12ನೇ ಆವೃತ್ತಿಯ ಐಪಿಎಲ್ ಟೂರ್ನಿ ನಾಲ್ಕರಘಟ್ಟದ ಸನಿಹ ತಲುಪಿದೆ. ಪ್ಲೇ ಆಫ್ಗೇರುವ ಚಿಂತೆಯಲ್ಲಿದ್ದ ತಂಡಗಳು ಲೆಕ್ಕಾಚಾರಗಳಲ್ಲಿ ತೊಡಗಿವೆ. ಇನ್ನೂ ಪ್ಲೇ ಆಫ್ ಕನಸು ಕಣುತ್ತಿರೋದ್ರಲ್ಲಿ ಒಂದಾದ ರಾಜಸ್ಥಾನ, ಇಂದು ಡೆಲ್ಲಿ ಕ್ಯಾಪಿಟಲ್ಸ್ ವಿರುದ್ಧ ಲೀಗ್ ಹಂತದ ಕೊನೆಯ ಪಂದ್ಯವಾಡಲೂ ಸಜ್ಜಾಗಿದೆ. ರಾಷ್ಟ್ರ ರಾಜಧಾನಿ ದೆಹಲಿಯ ಫಿರೋಜ್ ಷಾ ಕೋಟ್ಲಾದಲ್ಲಿ ಡೆಲ್ಲಿ ಕ್ಯಾಪಿಟಲ್ಸ್ ಟಕ್ಕರ್ ನೀಡೋಕೆ ರಾಜಸ್ಥಾನ ಹೊಸ ಯೋಜನೆಗಳನ್ನು ರೂಪಿಸಿದೆ… ಇನ್ನೂ ಡೆಲ್ಲಿ ತಂಡ ಲೀಗ್ನ ಕೊನೆ ಪಂದ್ಯ ಗೆಲ್ಲುವ ಮೂಲಕ ಅಂಕಪಟ್ಟಿಯಲ್ಲಿ 2ನೇ ಸ್ಥಾನಕ್ಕೇರಲು ಪ್ರತಿತಂತ್ರ ರೂಪಿಸಿದೆ.
ಕೋಟ್ಲಾ ಅಂಗಳದಲ್ಲಿ ರಾಜಸ್ಥಾನಕ್ಕೆ ಡೆಲ್ಲಿ ಚಾಲೆಂಜ್
ರಾಜಸ್ಥಾನ ಮುಂದೆ ಪ್ಲೇ ಆಫ್ಗೇರುವ ಅವಕಾಶ ಕ್ಷೀಣ.ಆದ್ರೆ, ಉಳಿದ ಒಂದು ಪಂದ್ಯ ರಾಜಸ್ಥಾನ ರಾಯಲ್ಸ್ಗೆ ನಿರ್ಣಾಯಕವಾಗಿದೆ. ಅಲ್ದೇ ಉಳಿದ ತಂಡಗಳ ಫಲಿತಾಂಶದ ಮೇಲೆ ರಾಜಸ್ಥಾನ ತಂಡದ ಭವಿಷ್ಯ ನಿಂತಿದ್ದು, ರಾಜಸ್ಥಾನ ಪ್ಲೇ ಆಫ್ ಎಂಟ್ರಿ ನೀಡಬೇಕಾದ್ರೆ. ಇಂದಿನ ಪಂದ್ಯ ರನ್ ರೇಟ್ನಿಂದ ಗೆಲ್ಲುವುದರ ಜೊತೆಗೆ ಕೆಕೆಆರ್, ಪಂಜಾಬ್, ಸನ್ ರೈಸರ್ಸ್ ತಂಡಗಳ ಸೋಲು, ಗೆಲುವುಗಳ ಮೇಲೆ ರಾಜಸ್ಥಾನದ ಮುಂದಿನ ಹಾದಿ ನಿಂತಿದೆ.
ಇನ್ನೂ ನಾಯಕ ಸ್ಟೀವನ್ ಸ್ಮಿತ್, ವಿಶ್ವಕಪ್ ದೃಷ್ಟಿಯಿಂದ ತವರಿಗೆ ಮರಳಿದ್ದಾರೆ. ಹೀಗಾಗಿ ಇಂದು ಅಜಿಂಕ್ಯ ರಹಾನೆ ತಂಡವನ್ನು ಮುನ್ನಡೆಸಲಿದ್ದಾರೆ. ಲೀಗ್ನ ಆರಂಭದಲ್ಲಿ ಲಿಯಾಮ್ ಲಿವಿಂಗ್ಸ್ಟೋನ್, ರಹಾನೆ, ಸಂಜು ಸ್ಯಾಮ್ಸನ್ ಉತ್ತಮ ಫಾರ್ಮ್ನಲ್ಲಿದ್ದಾರೆ. ರಿಯಾನ್ ಪರಾಗ್ ಭರವಸೆ ಮೂಡಿಸಿದ್ದು, ಶ್ರೇಯಸ್ ಗೋಪಾಲ್, ಸ್ಟುವರ್ಟ್ ಬಿನ್ನಿ ತಂಡ ಸಂಕಷ್ಟದಲ್ಲಿದ್ದಾಗ ಆಸರೆಯಾಗಬಲ್ಲರು.
ಅಂಕಪಟ್ಟಿಯ 2ನೇ ಸ್ಥಾನದ ಮೇಲೆ ಡೆಲ್ಲಿ ಕ್ಯಾಪಿಟಲ್ಸ್ ಕಣ್ಣು..!
ಈಗಾಗಲೇ ಪ್ಲೇ ಆಫ್ ಪ್ರವೇಶಿಸಿರುವ ಡೆಲ್ಲಿ ತಂಡಕ್ಕೆ ಇದು ಅಷ್ಟೇನೂ ಮಹತ್ವದ ಪಂದ್ಯವಾಗದಿದ್ದರು, ಉಪಾಂತ್ಯಕ್ಕೇರಲು ಈ ಪಂದ್ಯ ಡೆಲ್ಲಿಗೆ ಇಂಪಾರ್ಟ್ಟೆಂಟ್ ಆಗಿದೆ. ಹೌದು ಅಂಕಪಟ್ಟಿಯಲ್ಲಿ ಮೊದಲೆರಡು ತಂಡಗಳು ಪ್ಲೇ ಆಫ್ನ ಮೊದಲ ಪಂದ್ಯದಲ್ಲಿಸೋತರು ಮೊತ್ತೊಂದು ಚಾನ್ಸ್ ಸಿಗುತ್ತೆ., ಹೀಗಾಗಿ ಡೆಲ್ಲಿ ಕ್ಯಾಪಿಟಲ್ಸ್ ಇಂದಿನ ಪಂದ್ಯ ಗೆಲ್ಲಲು ರಾಜಸ್ಥಾನಕ್ಕೆ ಖೆಡ್ಡಾ ತೋಡಿದೆ. ಶಿಖರ್ ಧವನ್, ಶ್ರೇಯಸ್ ಅಯ್ಯರ್ ಅದ್ಭುತ ಪ್ರದರ್ಶನ ನೀಡುತ್ತಿದ್ದಾರೆ. ಪೃಥ್ವಿ ಶಾ, ರಿಷಭ್ ಪಂತ್, ಅಕ್ಷರ್ ಪಟೇಲ್ ಸಿಡಿದ್ರೆ, ರಾಜಸ್ಥಾನ ರಾಯಲ್ಸ್ ತಂಡ 12ನೇ ಐಪಿಎಲ್ ಅಭಿಯಾನಕ್ಕೆ ಟಾಟಾ ಹೇಳಬೇಕಾಗುತ್ತೆ.
ಬೌಲಿಂಗ್ ಡಿಪಾರ್ಟ್ಮೆಂಟ್ನಲ್ಲಿ ಟ್ರಂಪ್ ಕಾರ್ಡ್ ಆಗಿದ್ದ ಕಗಿಸೋ ರಬಡಾ ಅಲಭ್ಯತೆ ಡೆಲ್ಲಿ ತಂಡಕ್ಕೆ ಕಾಡುತ್ತಿದೆ. ಟ್ರೆಂಟ್ ಬೌಲ್ಟ್, ಕ್ರಿಸ್ ಮೋರಿಸ್ ದುಬಾರಿ ಡೆಲ್ಲಿಗೆ ನುಂಗಲಾರದ ತುತ್ತಾಗಿದೆ. ಇನ್ನೂ ಸ್ಪಿನ್ನರ್ಗಳಾದ ಅಮಿತ್ ಮಿಶ್ರಾ, ಕನ್ನಡಿಗ ಜಗದೀಶ್ ಸುಚಿತ್ ಮ್ಯಾಜಿಕ್ ಇಂದು ಮುಂದುವರಿಸೋ ತವಕದಲ್ಲಿದ್ದಾರೆ.