ಬಿಜೆಪಿ ಸೇರ್ಪಡೆಯಾದ 7 ಮಾಜಿ ಸೇನಾಧಿಕಾರಿಗಳು

ನವದೆಹಲಿ: ಭಾರತೀಯ ಸೇನೆ ಮತ್ತು ಭಾರತೀಯ ವಾಯುಪಡೆಯ 7 ಮಾಜಿ ಸೇನಾಧಿಕಾರಿಗಳು ಬಿಜೆಪಿಗೆ ಅಧಿಕೃತವಾಗಿ ಸೇರ್ಪಡೆಯಾಗಿದ್ದಾರೆ.

ನವದೆಹಲಿಯ ಬಿಜೆಪಿ ಕೇಂದ್ರ ಕಚೇರಿಯಲ್ಲಿ ರಕ್ಷಣಾ ಸಚಿವೆ ನಿರ್ಮಲಾ ಸೀತಾರಾಮನ್​ ಸಮ್ಮುಖದಲ್ಲಿ ಲೆ. ಜ. ಜೆಬಿಎಸ್​ ಯಾದವ್​, ಲೆ.ಜ. ಆರ್​.ಎನ್​. ಸಿಂಗ್​, ಲೆ.ಜ. ಎಸ್​.ಕೆ. ಪಟ್ಯಾಲ್​, ಲೆ.ಜ. ಸುನಿತ್​ ಕುಮಾರ್​, ಲೆ.ಜ. ನಿತಿನ್​ ಕೊಹ್ಲಿ, ಕರ್ನಲ್​ ಆರ್​.ಕೆ. ತ್ರಿಪಾಠಿ, ವಿಂಗ್​ ಕಮಾಂಡರ್​ ನವನೀತ್​ ಮಗಾನ್​ ಬಿಜೆಪಿಗೆ ಸೇರ್ಪಡೆಯಾದರು.

ಕಳೆದ ಲೋಕಸಭೆ ಚುನಾವಣೆ ವೇಳೆಯೂ ಜನರಲ್​ ವಿ.ಕೆ. ಸಿಂಗ್​ ಮತ್ತು ಕರ್ನಲ್​ ರಾಜ್ಯವರ್ಧನ್​ ಸಿಂಗ್​ ರಾಥೋಡ್​ ಅವರು ಬಿಜೆಪಿಗೆ ಸೇರ್ಪಡೆಯಾಗಿ ಸಕ್ರಿಯ ರಾಜಕೀಯಕ್ಕೆ ಬಂದಿದ್ದರು. ಸಿಂಗ್​ ಮತ್ತು ರಾಥೋಡ್​ ಕೇಂದ್ರ ಸಚಿವರಾಗಿ ಕಾರ್ಯ ನಿರ್ವಹಿಸುತ್ತಿದ್ದಾರೆ. ಈ ಬಾರಿ ಲೋಕಸಭಾ ಚುನಾವಣೆ ಬೆನ್ನಲ್ಲೇ ಈಗ 7 ಮಾಜಿ ಸೇನಾಧಿಕಾರಿಗಳು ಬಿಜೆಪಿ ಸೇರಿರುವುದು ವಿಶೇಷವಾಗಿದೆ.

Seven Army veterans join BJP

ಸ್ಥಳೀಯ ಸುದ್ದಿ ಮತ್ತು ವೇಗದ ವಿತರಣೆಗಾಗಿ ನಮ್ಮ Android ಅಪ್ಲಿಕೇಶನ್ ಅನ್ನು ಡೌನ್ಲೋಡ್ ಮಾಡಿ