ಇವಿಎಂ ಬದಲಾವಣೆ ಕುರಿತ ಆರೋಪ ವಿವೇಚನಾ ರಹಿತ ಎಂದ ಚುನಾವಣಾ ಆಯೋಗ

ನವದೆಹಲಿ: ಇವಿಎಂ( ಮತಯಂತ್ರ)ಗಳನ್ನು ವಶಕ್ಕೆ ಪಡೆದು ಫಲಿತಾಂಶಗಳನ್ನು ತಿರುಚಲಾಗುತ್ತಿದೆ ಎಂಬ ಆರೋಪ ವಿವೇಚನಾ ರಹಿತವಾದದ್ದು, ಮೇ 23 ರಂದು ಮತಎಣಿಕೆ ನಡೆಯಲಿದ್ದು ಈ ಸಂಬಂಧ ಸ್ಟ್ರಾಂಗ್​ ರೂಂಗಳ ಭದ್ರತೆ ವಿಚಾರದಲ್ಲಿ ಎಲ್ಲ ರೀತಿಯ ಶಿಷ್ಟಾಚಾರವನ್ನೂ ಪಾಲಿಸಲಾಗುತ್ತಿದೆ ಚುನಾವಣಾ ಆಯೋಗ ಸ್ಪಷ್ಟಪಡಿಸಿದೆ.

ಇವಿಎಂ, ವಿವಿಪ್ಯಾಟ್​ಗಳನ್ನು ರಾಜಕೀಯ ಪಕ್ಷಗಳ ಅಭ್ಯರ್ಥಿಗಳ ಎದುರಿಗೇ ಸೀಲ್​ ಮಾಡಲಾಗಿದೆ. ಅದನ್ನು ವಿಡಿಯೋ ಕೂಡ ಮಾಡಲಾಗಿದೆ. ಸಿಸಿಟಿವಿ ಕ್ಯಾಮರಾಗಳನ್ನೂ ಅಳವಡಿಸಲಾಗಿತ್ತು. ಸುಮ್ಮನೆ ಪ್ರತಿಭಟನೆ ನಡೆಸಲಾಗಿದೆ ಎಂದು ಆಯೋಗ ಹೇಳಿದೆ.

ಹಲವು ಇವಿಎಂಗಳನ್ನು ಅನಧಿಕೃತ ಮನೆಯೊಂದರಿಂದ ಇನ್ನೊಂದು ಕಡೆಗೆ ಸಾಗಿಸುತ್ತಿರುವುದಕ್ಕೆ ಸಂಬಂಧಪಟ್ಟಂತೆ ಹಲವು ವಿಡಿಯೋಗಳು ಟ್ವಿಟರ್​ನಲ್ಲಿ ಶೇರ್​ ಆಗಿ ಅನುಮಾನ ಮೂಡಿಸಿದ್ದವು ಈ ಹಿನ್ನಲೆಯಲ್ಲಿ ಆಯೋಗ ಸ್ಪಷ್ಟನೆ ನೀಡಿದೆ.

ಉತ್ತರ ಪ್ರದೇಶದ ಚಂದೌಲಿಯಲ್ಲಿ ಈ ಘಟ್ನಎ ನಡೆದಿದೆ. ಒಂದು ವಿಡಿಯೋದಲ್ಲಿ ಕೆಲವರು ವಾಹನದಿಂದ ಹಲವು ಇವಿಎಂ, ವಿವಿಪ್ಯಾಟ್​ಗಳನ್ನು ಇಳಿಸಿ, ಅದನ್ನೊಂದು ಸ್ಥಳೀಯ ಅಂಗಡಿಯಲ್ಲಿ ಇಡುತ್ತಿರುವುದು ಕಂಡು ಬಂದಿದೆ. ಹಾಗೇ ಇನ್ನೊಂದು ವಿಡಿಯೋವನ್ನು ಆಪ್​ ಕಾರ್ಯಕರ್ತನೋರ್ವ ಶೇರ್​ ಮಾಡಿದ್ದು, ಪಂಜಾಬ್​ನ ಕಾರೊಂದರಲ್ಲಿ ಇವಿಎಂ, ವಿವಿಪ್ಯಾಟ್​ಗಳು ಇರುವುದನ್ನು ನೋಡಬಹುದಾಗಿದೆ. ಹೀಗೆ ಹಲವು ವಿಡಿಯೋಗಳೊಂದಿಗೆ ಇವಿಎಂಗಳು ಬದಲಾಗುತ್ತಿವೆ.

ಅವುಗಳನ್ನು ಬೇರೆಡೆಗೆ ಸಾಗಿಸಲಾಗುತ್ತಿದೆ, ಸೂಕ್ತ ಭದ್ರತೆ ನೀಡಿಲ್ಲ ಎಂಬಂಥ ಆರೋಪಗಳು ಕೇಳಿಬಂದಿದ್ದವು. ಹಾಗೇ ಇದನ್ನೇ ಮುಂದಾಗಿಟ್ಟುಕೊಂಡು ಎಸ್​ಪಿ, ಬಿಎಸ್​ಪಿ, ಕಾಂಗ್ರೆಸ್​ ಕಾರ್ಯಕರ್ತರು ಚಂದೌಲಿಯಲ್ಲಿ ದಿಢೀರ್​ ಪ್ರತಿಭಟನೆಯನ್ನೂ ನಡೆಸಿದ್ದರು.

election commission clarification about the alligation of evm manupilation

ಸ್ಥಳೀಯ ಸುದ್ದಿ ಮತ್ತು ವೇಗದ ವಿತರಣೆಗಾಗಿ ನಮ್ಮ Android ಅಪ್ಲಿಕೇಶನ್ ಅನ್ನು ಡೌನ್ಲೋಡ್ ಮಾಡಿ