ್ತಿ ಮತ್ತು ರಾಷ್ಟ್ರೀಯತೆಯನ್ನು ಕಲಿಸುವುದರಲ್ಲಿ ಆರೆಸ್ಸೆಸ್ ಗೆ ಸಮನಾದ ಸಂಘಟನೆ ಇನ್ನೊಂದಿಲ್ಲ ಎಂದು ಅಭಿಪ್ರಾಯಪಟ್ಟರು.ಸದೃಢ ದೇಶ ಕಟ್ಟಲು ಎಲ್ಲರೂ ಒಂದಾಗಬೇಕಿದ್ದು, ಇಲ್ಲಿ ತರಬೇತಿ ಪಡೆದ ಶಿಕ್ಷಣಾರ್ಥಿಗಳು ಸಮಾಜದಲ್ಲಿರುವ ಸಜ್ಜನರನ್ನು ಗುರುತಿಸಿ ಅವರೂ ರಾಷ್ಟ್ರ ಕಾರ್ಯದಲ್ಲಿ ತೊಡಗುವಂತೆ ಮಾಡಬೇಕು ಎಂದು ಸಲಹೆ ನೀಡಿದರು.

ಪ್ರಥಮ ವರ್ಷದ ಶಿಬಿರದಲ್ಲಿ 98 ಮತ್ತು ದ್ವಿತೀಯ ವರ್ಷದಲ್ಲಿ 77 ಶಿಕ್ಷಾರ್ಥಿಗಳು ಶಿಕ್ಷಣ ಪಡೆದಿದ್ದಾರೆ. ಆರೆಸ್ಸೆಸ್ ನ ಸರಸಂಘಚಾಲಕ ಡಾ. ಮೋಹನ್ ಭಾಗವತ್ ಆದಿಯಾಗಿ‌ ಅನೇಕ ಪ್ರಮುಖರು ಶಿಕ್ಷಾರ್ಥಿಗಳಿಗೆ ಮಾರ್ಗದರ್ಶನ ಮಾಡಿದ್ದಾರೆ.

ಶಿಬಿರಾಧಿಕಾರಿಗಳಾದ ದಾವಣಗೆರೆಯ ಜಿಲ್ಲಾ ಸಂಘಚಾಲಕರಾದ ಉಮಾಪತಿಯವರು ಸ್ವಾಗತಿಸಿದರು. ಪುತ್ತೂರಿನ ಡಾ. ಸಚ್ಚಿದಾನಂದ ರೈ ಶಿಬಿರದ ವರದಿ ವಾಚನ ಮಾಡಿದರೆ, ಹಾಸನದ ವಿಜಯಕುಮಾರ್ ಅವರು‌ ವಂದಿಸಿದರು. ಕಾರ್ಯಕ್ರಮದಲ್ಲಿ ಶಿಕ್ಷಾರ್ಥಿಗಳಿಂದ ಆಕರ್ಷಕ ಶಾರೀರಿಕ ಪ್ರದರ್ಶನ ನಡೆಯಿತು.

ಲೋಕಸಭಾ ಅಭ್ಯರ್ಥಿ ಎ.ಮಂಜು, ನಗರ ಕಾರ್ಯವಾಹ ಮೋಹನ್ ಇತರರು ಹಾಜರಿದ್ದರು.

ಸ್ಥಳೀಯ ಸುದ್ದಿ ಮತ್ತು ವೇಗದ ವಿತರಣೆಗಾಗಿ ನಮ್ಮ Android ಅಪ್ಲಿಕೇಶನ್ ಅನ್ನು ಡೌನ್ಲೋಡ್ ಮಾಡಿ