ಬೆಂಗಳೂರು, ಮೇ 17- ತಮ್ಮ ಟ್ವೀಟ್ಗಳು ತೀವ್ರ ವಿವಾದಕ್ಕೆ ಗುರಿಯಾಗುತ್ತಿದ್ದಂತೆ ಬಿಜೆಪಿ ಸಂಸದರು ಕ್ಷಮೆಯಾಚಿಸಿದ್ದಾರೆ.
ಕರಾವಳಿ ಭಾಗದ ಸಂಸದರಾದ ಅನಂತ್ಕುಮಾರ್ ಹೆಗಡೆ, ನಳಿನ್ಕುಮಾರ್ ಕಟಿಲ್ ಅವರುಗಳು ನಾಥೂರಾಮ್ ಗೂಡ್ಸೆ ಕುರಿತಂತೆ ಅವರು ಮಾಡಿದ ಟ್ವೀಟ್ಗಳು ರಾಷ್ಟ್ರಮಟ್ಟದಲ್ಲಿ ಟೀಕೆಗೆ ಗುರಿಯಾದವು.
ಇದರಿಂದಾಗಿ ತಕ್ಷಣವೇ ನಳಿನ್ಕುಮಾರ್ ಕಟಿಲ್ ಕ್ಷಮೆ ಯಾಚನೆ ಮಾಡಿದ್ದು, ತಮ್ಮ ಟ್ವೀಟ್ಅನ್ನು ಹಿಂಪಡೆದಿದ್ದಾರೆ. ಯಾರ ಮನಸ್ಸನ್ನು ನೋಯಿಸುವುದು ನನ್ನ ಉದ್ದೇಶವಲ್ಲ. ಯಾರಿಗಾದರೂ ನೋವಾಗಿದ್ದರೆ ಕ್ಷಮೆ ಕೇಳುತ್ತೇನೆ ಎಂದ ಅವರು, ಚರ್ಚೆಯನ್ನು ಮುಂದುವರಿಸುವುದು ಬೇಡ ಎಂದು ಹೇಳಿದ್ದಾರೆ.
ಕೇಂದ್ರ ಸಚಿವ ಅನಂತ್ಕುಮಾರ್ ಅವರು ತಮ್ಮ ಟ್ವಿಟರ್ ಖಾತೆ ಹ್ಯಾಕ್ ಆಗಿತ್ತು ಎಂದು ಸ್ಪಷ್ಟನೆ ನೀಡುವ ಮೂಲಕ ವಿವಾದದಿಂದ ಜಾರಿಕೊಳ್ಳುವ ಪ್ರಯತ್ನ ಮಾಡಿದ್ದಾರೆ. ವಾರದಲ್ಲಿ ಎರಡು ಬಾರಿ ತಮ್ಮ ಟ್ವಿಟರ್ ಖಾತೆ ಹ್ಯಾಕ್ ಆಗುತ್ತಿದ್ದು, ಈ ರೀತಿಯ ಬೇರೆ ಬೇರೆ ಪೋಸ್ಟ್ಗಳು ಪ್ರಕಟಗೊಳ್ಳುತ್ತಿವೆ.
ನಾಥೂರಾಮ್ ಗೂಡ್ಸೆ ವಿಷಯದಲ್ಲಿ ಪ್ರಕಟವಾಗಿರುವ ಟ್ವೀಟ್ಗೆ ಕ್ಷಮೆ ಕೇಳುತ್ತೇನೆ ಎಂದು ಅವರು ಹೇಳಿದ್ದಾರೆ.