ಮೋದಿ ಒಬ್ಬ ಡೋಂಗಿ ಪ್ರಧಾನಿ-ಮಾಜಿ ಸಿ.ಎಂ.ಸಿದ್ದರಾಮಯ್ಯ

ಮಹದೇವಪುರ, ಏ.9- ನರೇಂದ್ರ ಮೋದಿ ಒಬ್ಬ ಡೋಂಗಿ ಪ್ರಧಾನಿ ಎಂದು ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ವಾಗ್ದಾಳಿ ನಡೆಸಿದರು.

ಕ್ಷೇತ್ರದ ಆವಲಹಳ್ಳಿಯಲ್ಲಿ ಹಮ್ಮಿಕೊಂಡಿದ್ದ ಬೆಂಗಳೂರು ಕೇಂದ್ರ ಚುನಾವಣಾ ಪ್ರಚಾರ ಸಭೆಯಲ್ಲಿ ಮಾತನಾಡಿದ ಅವರು, ಐದು ವರ್ಷಗಳ ಕಾಲ ಸುಳ್ಳು ಹೇಳಿಕೊಂಡೇ ಅಧಿಕಾರ ಅನುಭವಿಸಿದರು. ವಿದೇಶದಿಂದ ಕಪ್ಪು ಹಣ ತಂದು ಪ್ರತಿಯೊಬ್ಬರ ಖಾತೆಗೆ 15 ಲಕ್ಷ ಹಣ ಹಾಕುತ್ತೇನೆಂದರೆ, ಪ್ರತಿ ವರ್ಷ ಎರಡು ಕೋಟಿ ಉದ್ಯೋಗ ಸೃಷ್ಟಿ ಮಾಡುತ್ತೇನೆ ಎಂದ್ರು ಇವರು ಮಾಡಿದ್ದಾದರೂ ಏನು ? ಬರೀ ಡೋಂಗಿ ಮಾತುಗಳನ್ನು ಆಡಿಕೊಂಡೇ ಐದು ವರ್ಷ ಪೂರೈಸಿದವರು ಎಂದು ಕಿಡಿಕಾರಿದರು.

ನರೇಂದ್ರ ಮೋದಿ ಮನ್ ಕಿ ಬಾತ್ ಅಂತಾರೆ ಮನ್ ಕಿ ಬಾತ್ ನಿಂದ ಯಾರಿಗಾದೂರು ಉಪಯೋಗವಿದೆಯೇ ? ನಮಗೆ ಕಾಮ್ ಕೀ ಬಾತ್ ಬೇಕು.ನರೇಂದ್ರ ಮೋದಿ ನೇತೃತ್ವದ ಬಿಜೆಪಿ ಸರ್ಕಾರ ಕೇಂದ್ರದಲ್ಲಿ ಅಧಿಕಾರಕ್ಕೆ ಬಂದರೆ ಸಂವಿಧಾನವನ್ನೇ ಬದಲಾಯಿಸುತ್ತಾರೆ ಎಚ್ಚರ ಎಂದರು.

ಕಳೆದ ಲೋಕಸಭಾ ಚುನಾವಣಾ ಪ್ರಣಾಳಿಕೆಯಲ್ಲಿದ್ದ ರಾಮಮಂದಿರ ನಿರ್ಮಾಣ ವಿಷಯವನ್ನೇ ಮತ್ತೆ ಪ್ರಸ್ತಾಪ ಮಾಡಿದ್ದಾರೆ, ಜನರಿಂದ ಇಟ್ಟಿಗೆ, ಸಿಮೆಂಟ್, ಹಣ ಸಂಗ್ರಹ ಮಾಡಿ ರಾಮಮಂದಿರ ನಿರ್ಮಾಣ ಮಾಡುತ್ತೇವೆ ಎಂದ್ರು ಎಲ್ಲೋಯ್ತು ಇದರ ಲೆಕ್ಕಾ ಕೊಡಿ ಎಂದು ಹೇಳಿದರು.

ಉದ್ಯೋಗ ಕೊಡಿ ಸ್ವಾಮಿ ಅಂದ್ರೆ ಪಕೋಡ ಮಾರಿ ಜೀವನ ನಡೆಸಿ ಅಂತೀರ, ಡಿಗ್ರಿ ಮಾಡಿ ಪಕೋಡ ಮಾರಿ ಜೀವನ ನಡೆಸಬೇಕಾ ಎಂದು ಪ್ರಶ್ನಿಸಿದರು.

8165 ಕೋಟಿ ರೂ. ರೈತರ ಸಾಲ ಮನ್ನಾ ಮಾಡಿದ್ದೇವೆ, ನರೇಂದ್ರ ಮೋದಿ ಏನು ಮಾಡಿದ್ದಾರೆ, ಯಡಿಯೂರಪ್ಪ ಮುಖ್ಯಮಂತ್ರಿಯಾಗಿದ್ದಾಗ ವಿಧಾನಸಭೆಯಲ್ಲಿ ರೈತರ ಸಾಲಾ ಮನ್ನಾ ಮಾಡಿ ಅಂದ್ರೆ ಸರ್ಕಾರದಲ್ಲಿ ಪ್ರಿಂಟಿಂಗ್ ಮಿಷನ್ ಇಟ್ಟುಕೊಂಡಿಲ್ಲಾ ಅಂದಿದ್ರು, ಆದರೆ ನಾವು ಮಾತ್ರ ಆ ರೀತಿ ಹೇಳಿಲ್ಲ ನುಡಿದಂತೆ ನಡೆದಿದ್ದೇವೆ. ಇತಿಹಾಸದಲ್ಲೇ ಚುನಾವಣೆ ಸಂದರ್ಭದಲ್ಲಿ ನೀಡಿದ್ದ ಭರವಸೆ ಈಡೇರಿಸಿದ ಸರ್ಕಾರವೆಂದರೆ ಅದು ಕಾಂಗ್ರೆಸ್ ಸರ್ಕಾರ ಮಾತ್ರ ಎಂದು ಹೇಳಿದರು.

ಸ್ಥಳೀಯ ಸಂಸದರು ಕಳೆದ 10 ವರ್ಷಗಳಿಂದ ಬೆಂಗಳೂರು ಕೇಂದ್ರ ಲೋಕಸಭಾ ಕ್ಷೇತ್ರಕ್ಕೆ ಯಾವುದೇ ರೀತಿ ಅಭಿವೃದ್ಧಿ ಮಾಡಿಲ್ಲ, ಆದ್ದರಿಂದಲೇ ನರೇಂದ್ರ ಮೋದಿ ಮುಖ ನೋಡಿ ಮತ ನೀಡಿ ಅಂತಾರೆ ಎಂತಾ ಪರಿಸ್ಥಿತಿ ಬಂದು ನೋಡಿ ಇವರಿಗೆ ಎಂದು ವ್ಯಂಗ್ಯವಾಡಿದರು.

ಸುಳ್ಳು ಹೇಳುವುದರಲ್ಲಿ ಬಿಜೆಪಿ ನಿಸ್ಸೀಮರು, ರಾಜ್ಯದಲ್ಲಿ ನಮ್ಮ ಸರ್ಕಾರವಿದ್ದಾಗ ಸ್ಥಳೀಯ ಶಾಸಕ ಅರವಿಂದ ಲಿಂಬಾವಳಿ ಅನುದಾನ ಬೇಕೆಂದು ಒಂದು ಬಾರಿಯೂ ನನ್ನ ಬಳಿ ಕೇಳಲಿಲ್ಲ, ಆದರೆ, ಇಲ್ಲಿನ ಸ್ಥಳೀಯ ಕಾಂಗ್ರೆಸ್ ಜನಪ್ರತಿನಿಧಿಗಳು, ಮುಖಂಡರು ಕೇಳಿಕೊಂಡ ತಕ್ಷಣ ಬಿಡುಗಡೆ ಮಾಡಿ ಅಭಿವೃದ್ಧಿ ಮಾಡಿದ್ದೇನೆ, ಮಂಡೂರಿನಲ್ಲಿ ಕಸದಿಂದ ಹಲವು ರೋಗ ಹರಡುತ್ತಿತ್ತು, ಅದನ್ನು ನಿಲ್ಲಿಸಿದ್ದೇನೆ ಎಂದರು.

ಅನಂತ್‍ಕುಮಾರ್ ಹೇಳ್ತಾರೆ ನಾವು ಅಧಿಕಾರಕ್ಕೆ ಬಂದಿದ್ದೇ ಸಂವಿಧಾನ ಚೇಂಜ್ ಮಾಡೋಕೆ ಅಂತ, ಬೆಂಗಳೂರು ದಕ್ಷಿಣ ಲೋಕಸಭಾ ಬಿಜೆಪಿ ಅಭ್ಯರ್ಥಿ ತೇಜಸ್ ಸೂರ್ಯ ಹೇಳ್ತಾರೆ ಅಂಬೇಡ್ಕರ್ ಪ್ರತಿಮೆ ಧ್ವಂಸ ಮಾಡಬೇಕು ಅಂತ, ಸಂವಿಧಾನವನ್ನು ಹಾಳು ಮಾಡುವ, ಧರ್ಮಗಳ ನಡುವೆ ಕೋಮು ಗಲಬೆ ಹೆಬ್ಬಿಸುವ ಇಂತವರಿಗೆ ಮತ ಹಾಕಬೇಕ ಎಂದು ಪ್ರಶ್ನಿಸಿದರು.

ಯೋಚಿಸಿ ಮತ ನೀಡಿ ಸಂವಿಧಾನ ಉಳಿವಿಗಾಗಿ ಬೆಂಗಳೂರು ಕೇಂದ್ರದಿಂದ ಮೈತ್ರಿ ಅಭ್ಯರ್ಥಿ ರಿಜ್ವಾನ್ ಅರ್ಷದ್ ರವರಿಗೆ ಮತ ನೀಡುವಂತೆ ಮನವಿ ಮಾಡಿದರು.

ಬೆಂಗಳೂರು ಕೇಂದ್ರ ಮೈತ್ರಿ ಅಭ್ಯರ್ಥಿ ರಿಜ್ವಾನ್ ಹರ್ಷದ್, ಶಾಸಕರಾದ ಬೈರತಿ ಬಸವರಾಜ, ಬೈರತಿ ಸುರೇಶ್, ಕೆಪಿಸಿಸಿ ಪ್ರ.ಕಾರ್ಯದರ್ಶಿ ಎ.ಸಿ.ಶ್ರೀನಿವಾಸ್, ಜಿಪಂ ಸದಸ್ಯ ಕೆಂಪರಾಜು, ಬ್ಲಾಕ್ ಅಧ್ಯಕ್ಷ ಎಂಸಿಬಿ ರಾಜಣ್ಣ, ಕಣ್ಣೂರು ಪಂಚಾಯಿತಿ ಅಧ್ಯಕ್ಷ ಅಶೋಕ್, ಮುಖಂಡರಾದ ಬೈರತಿ ರಮೇಶ್, ಅನೀಲ್, ಬಿದರಹಳ್ಳಿ ರಾಜೇಶ್, ಜಗದೀಶ್, ವರ್ತೂರು ಸುರೇಶ್ ಮತ್ತಿತರರಿದ್ದರು.

ಸ್ಥಳೀಯ ಸುದ್ದಿ ಮತ್ತು ವೇಗದ ವಿತರಣೆಗಾಗಿ ನಮ್ಮ Android ಅಪ್ಲಿಕೇಶನ್ ಅನ್ನು ಡೌನ್ಲೋಡ್ ಮಾಡಿ