2ನೇ ಪಂದ್ಯದಲ್ಲಿ ಹೈದ್ರಾಬಾದ್​-ಡೆಲ್ಲಿ ಕಾದಾಟ

2ನೇ ಪಂದ್ಯದಲ್ಲಿ ಸನ್​ ರೈಸರ್ಸ್​ ಹೈದ್ರಾಬಾದ್​​- ಡೆಲ್ಲಿಕ್ಯಾಪಿಟಲ್ಸ್ ತಂಡಗಳು ಕಾದಾಟ ನಡೆಸಲಿವೆ.ಹೈದ್ರಾಬಾದ್​​ನ ಉಪ್ಪಾಳ್  ಅಂಗಳದಲ್ಲಿ  ಉಭಯ ತಂಡಗಳು ಹೋರಾಡಲಿವೆ. ಕಳೆದೆರಡು ಪಂದ್ಯಗಳಲ್ಲಿ ಸೋತಿರುವ ಹೈದ್ರಾಬಾದ್​ ಪ್ಲೇ  ಆಫ್ ಗೆ  ಹೋಗಬೇಕಿದ್ದಲ್ಲಿ   ಮುಂದಿನ  ಎಲ್ಲ  ಪಂದ್ಯಗಳನ್ನ  ಗೆಲ್ಲಲ್ಲೇಬೇಕಾದ ಅನಿವಾರ್ಯತೆಯನ್ನ ಎದುರಿಸುತ್ತಿದೆ.  ಅಲ್ದೇ ಡೆಲ್ಲಿ ವಿರುದ್ಧದ ,ಮೊದಲ ಪಂದ್ಯದ ಸೋಲಿನ ಪ್ರತೀಕಾರ ತೀರಿಸಿಕೊಳ್ಳಲು ಕಾದು ಕುಳಿತಿದೆ. ಇನ್ನೂ ಸತತ 2 ಪಂದ್ಯಗಗಳನ್ನು ಗೆದ್ದಿರೋ ಡೆಲ್ಲಿ ಹ್ಯಾಟ್ರಿಕ್​ ಗೆಲುವಿನ ಮೇಲೆ ಕಣ್ಣಿಟ್ಟಿದೆ.

ತವರಿನಲ್ಲಿ ಡೆಲ್ಲಿಗೆ ತಿರುಗೇಟು ನೀಡುತ್ತಾ ಹೈದ್ರಾಬಾದ್?

ಹೈದ್ರಾಬಾದ್ ತಂಡದಲ್ಲಿ ಘಟಾನುಘಟಿ ಬ್ಯಾಟ್ಸ್​ಮನ್​ಗಳ ದಂಡೇ ಇದೆ. ಆದ್ರೆ, ಆರಂಭಿಕಾರದ ಡೇವಿಡ್​ ವಾರ್ನರ್, ಜಾನಿ ಬೇರ್​​ ಸ್ಟೋ ಮೇಲೆಯೇ ತಂಡ ಸಂಪೂರ್ಣ ಅವಲಂಭಿಸಿದೆ. ಮಧ್ಯಮ ಕ್ರಮಾಂಕ ಬ್ಯಾಟ್ಸ್​ಮನ್​ಗಳಾದ ಮನೀಶ್​ ಪಾಂಡೆ, ದೀಪಕ್​ ಹೂಡಾ, ಯೂಸೂಪ್​ ಪಠಣ್​​, ಮಹಮ್ಮದ್​ ನಬೀ ಜವಾಬ್ದಾರಿ  ಆಟ ಇನ್ನು   ಬಂದಿಲ್ಲ. ಇನ್ನೂ ​ ಬೌಲಿಂಗ್​ ಡಿಪಾರ್ಟ್​ಮೆಂಟ್​ನಲ್ಲಿ  ​​​ ಸುಧಾರಿಸಬೇಕಿದೆ.  ಸ್ವಿಂಗ್ ಸ್ಪೆಷಲಿಸ್ಟ್​ ಭುವನೇಶ್ವರ್​ ಕುಮಾರ್, ಸಂದೀಪ್ ಶರ್ಮಾ, ಸಿದ್ಧಾರ್ಥ್​ ಕೌಲ್ , ಇನ್ನು ಸ್ಪಿನ್​ ಡಿಪಾರ್ಟ್​ಮೆಂಟ್​ನಲ್ಲಿ  ಮಿಸ್ಟ್ರಿ ಸ್ಪಿನ್ನರ್ ರಶೀದ್ ಖಾನ್​, ಮೊಹಮ್ಮದ್​ ನಬಿ  ಸೂಪರ್​ ಸ್ಪೆಲ್​ ಮೂಲಕ ಈಗಾಗಲೇ ಎಲ್ಲರ ಗಮನ ಸೆಳೆದಿದ್ದು ಅದನ್ನೇ ಇಂದಿನ ಪಂದ್ಯದಲ್ಲಿ ಮುಂದುವರಿಸಿದ್ರೆ, ಹೈದ್ರಾಬಾದ್​ ಗೆಲುವಿನ ಟ್ರ್ಯಾಕ್​ಗೆ ಬರೋದ್ರಲ್ಲಿ  ಅನುಮಾನವೇ ಇಲ್ಲ .

ಹ್ಯಾಟ್ರಿಕ್​​ ಗೆಲುವಿನ ಮೇಲೆ ಡೆಲ್ಲಿ ಕ್ಯಾಪಿಟಲ್ಸ್​ ಕಣ್ಣು..!

ಟೂರ್ನಿಯ  ಆರಮಭದಲ್ಲಿ  ಫ್ಲಾಪ್​  ಪರ್ಫಾಮನ್ಸ್ ಕೊಟ್ಟಿದ್ದ  ಓಪನರ್  ಶಿಖರ್ ಧವನ್ ​ಮೊನ್ನೆ  ಕೋಲ್ಕತ್ತಾ ​ ವಿರುದ್ಧ 97 ರನ್​ ಕಲೆ ಹಾಕುವ  ಮೂಲಕ  ಫಾರ್ಮ್​ಗೆ ಮರಳಿದ್ದಾರೆ. ನಾಯಕ ಶ್ರೇಯಸ್​ ಅಯ್ಯರ್​​ ದೊಡ್ಡ ಇನ್ನಿಂಗ್ಸ್​​ ಕಟ್ಟಬೇಕಿದೆ. ಪೃಥ್ವಿ ಶಾ, ರಿಷಭ್​ ಪಂತ್​​ ಒಂದು ಪಂದ್ಯದಲ್ಲಿ ಮಿಂಚಿದ್ದು ಬಿಟ್ಟರೆ ಉಳಿದ ಪಂದ್ಯಗಳಲ್ಲಿ ಹೇಳಿಕೊಳ್ಳುವಂತ ಸಾಧನೆ ಮಾಡಿಲ್ಲ. ಕಾಲಿನ್ ಇನ್​ಗ್ರಾಮ್ ಸ್ಲಾಗ್​​​​​​​ ಮಿಂಚಿದ್ರೆ, ಹೈದ್ರಾಬಾದ್​ ಲೆಕ್ಕಾಚಾರ ತಲೆಕೆಳಗೆ ಆಗೋದು ಖಂಡಿತ.

ಬೌಲಿಂಗ್​​ ಡಿಪಾರ್ಟ್​ಮೆಂಟ್​​​ನಲ್ಲಿ ಕ್ರಿಸ್​​​ ಮೋರಿಸ್​, ಕಗಿಸೋ ರಬಡ ತಂಡದ ಟ್ರಂಪ್​ ಕಾರ್ಡ್​ಗಳಾಗಿದ್ದಾರೆ. ಹಿರಿಯ ಬೌಲರ್​​ ಇಶಾಂತ್ ಶರ್ಮಾ ಅನುಭವ ತಂಡಕ್ಕಿರೋದು ಡೆಲ್ಲಿಗೆ ಪ್ಲಸ್​ ಪಾಯಿಂಟ್. ಆದ್ರೆ, ಸ್ಪಿನ್ನರ್​​ಗಳನ್ನು ಬದಲಾವಣೆ ಮಾಡ್ತಿದ್ದರು​ ದಂಡೆನೆಗೊಳಗಾಗುತ್ತಿರೋದು ಶ್ರೇಯಸ್​ ಅಯ್ಯರ್​ಗೆ ತಲೆನೋವಾಗಿ ಪರಿಣಮಿಸಿದೆ.ಒಟ್ಲಲ್ಲಿ ಸೂಪರ್​ ಸಂಡೇಯ ನಾಲ್ಕು ತಂಡಗಳ ಕಾದಾಟ ಕ್ರಿಕೆಟ್​ ಅಭಿಮಾನಿಗಳಿಗೆ ಭರ್ಜರಿ ಎಂಟರ್​​ಟೈನ್​​ಮೆಂಟ್​ ನೀಡೋದ್ರಲ್ಲಿ ಅನುಮಾನವೇ ಇಲ್ಲ

ಸ್ಥಳೀಯ ಸುದ್ದಿ ಮತ್ತು ವೇಗದ ವಿತರಣೆಗಾಗಿ ನಮ್ಮ Android ಅಪ್ಲಿಕೇಶನ್ ಅನ್ನು ಡೌನ್ಲೋಡ್ ಮಾಡಿ