ನವದೆಹಲಿ: ಭೋಪಾಲ್ ಲೋಕಸಭಾ ಕ್ಷೇತ್ರ ಬಿಜೆಪಿ ಅಭ್ಯರ್ಥಿ ಸಾಧ್ವಿ ಪ್ರಜ್ನಾ ಸಿಂಗ್ ಠಾಕೂರ್ ಗೆ ಬೆಂಬಲ ಸೂಚಿಸಿರುವ ಯೋಗಗುರು ಬಾಬಾರಾಮ್ ದೇವ್, ಜೈಲುವಾಸದಿಂದಾಗಿ ಪ್ರಜ್ನಾ ಸಿಂಗ್ ಗೆ ಕ್ಯಾನ್ಸರ್ ಬಂದಿದೆ ಎಂದು ಹೇಳಿದ್ದಾರೆ.
2008ರ ಮಾಲೇಗಾಂವ್ ಬಾಂಬ್ ಸ್ಫೋಟ ಪ್ರಕರಣದ ಆರೋಪಿ ಪ್ರಜ್ಞಾ ಸಿಂಗ್ ಠಾಕೂರ್ ಅವರು 9 ವರ್ಷ ಜೈಲಿನಲ್ಲಿ ಕಳೆದಿದ್ದಾರೆ. ಜೈಲಿನಲ್ಲಿ ಅವರಿಗೆ ದೈಹಿಕ ಮತ್ತು ಮಾನಸಿಕ ಹಿಂಸೆ ನೀಡಲಾಗಿದೆ. ಇದರಿಂದ ಅವರು ದೈಹಿಕವಾಗಿ ಶಕ್ತಿಗುಂದಿದ್ದರಿಂದ ಅವರಿಗೆ ಕ್ಯಾನ್ಸರ್ ರೋಗ ಬಂದಿದೆ. ಅವರು ರಾಷ್ಟ್ರೀಯವಾದಿ ಮಹಿಳೆ ಎಂದು ರಾಮ್ ದೇವ್ ಅಭಿಪ್ರಾಯ ಪಟ್ಟಿದ್ದಾರೆ.
Ramdev calls Pragya Thakur a nationalist, claims she got cancer from stress of torture in jail