ಈಡನ್ ಅಂಗಳದಲ್ಲಿ ಕೋಲ್ಕತ್ತಾ-ಚೆನ್ನೈ ಸೂಪರ್ ಫೈಟ್

ಇಂದು ಕ್ರಿಕೆಟ್ ಅಭಿಮಾನಿಗಳಿಗೆ ಡಬಲ್ ಧಮಾಕ. ಬಿಲಿಯನ್ ಡಾಲರ್ ಟೂರ್ನಿ ಐಪಿಎಲ್ನಲ್ಲಿ ಇಂದು ಎರಡು ಪಂದ್ಯಗಳು ನಡೆಯಲಿವೆ. ಹಾಗಾದ್ರೆ ಬನ್ನಿ ಯಾವೆಲ್ಲ ತಂಡಗಳು ಗೆಲುವಿಗಾಗಿ ಹೋರಾಡಲಿವೆ ಅನ್ನೋದನ್ನ ನೋಡೋಣ.

ಚೆನ್ನೈ ವಿರುದ್ಧ ಕೋಲ್ಕತ್ತಾಗೆ ಸೇಡಿನ ಸಮರ
ಸೂಪರ್ ಸಂಡೇಯ ಮೊದಲ ಪಂದ್ಯದಲ್ಲಿ ಕೋಲ್ಕತ್ತಾ ನೈಟ್ ರೈಡರ್ಸ್-ಚೆನ್ನೈ ಸೂಪರ್ ಕಿಂಗ್ಸ್ ತಂಡಗಳು ಮುಖಾಮುಖಿಯಾಗುತ್ತಿವೆ.. ಈ ಬಿಗ್ ಫೈಟ್ಗೆ ಕೋಲ್ಕತ್ತಾದ ಈಡನ್ ಗಾರ್ಡನ್ ಅಂಗಳ ಸಜ್ಜಾಗಿದ್ದು, ಚೆನ್ನೈ ವಿರುದ್ಧದ ಫಸ್ಟ್ ಫೈಟ್ನಲ್ಲಿ ಹೀನಾಯವಾಗಿ ಸೋತಿದ್ದ ಕೋಲ್ಕತ್ತಾ ಸೇಡುತೀರಿಸಿಕೊಳ್ಳಲು ಹೊಂಚುಹಾಕಿದೆ. ಇನ್ನೂ ಡೆಲ್ಲಿ ವಿರುದ್ಧದ ಪಂದ್ಯದಲ್ಲೂ ಸೋತಿರುವ ಕೊಲ್ಕತ್ತಾ ನೈಟ್ ರೈಡರ್ಸ್ ಮತ್ತೆ ಗೆಲುವಿನ ಹಳಿಗೆ ಮರಳು ಕಾರ್ಯತಂತ್ರ ಹೆಣದಿದೆ. ಇನ್ನೂ ಚೆನ್ನೈ ತಂಡ ಈ ಪಂದ್ಯ ಗೆದ್ದು ತನ್ನ ಪ್ಲೇ ಆಫ್ ಹಾದಿ ಸುಗಮಗೊಳಿಸುವ ನಿಟ್ಟಿನಲ್ಲಿ ಪ್ಲಾನ್ ಮಾಡಿದೆ.

ಸಿಎಸ್ಕೆಗೆ ಗೆಲುವಿನ ಓಟಕ್ಕೆ ಬ್ರೇಕ್ ಹಾಕುತ್ತಾ ಕೆಕೆಆರ್..?
ಸತತ ಎರಡು ಸೋಲುಗಳಿಂದ ಕೆಂಗೆಟ್ಟಿರೋ ಡಿ.ಕೆ.ಗ್ಯಾಂಗ್ ತವರಿನ ಅಂಗಳದಲ್ಲಿ ಮತ್ತೆ ಗೆಲುವಿನ ಟ್ರ್ಯಾಕ್ಗೆ ಮರಳುವ ಆತ್ಮವಿಶ್ವಾಸದಲ್ಲಿದೆ. ಮೊನ್ನೆ ಡೆಲ್ಲಿ ವಿರುದ್ಧದ ಪಂದ್ಯದಲ್ಲಿ ಬದಲಾವಣೆಯೊಂದಿಗೆ ಕಣಕ್ಕಿಳಿದಿದ್ದ ಶಾರೂಖ್ ಹುಡುಗ್ರು ಅದೇ ತಂಡವನ್ನು ಕಣಕ್ಕಿಳಿಸೋದು ಪಕ್ಕಾ . ಕಳೆದ ಪಂದ್ಯದಲ್ಲಿ ಆರಂಭಿಕನಾಗಿ ಕಣಕ್ಕಿಳಿದಿದ್ದ ಮತ್ತೆ ಜೋ ಡೆನ್ಲಿ ತಮ್ಮ ಸಾಮರ್ಥ್ಯ ತೋರಿಸೋಕೆ ರೆಡಿಯಾಗಿದ್ದಾರೆ. ರಾಬಿನ್ ಉತ್ತಪ್ಪ, ನಾಯಕ ದಿನೇಶ್ ಕಾರ್ತಿಕ್, ಶುಭ್ಮನ್ಗಿಲ್ ಉತ್ತಮ ಫಾರ್ಮನಲ್ಲಿದ್ದು, ಮ್ಯಾಚ್ ವಿನ್ನರ್ ಅಲ್ರೌಂಡರ್ ಆಂಡ್ರೋ ರಸೆಲ್ ತಮ್ಮ ಮಸಲ್ ಪವರ್ ತೋರಿಸೋಕೆ ರೆಡಿಯಾಗಿದ್ದಾರೆ. ಇನ್ನು ಬೌಲಿಂಗ್ ಡಿಪಾರ್ಟ್ಮೆಂಟ್ನಲ್ಲಿ ಲೂಕಿ ಫರ್ಗ್ಯೂಸನ್, ಕನ್ನಡಿಗ ಪ್ರಸಿದ್ಧ್ ಕೃಷ್ಣ, ಸ್ಪಿನ್ನರ್ಗಳಾದ ಪಿಯೂಷ್ ಚಾವ್ಲಾ, ಕುಲ್ದೀಪ್ ಯಾದವ್ ಬ್ಯಾಟ್ಸ್ಮನ್ಗಳಿಗೆ ವಿಲನ್ ಆಗಲಿದ್ದಾರೆ.

ಫ್ಲೇ ಆಫ್ ಮೇಲೆ ಚೆನ್ನೈ ಸೂಪರ್ ಕಿಂಗ್ಸ್ ಕಣ್ಣು.!
ಟೂರ್ನಿಯಲ್ಲಿ 7 ಪಂದ್ಯಗಳ ಪೈಕಿ 6 ಪಂದ್ಯಗಳನ್ನು ಗೆದ್ದು ಅಂಕಪಟ್ಟಿಯಲ್ಲಿ ಅಗ್ರಸ್ಥಾನ ಕಾಯ್ದುಕೊಂಡಿರುವ ಚೆನ್ನೈ, ಇಂದಿನ ಪಂದ್ಯ ಗೆದ್ದು ತನ್ನ ಫ್ಲೇ ಆಫ್ ಹಾದಿ ಸುಗಮವಾಗಿಸುವ ನಿಟ್ಟಿನಲ್ಲಿ ಪ್ಲಾನ್ ರೂಪಿಸಿದೆ. ಐಪಿಎಲ್ನಲ್ಲಿ ಚೆನ್ನೈ ಸೂಪರ್ ಕಿಂಗ್ಸ್ ಅಗ್ರಬ್ಯಾಟ್ಸ್ಮನ್ಗಳು ಸ್ಥಿರಪ್ರದರ್ಶನ ನೀಡುವಲ್ಲಿ ಸಂಪೂರ್ಣ ವಿಫಲರಾಗಿದ್ದಾರೆ. ಬ್ಯಾಟಿಂಗ್ನಲ್ಲಿ ನಾಯಕ ಧೋನಿ ಅವರನ್ನು ತಂಡ ಹೆಚ್ಚಾಗಿ ಅವಲಂಭಿಸಿದೆ. ಫಾಪ್ ಡ್ಯುಪ್ಲಿಸಿಸ್, ಶೇನ್ ವಾಟ್ಸನ್, ಸುರೇಶ್ ರೈನಾ, ಕೇದರ್ ಜಾಧವ್ ಅಬ್ಬರಿಸಬೇಕಿದೆ. ಇನ್ನೂ ಅಂಬಾಟಿ ರಾಯುಡು ಫಾರ್ಮ್ಗೆ ಮರಳಿದ್ದು ಧೋನಿಗೆ ತುಸು ರಿಲೀಫ್ ನೀಡಿದೆ.ಜಡೇಜ, ತಾಹಿರ್, ಹರ್ಭಜನ್, ಸ್ಯಾಟ್ನರ್ ಚೆನ್ನೈ ತಂಡದ ಸ್ಪಿನ್ಅಸ್ತ್ರವಾಗಿದ್ದಾರೆ.

ಸ್ಥಳೀಯ ಸುದ್ದಿ ಮತ್ತು ವೇಗದ ವಿತರಣೆಗಾಗಿ ನಮ್ಮ Android ಅಪ್ಲಿಕೇಶನ್ ಅನ್ನು ಡೌನ್ಲೋಡ್ ಮಾಡಿ