ಬೀದರ್ ಲೋಕಸಭಾ ಕ್ಷೇತ್ರದ ಸಮಗ್ರ ವಿಜನ್ ಹೊಂದಿರುವ ಕಾಂಗ್ರೆಸ್ ಅಭ್ಯರ್ಥಿ ಈಶ್ವರ ಖಂಡ್ರೆ ಅವರಿಗೆ ಎರಡು ಲಕ್ಷ ಮತಗಳ ಅಂತರದಿಂದ ಗೆಲ್ಲುಸುವ ಮೂಲಕ ದಿಲ್ಲಿಗೆ ಕಳುಹಿಸಿ, ಅವಕಾಶ ಕೊಟ್ಟರು ಕೆಲಸ ಮಾಡದ ಭಗವಂತ ಖೂಬಾ ಗೆ ಮನೆಗೆ ಕಳುಹಿಸಿ ಎಂದು ಕಾಂಗ್ರೆಸ್ ಅಭ್ಯರ್ಥಿ ಈಶ್ವರ ಖಂಡ್ರೆ ಪತ್ನಿ ಡಾ.ಗೀತಾ ಖಂಡ್ರೆ ಹೇಳಿದರು.
ಬೀದರ್ ಲೋಕಸಭಾ ಕ್ಷೇತ್ರದ ವ್ಯಾಪ್ತಿಯ ಕಲಬುರಗಿ ಜಿಲ್ಲೆಯ ಆಳಂದ ತಾಲೂಕಿನ ಜಿಡಗಾ ಸೇರಿ ವಿವಿಧೆಡೆ ಪ್ರಚಾರ ನಡೆಸಿದ ಡಾ.ಗೀತಾ ಖಂಡ್ರೆ, ಈ ಬಾರಿ ಮೋದಿ ಹವಾ ನಡೆಯಲ್ಲ. ಈಶ್ವರ ಖಂಡ್ರೆ ಗೆಲುವು ಗ್ಯಾರಂಟಿ ಎಂದು ವಿಶ್ವಾಸ ವ್ಯಕ್ತಪಡಿಸಿದರು.
ಬೀದರ್ ಕ್ಷೇತ್ರದ ವ್ಯಾಪ್ತಿಗೆ ಬರುವ ಕಲಬುರಗಿ ಜಿಲ್ಲೆಯ ಆಳಂದ ಹಾಗೂ ಚಿಂಚೋಳಿ ಸಮಗ್ರ ಅಭಿವೃದ್ಧಿ ಮಾಡಲಾಗುವುದು ಎಂದು ಭರವಸೆ ನೀಡಿದರು.
ಮಾತಿನಲ್ಲಿ ಮನೆ ಕಟ್ಟುವ ಬಿಜೆಪಿಗೆ ಈ ಬಾರಿ ಜನ ಮನೆಗೆ ಕಳುಹಿಸಲು ನಿರ್ಧರಿಸಿದ್ದಾರೆ. ಎಲ್ಲರನ್ನೂ ವಿಶ್ವಾಸಕ್ಕೆ ತೆಗೆದುಕೊಳ್ಳುವ ಕಾಂಗ್ರೆಸ್ ಅಭ್ಯರ್ಥಿ ಈಶ್ವರ ಖಂಡ್ರೆ ಅವರು ಭಾರಿ ಬಹುಮತದಿಂದ ಆರಿಸಿ ಬರಲುದ್ದಾರೆ ಎಂದು ಹೇಳಿದರು.
ಇದಕ್ಕೂ ಮುನ್ನ ಜಿಡಗಾದ ಶ್ರೀ ಕ್ಷೇತ್ರ ನವ ಕಲ್ಯಾಣ್ ಮಠಕ್ಕೆ ಭೇಟಿ ನೀಡಿ ಅಪ್ಪಾಜಿ ರವರ ದರ್ಶನ ಪಡೆದರು. ನಂತರ ಜಿಡಗಾ ಗ್ರಾಮದಲ್ಲಿ ಮನೆ ಮನೆಗೆ ತೆರಳಿ ಕಾಂಗ್ರೆಸ್ ಜೆಡಿ ಎಸ್ ಮೈತ್ರಿ ಅಭ್ಯರ್ಥಿ ಪರ ಮತಯಾಚಿಸಿದರು.
ಆರ್.ಕೆ. ಪಾಟೀಲ್, ಗುರುಶರಣ ಪಾಟೀಲ್, ಪುಜಾ ರಮೇಶ, ಶಾಂತಲಿಂಗಪ್ಪ, ಪಪ್ಪು ಪಾಟೀಲ್ ಖಾನಾಪುರ ಇತರರಿದ್ದರು.