ಕಾನ್ಪುರ: ಲೋಕಸಭಾ ಚುನಾವಣೆ ಹಿನ್ನಲೆಯಲ್ಲಿ ರಾಜಕೀಯ ಪಕ್ಷಗಳ ಮತಬೇಟೆ ಬರದಿಂದ ಸಾಗಿದೆ. ಮತದಾರರ ಓಲೈಕೆಗಾಗಿ ಅಭ್ಯರ್ಥಿಗಳು ನಾನಾ ಕಸರತ್ತು ಮಾಡುತ್ತಿದ್ದಾರೆ. ಈ ನಡುವೆ ಉನ್ನಾವೋ ಲೋಕಸಭಾ ಕ್ಷೇತ್ರದ ಬಿಜೆಪಿ ಅಭ್ಯರ್ಥಿ ಸಾಕ್ಷಿ ಮಹಾರಾಜ್ ನನಗೆ ಮತ ಹಾಕದಿದ್ದರೆ ನಾನು ಶಾಪ ನೀಡುತ್ತೇನೆ ಎನ್ನುವ ಮೂಲಕ ಮತದಾರರ ಭೀತಿಹುಟ್ಟಿಸಿ ಮತಯಾಚನೆ ಮಾಡುತ್ತಿದ್ದು, ವಿವಾದಕ್ಕೆ ಕಾರಣವಾಗಿದೆ.
ಚುನಾವಣಾ ಪ್ರಚಾರದಲ್ಲಿ ತೊಡಗಿ ಮತಭೇಟೆಯಲ್ಲಿ ಪಾಲ್ಗೊಂಡಿರುವ ಸಾಕ್ಷಿ ಮಹಾರಾಜ್, ಒಬ್ಬ ಸನ್ಯಾಸಿ ನಿಮ್ಮ ಮನೆ ಬಾಗಿಲಿಗೆ ಬಂದು ಮತ ಬಿಕ್ಷೆ ಬೇಡುತ್ತಿದ್ದಾನೆ. ಒಂದು ವೇಳೆ ನೀವು ಬಿಕ್ಷೆ ನೀಡಿದಿದ್ದರೆ, ಶಾಪಕ್ಕೆ ಗುರಿಯಾಗುತ್ತಿರಿ. ಇದನ್ನು ನಾನು ಹೇಳುತ್ತಿಲ್ಲ. ಇದೆಲ್ಲ ಶಾಸ್ತ್ರದಲ್ಲೇ ಇದೆ. ನಾನು ಧಾನ ಅಥವಾ ದೌಲತ್ ಕೇಳುಲು ಬಂದಿಲ್ಲ. ಮತ ಕೇಳಲು ಬಂದಿದ್ದೇನೆ. ನೀವು ನನಗೆ ಮತ ನೀಡಿ ಚುನಾವಣೆಯಲ್ಲಿ ಗೆಲ್ಲಿಸಿದರೆ, 1.5 ಕೋಟಿ ಭಾರತೀಯರ ಹಣೆಬರಹ ಬದಲಾಗಲಿದೆ ಎಂದು ಹೇಳಿದ್ದಾರೆ.
ನಾನೊಬ್ಬ ಸನ್ಯಾಸಿ. ನೀವು ಮತ ನೀಡಿದರೆ ಮಾತ್ರ ಗೆಲ್ಲುತ್ತೇನೆ. ಇಲ್ಲದಿದ್ದರೆ ದೇವಸ್ಥಾನದಲ್ಲಿ ಭಜನ್, ಕೀರ್ತನ್ ಮಾಡುತ್ತೇನೆ. ಸನ್ಯಾಸಿಯಾಗಿರುವ ನಾನು, ನಿಮ್ಮ ಮನೆ ಬಾಗಿಲಿಗೆ ಬಂದು ಮತ ಕೇಳುತ್ತಿದ್ದೇನೆ. ಚುನಾವಣೆಯಲ್ಲಿ ಸನ್ಯಾಸಿಯನ್ನು ನಿರಾಕರಿಸಿದರೆ, ನಿಮ್ಮ ಕುಟುಂಬದ ಸುಖ ಸಂತೋಷವನ್ನು ತೆಗೆದುಕೊಂಡು, ಶಾಪ ನೀಡಿ ಹೋಗುತ್ತೇನೆ ಎಂದಿದ್ದಾರೆ. ಸಾಕ್ಷಿ ಮಹಾರಾಜ್ ಅವರ ಈ ಹೇಳೆ ಈಗ ಭಾರೀ ವಿವಾದಕ್ಕೆ ಕಾರಣವಾಗಿದೆ.
If you don’t vote for me, I will return sins to you: BJP MP Sakshi Maharaj