ಚಂಡೀಗಢ: ಮೇ.22ರಂದು ಪಂಜಾಬ್ನ ಅಮೃತ್ಸರ ಲೋಕಸಭಾ ಕ್ಷೇತ್ರದ ಮತಕೇಂದ್ರ 123ರಲ್ಲಿ ಮರು ಮತದಾನ ನಡೆಸಲು ಚುನಾವಣಾ ಆಯೋಗ ಆದೇಶ ನೀಡಿದೆ.
ಚುನಾವಣೆ ಪ್ರಕ್ರಿಯೆ ವೇಳೆ ಈ ಮತಗಟ್ಟೆಯಲ್ಲಿ ಅಜಾಗರೂಕತೆ ತೋರಲಾಗಿದ್ದರಿಂದ ಮೇ 22ರಂದು ಮರು ಮತದಾನ ನಡೆಸಲಾಗುವುದು. ಈ ಬಗ್ಗೆ ಸಂಬಂಧಪಟ್ಟ ರಿಟರ್ನಿಂಗ್ ಆಫೀಸರ್, ವೀಕ್ಷಕರಿಗೆ ಸೂಚನೆ ನೀಡಲಾಗಿದೆ. ಈ ಕ್ಷೇತ್ರದ ಅಭ್ಯರ್ಥಿಗಳು, ರಾಜಕೀಯ ಪಕ್ಷಗಳಿಗೂ ಮರುಮತದಾನದ ಮಾಹಿತಿ ನೀಡಲಾಗಿದೆ ಎಂದು ಪಂಜಾಬ್ ಮುಖ್ಯಚುನಾವಣಾಧಿಕಾರಿ ಡಾ. ಎಸ್.ಕರುಣಾ ರಾಜು ತಿಳಿಸಿದ್ದಾರೆ.
ಮರುಮತದಾನಕ್ಕೆ ಎಲ್ಲ ರೀತಿಯ ಸಿದ್ಧತೆಗಳನ್ನೂ ಮಾಡಿಕೊಳ್ಳಲಾಗುತ್ತಿದ್ದು, ಇವಿಎಂ, ಮತಗಟ್ಟೆ ಸಿಬ್ಬಂದಿ, ಭದ್ರತೆ ಕಡೆಗೆ ಹೆಚ್ಚಿನ ಗಮಹರಿಸಲಾಗಿದೆ ಎಂದು ತಿಳಿಸಿದ್ದಾರೆ.
Re-polling ordered at Amritsar booth no 123 on 22 May due to negligence during voting process in final phase