ಬೀದರ್: ಮಾಜಿ ಸಚಿವ ಸುಭಾಷ ಅಷ್ಟೂರೆ ಅವರ ಸಹೋದರನ ಮಗ ನಿರಂಜನ ಅಷ್ಟೂರೆ ಬಿಜೆಪಿ ತೊರೆದು ಕಾಂಗ್ರೆಸ್ ಸೇರ್ಪಡೆಯಾದರು.
ಬುಧವಾರ ಭಾಲ್ಕಿ ಯಲ್ಲಿ ನಡೆದ ಕಾರ್ಯಕ್ರಮದಲ್ಲಿ ಕಾಂಗ್ರೆಸ್ ಗೆ ಸೇರ್ಪಡೆಯಾದ ನಿರಂಜನ ಅಷ್ಟೂರೆ ಅವರಿಗೆ ಪಕ್ಷದ ಧ್ವಜ ನೀಡಿ ಕಾಂಗ್ರೆಸ್ ನ ಲೋಕಸಭಾ ಅಭ್ಯರ್ಥಿ ಈಶ್ವರ ಖಂಡ್ರೆ ಬರಮಾಡಿಕೊಂಡರು.
ಈ ವೇಳೆ ಮಾತನಾಡಿದ ಈಶ್ವರ ಖಂಡ್ರೆ, ಬರುವ ದಿನಗಳಲ್ಲಿ ಇನ್ನೂ ವಿವಿಧ ಪಕ್ಷದ ಹಲವು ಮುಖಂಡರು ಕಾಂಗ್ರೆಸ್ ಗೆ ಸೇರ್ಪಡೆಯಾಗಲಿದ್ದಾರೆ ಎಂದು ಹೇಳಿದರು.
ಕ್ಷೇತ್ರದಲ್ಲಿ ನನ್ನ ಅಭಿವೃದ್ಧಿ ಕಾರ್ಯಗಳನ್ನು ನೋಡಿ ಬಿಜೆಪಿ, ಜೆಡಿಎಸ್ ನ ಹಲವು ಮುಖಂಡರು ಸ್ವ ಇಚ್ಛೆಯಿಂದ ಕಾಂಗ್ರೆಸ್ ಗೆ ಬರುತ್ತಿದ್ದಾರೆ. ಪಕ್ಷದ ತತ್ವ ಸಿದ್ಧಾಂತ ನಂಬಿ ಬರುವವರೆಗೆ ಸ್ವಾಗತ ಎಂದು ಹೇಳಿದರು.
ಈ ಚುನಾವಣೆ ಯಲ್ಲಿ ಬಿಜೆಪಿ ಅಭ್ಯರ್ಥಿ ಭಗವಂತ ಖೂಬಾ ಸೋಲು ಗ್ಯಾರಂಟಿ. ಅಹಂನಿಂದ ಮೆರೆಯುತ್ತಿರುವ ಖೂಬಾ ಗೆ ಜನರೇ ತಕ್ಕ ಪಾಠ ಕಲಿಸಲಿದ್ದಾರೆ ಎಂದು ಹೇಳಿದರು.
ಮುಖಂಡರಾದ ಪ್ರಕಾಶ ಮಾಶೆಟ್ಟಿ, ಶಶಿಧರ ಕೊಸಂಬೆ ಇತರರು ಇದ್ದರು.