ಬೆಂಗಳೂರು; ಮಾನವ ಹಕ್ಕುಗಳ ಹೋರಾಟಗಾರ್ತಿ, ಭಾರತದ ಐರನ್ ಲೇಡಿ ಎಂದೇ ಖ್ಯಾತಿ ಪಡೆದಿರುವ ಇರೋಮ್ ಶರ್ವಿುಳಾ ವಿಶ್ವ ತಾಯಂದಿರ ದಿನದಂದು ಬೆಂಗಳೂರಿನಲ್ಲಿ ಅವಳಿ ಮಕ್ಕಳಿಗೆ ಜನ್ಮ ನೀಡಿದ್ದಾರೆ.
ಮಲ್ಲೇಶ್ವರದ ಕ್ಲೌಡ್ನೈನ್ ಆಸ್ಪತ್ರೆಯಲ್ಲಿ ಇರೋಮ್ ಶರ್ಮಿಳಾ ಅವಳಿ ಹೆಣ್ಣು ಮಕ್ಕಳಿಗೆ ಜನ್ಮ ನೀಡಿದ್ದು, ತಾಯಿ ಮಗು ಆರೋಗ್ಯವಾಗಿದ್ದಾರೆ. ಇಬ್ಬರು ಮಕ್ಕಳು ಒಂದು ನಿಮಿಷದ ಅಂತರದಲ್ಲಿ ಜನಿಸಿದ್ದಾರೆ. ಮಕ್ಕಳಿಗೆ ನಿಕ್ಸ್ ಶಕಿ, ಅಟಮನ್ ತಾರಾ ಎಂದು ಹೆಸರಿಡಲಾಗಿದೆ.
ಮಕ್ಕಳ ಚಿತ್ರವನ್ನು ಕೆಲ ದಿನಗಳಲ್ಲಿ ಬಿಡುಗಡೆ ಮಾಡುವುದಾಗಿ ವೈದ್ಯರು ತಿಳಿಸಿದ್ದಾರೆ. 2017ರಲ್ಲಿ ಬ್ರಿಟಿಷ್ ಪ್ರಜೆ ಡೆಸ್ಮಂಡ್ ಕುಟಿನ್ಹೋ ಜತೆ ವಿವಾಹವಾಗಿರುವ ಇರೋಮ್ ಶರ್ವಿುಳಾ ಪ್ರಸ್ತುತ ಕೊಡೆಕೆನಾಲ್ನಲ್ಲಿ ವಾಸವಿದ್ದಾರೆ.
irom sharmila,twin girls,bengaluru