ಕಡಲ ತಡಿಯಲ್ಲಿ ಸಂಯುಕ್ತಾ ಮೋಜು…ಫಾರಿನ್​ ಹುಡ್ಗನ ಜತೆ ಕಾಣಿಸಿಕೊಂಡ ಕಿರಿಕ್ ಬೆಡಗಿ

ಬೆಂಗಳೂರು: ಕಿರಿಕ್ ಪಾರ್ಟಿ ಚಿತ್ರದ ಮೂಲಕ ಸ್ಯಾಂಡಲ್​​ವುಡ್​​​ಗೆ ಎಂಟ್ರಿ ಕೊಟ್ಟ ಸಂಯುಕ್ತ ಹೆಗಡೆ, ಒಂದಿಲ್ಲೊಂದು ಕಿರಿಕ್ ಮಾಡಿಕೊಂಡು ಸದಾ ಸುದ್ದಿಯಲ್ಲಿರ್ತಾರೆ. ಅಲ್ಲದೆ ಸೋಷಿಯಲ್ ಮೀಡಿಯಾದಲ್ಲಿ ಹಾಟ್ ಫೋಟೋಗಳ ಹಾಕಿ ಟ್ರೋಲ್ ಆಗ್ತಿರ್ತಾರೆ.

ಇದೀಗ ಈ ಕಿರಿಕ್ ಬೆಡಗಿ ಮತ್ತೆ ಪಡ್ಡೆ ಹೈಕಳ ಹಾರ್ಟ್ ಬೀಟ್ ಏರುಪೇರಾಗುವಂತಹ ಫೋಟೋ ಇನ್​​ಸ್ಟಾಗ್ರಾಂ​ನಲ್ಲಿ ಹಾಕಿದ್ದಾರೆ. ಅಲ್ಲದೆ ಟ್ರೋಲಿಗರಿಗೆ ಆಹಾರವಾಗಿದ್ದಾರೆ. ಸಂಯುಕ್ತಾ, ಕಡಲ ತಡಿಯಲ್ಲಿ ಬಿಕಿನಿ ತೊಟ್ಟು ತಲೆಕೆಳಗಾಗಿ ನಿಂತಿದ್ದಾರೆ. ಇವರ ಕಾಲುಗಳನ್ನು ವಿದೇಶಿ ಹುಡುಗನೊಬ್ಬ ಹಿಡಿದುಕೊಂಡಿದ್ದಾನೆ. ಸಂಯುಕ್ತಾಳ ಈ ಹಾಟ್ ಲುಕ್ ಸಖತ್ ವೈರಲ್ ಆಗುತ್ತಿದೆ.

ಸ್ಥಳೀಯ ಸುದ್ದಿ ಮತ್ತು ವೇಗದ ವಿತರಣೆಗಾಗಿ ನಮ್ಮ Android ಅಪ್ಲಿಕೇಶನ್ ಅನ್ನು ಡೌನ್ಲೋಡ್ ಮಾಡಿ