ರಾತ್ರಿ ವೇಳೆಯಲ್ಲಿ ಬಸ್‍ಗಾಗಿ ಕಾಯುತ್ತಿದ್ದ ಪ್ರಯಾಣಿಕರನ್ನು ಸುಲಿಗೆ ಮಾಡುತ್ತಿದ್ದ ದರೋಡೆಕೋರನನ್ನು ಆರ್.ಎಂ.ಸಿ.ಯಾರ್ಡ್ ಪೆÇಲೀಸರು ಬಂಧಿಸಿದ್ದಾರೆ

ಬೆಂಗಳೂರು, ಮಾ.24- ರಾತ್ರಿ ವೇಳೆಯಲ್ಲಿ ಬಸ್‍ಗಾಗಿ ಕಾಯುತ್ತಿದ್ದ ಪ್ರಯಾಣಿಕರನ್ನು ಸುಲಿಗೆ ಮಾಡುತ್ತಿದ್ದ ದರೋಡೆಕೋರನನ್ನು ಆರ್.ಎಂ.ಸಿ.ಯಾರ್ಡ್ ಪೆÇಲೀಸರು ಬಂಧಿಸಿದ್ದಾರೆ.
ನಂದಿನಿಲೇಔಟ್‍ನ ನಂಜುಂಡಸ್ವಾಮಿ(23) ಬಂಧಿತ ಆರೋಪಿಯಾಗಿದ್ದು, ಈತನಿಂದ 2.10 ಲಕ್ಷ ರೂ. ಬೆಲೆ ಬಾಳುವ 6 ಮೊಬೈಲ್, 3 ದ್ವಿಚಕ್ರ ವಾಹನ ವಶಪಡಿಸಿಕೊಳ್ಳಲಾಗಿದೆ.
ಈತನ ಬಂಧನದಿಂದ ಆರ್‍ಎಂಸಿಯಾರ್ಡ್ ಠಾಣೆಯ ಎರಡು ದರೋಡೆ ಪ್ರಕರಣ, ಕಗ್ಗಲಿಪುರ ಠಾಣೆ, ಗಿರಿನಗರ ಠಾಣೆಯ 1 ಬೈಕ್ ಕಳ್ಳತನ ಪ್ರಕರಣ ಪತ್ತೆಹಚ್ಚುವಲ್ಲಿ ಆರ್‍ಎಂಸಿಯಾರ್ಡ್ ಠಾಣೆ ಪೆÇಲೀಸರು ಯಶಸ್ವಿಯಾಗಿದ್ದಾರೆ.
ಆರೋಪಿಯು ತನ್ನ ಬೈಕ್‍ನಲ್ಲಿ ಓಡಾಡುತ್ತಾ ಬಸ್ ನಿಲ್ದಾಣದ ಬಳಿ ನಿಂತಿರುತ್ತಿದ್ದ ವ್ಯಕ್ತಿಗಳಿಂದ ಮೊಬೈಲ್‍ಗಳನ್ನು ದೋಚುತ್ತಿದ್ದನು. ನಿನ್ನೆ ಈತ ಅನುಮಾನಾಸ್ಪದವಾಗಿ ಬೈಕ್ ನಿಲ್ಲಿಸಿಕೊಂಡು ನಿಂತಿದ್ದಾಗ ಕರ್ತವ್ಯದಲ್ಲಿದ್ದ ಪೆÇಲೀಸರು ಈತನನ್ನು ವಶಕ್ಕೆ ಪಡೆದು ಠಾಣೆಗೆ ಕರೆದೊಯ್ದು ವಿಚಾರಿಸಿದಾಗ ಗೊರಗುಂಟೆಪಾಳ್ಯ ಬಸ್ ನಿಲ್ದಾಣದ ಹತ್ತಿರ ಬಸ್‍ಗಾಗಿ ಕಾಯುತ್ತಿದ್ದ ಪ್ರಯಾಣಿಕರೊಬ್ಬರ ಮೊಬೈಲ್‍ನ್ನು ಸ್ನೇಹಿತನೊಂದಿಗೆ ಸೇರಿ ಮೊಬೈಲ್‍ನ್ನು ದರೋಡೆ ಮಾಡಿದ್ದಾಗಿ ಒಪ್ಪಿಕೊಂಡಿದ್ದಾನೆ.

ಸ್ಥಳೀಯ ಸುದ್ದಿ ಮತ್ತು ವೇಗದ ವಿತರಣೆಗಾಗಿ ನಮ್ಮ Android ಅಪ್ಲಿಕೇಶನ್ ಅನ್ನು ಡೌನ್ಲೋಡ್ ಮಾಡಿ