ಲೋಕಸಭಾ ಚುನಾವಣೆಯಲ್ಲಿ ಸ್ಪರ್ಧಿಸಲ್ಲ; ಗೊಂದಲ ಬೇಡ ಎಂದ ಲೋಕಸಭಾ ಸ್ಪೀಕರ್‌

ಇಂಧೋರ್‌: ಈ ಬಾರಿ ಚುನಾವಣೆಗೆ ತಾವು ಸ್ಪರ್ಧಿಸುವುದಿಲ್ಲ. ಈ ವಿಚಾರದಲ್ಲಿ ಯಾವುದೇ ಗೊಂದಲಗಳೂ ಬೇಡ ಎಂದು ಲೋಕಸಭಾ ಸ್ಪೀಕರ್‌, ಇಂಧೋರ್‌ನ ಬಿಜೆಪಿ ಸಂಸದೆ ಸುಮಿತ್ರಾ ಮಹಾಜನ್‌ ಅವರು ಸ್ಪಷ್ಟಪಡಿಸಿದ್ದಾರೆ.

ಪಕ್ಷ ಇಂಧೋರ್‌ ಅಭ್ಯರ್ಥಿ ಪ್ರಕಟಣೆಗೆ ವಿಳಂಬ ಧೋರಣೆ ಮಾಡುತ್ತಿರುವ ಕುರಿತಾಗಿ ನೋವನ್ನು ವ್ಯಕ್ತಪಡಿಸಿರುವ ಬಿಜೆಪಿ ಹಿರಿಯ ನಾಯಕಿ ಸುಮಿತ್ರಾ ಮಹಾಜನ್‌, ನಾನು ಬಹಳ ಹಿಂದಿನಿಂದಲೂ ವರಿಷ್ಠರ ಬಳಿ ನಿರ್ಣಯವನ್ನು ತೆಗೆದುಕೊಳ್ಳಲು ಹೇಳಿದ್ದೆ. ಆದರೆ ಅವರ ಮನದಲ್ಲಿ ಇನ್ನೂ ಅಸಮಂಜಸ ಇರುವಂತಿದೆ. ಆದ್ದರಿಂದ ನಾನು ಈ ಘೋಷಣೆ ಮಾಡುತ್ತಿದ್ದು, ಈ ಬಾರಿಯ ಚುನಾವಣೆಗೆ ಸ್ಫರ್ಧಿಸುವುದಿಲ್ಲ ಎಂದಿದ್ದಾರೆ.

ಇಂಧೋರ್‌ನ ಜನತೆ ಇದುವರೆಗೆ ನನ್ನ ಮೇಲೆ ಪ್ರೀತಿ ಇರಿಸಿದ್ದಾರೆ. ಪಕ್ಷದ ನಾಯಕರು, ಕಾರ್ಯಕರ್ತರು ಸಹಕರಿಸಿದ್ದಾರೆ ಅವರೆಲ್ಲರಿಗೂ ಹೃದಯದಿಂದ ಅಭಾರಿಯಾಗಿದ್ದೇನೆ ಎಂದು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

ಸುಮಿತ್ರಾ ಮಹಾಜನ್‌ ಅವರು 8 ಬಾರಿ ಇಂಧೋರ್‌ನಿಂದ ಜಯ ಸಾಧಿಸಿ ಸಂಸತ್‌ ಪ್ರವೇಶಿಸಿದ್ದರು.

speaker sumitra mahajan will not contest election

ಸ್ಥಳೀಯ ಸುದ್ದಿ ಮತ್ತು ವೇಗದ ವಿತರಣೆಗಾಗಿ ನಮ್ಮ Android ಅಪ್ಲಿಕೇಶನ್ ಅನ್ನು ಡೌನ್ಲೋಡ್ ಮಾಡಿ