ವಿಜಯಪುರ,ಏ.28- ವಿದ್ಯುತ್ ಶಾರ್ಟ್‍ಸಕ್ರ್ಯೂಟ್‍ನಿಂದ ಬೆಂಕಿ ಹೊತ್ತಿಕೊಂಡು ಮನೆಯಲ್ಲಿದ್ದ 60 ಗ್ರಾಂ ಚಿನ್ನಾಭರಣ, 2.50 ಲಕ್ಷ ನಗದು ಸುಟ್ಟು ಭಸ್ಮವಾಗಿರುವ ಘಟನೆ ಕೂಡಗಿ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ನಡೆದಿದೆ.
ನಿಡಗುಂದಿ ತಾಲ್ಲೂಕಿನ ಮೂಕರ್ತಿಹಾಳ ಗ್ರಾಮದ ಯಮನೂರ ಸಾಬ್ ಹುಬ್ಬಳಿ ಎಂಬುವರ ಮನೆಯಲಿ ಶಾರ್ಟ್ ಸಕ್ರ್ಯೂಟ್‍ನಿಂದ ಬೆಂಕಿ ಹೊತ್ತಿಕೊಂಡಿದೆ.
ಬೆಂಕಿಯ ಕೆನ್ನಾಲಗೆಯಿಂದ ಮನೆಯಲ್ಲಿಟ್ಟಿದ್ದ 60 ಗ್ರಾಂ ಚಿನ್ನಾಭರಣ, 2.50 ಲಕ್ಷ ನಗದು ಹಾಗೂ ಇತರೆ ಸಾಮಾಗ್ರಿಗಳು ಸುಟ್ಟುಹೋಗಿವೆ. ಅಗ್ನಿಶಾಮಕ ದಳದವರು ಸ್ಥಳಕ್ಕಾಗಮಿಸಿ ಬೆಂಕಿ ನಂದಿಸಿದ್ದಾರೆ.
ಕೂಡಗಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.