ಬೆಂಗಳೂರು,ಮಾ.24-ವೀಸಾ ನಿಯಮ ಉಲ್ಲಂಘಿಸಿ ಮಾದಕ ವಸ್ತು ಮಾರಾಟದಲ್ಲಿ ತೊಡಗಿದ್ದ ನೈಜೇರಿಯ ಪ್ರಜೆಯೊಬ್ಬನನ್ನು ಸಿಸಿಬಿ ಪೆÇಲೀಸರು ಬಂಧಿಸಿ 2.50 ಲಕ್ಷ ರೂ. ಮೌಲ್ಯದ ಮಾಲನ್ನು ವಶಪಡಿಸಿಕೊಂಡಿದ್ದಾರೆ.
ಕಿಸ್ಟೋಫರ್ ಅಗ್ನೋಬನ್(36) ಬಂಧಿತ ನೈಜೀರಿಯಾ ಪ್ರಜೆಯಾಗಿದ್ದು , ಈತನಿಂದ 25 ಗ್ರಾಂ ಕೋಕೇನ್, ಎರಡು ಮೊಬೈಲ್, ಪಾಸ್ಪೆÇೀರ್ಟ್, ಬೈಕ್ ಮತ್ತು ನಗದನ್ನು ವಶಪಡಿಸಿಕೊಳ್ಳಲಾಗಿದೆ.
ಆರೋಪಿಯು ಭಾರತ ದೇಶದಲ್ಲಿ ವಾಸ್ತವ್ಯ ಹೂಡಿ ವೀಸಾ ನಿಯಮ ಉಲ್ಲಂಘಿಸಿ ಮಾದಕ ವಸ್ತು ಮಾರಾಟದಲ್ಲಿ ತೊಡಗಿರುವುದು ಪ್ರಾಥಮಿಕ ತನಿಖೆಯಿಂದ ತಿಳಿದುಬಂದಿದೆ.
ಬೆಂಗಳೂರು ನಗರದ ಹೆಣ್ಣೂರು ವ್ಯಾಪ್ತಿಯ ರಾಜಣ್ಣ ಲೇಔಟ್, ಡಿಫೆನ್ಸ್ ಕಾಲೋನಿ, ಹೊರಮಾವು ಆಗರದ ಹೆಣ್ಣೂರಿನಲ್ಲಿ ಮನೆಯೊಂದನ್ನು ಬಾಡಿಗೆಗೆ ಪಡೆದು ವಾಸವಾಗಿದ್ದ ಈತನ ಮನೆ ಮೇಲೆ ಸಿಸಿಬಿ ಪೆÇಲೀಸರು ದಾಳಿ ಮಾಡಿ ಕೋಕೇನ್ನ್ನು ವಶಪಡಿಸಿಕೊಂಡಿದ್ದಾರೆ.
ಆರೋಪಿ ವಿರುದ್ಧ ಹೆಣ್ಣೂರು ಪೆÇಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು , ತನಿಖೆ ಮುಂದುವರೆದಿದೆ.