ನ್ಯಾಷನಲ್ ಹೆರಾಲ್ಡ್‌ ಪ್ರಕರಣ: ತೆರವು ಆದೇಶಕ್ಕೆ ಸುಪ್ರೀಂ ತಡೆ

ನವದೆಹಲಿ: ನ್ಯಾಷನಲ್ ಹೆರಾಲ್ಡ್‌ ಪತ್ರಿಕೆ ವಿರುದ್ಧ ನೀಡಿದ್ದ ತೆರವು ಆದೇಶಕ್ಕೆ ಸುಪ್ರೀಂ ಕೋರ್ಟ್ ತಡೆಯಾಜ್ಞೆ ನೀಡಿದೆ.

ಸುಪ್ರೀಂ ಕೋರ್ಟ್ ಮುಖ್ಯ ನ್ಯಾಯಮೂರ್ತಿ ರಂಜನ್‌ ಗೊಗೋಯ್ ಅವರ ನ್ಯಾಯಪೀಠ, ಎಜೆಎಲ್‌ ಅರ್ಜಿ ಮೇರೆಗೆ ಕೇಂದ್ರ ಸರಕಾರದ ಭೂಮಿ ಮತ್ತು ಅಭಿವೃದ್ಧಿ ಕಚೇರಿ (ಲ್ಯಾಂಡ್ ಅಂಡ್ ಡೆವಲಪ್‌ಮೆಂಟ್ ಆಫೀಸ್‌- ಎಲ್‌ &ಡಿಓ) ಗೆ ನೋಟೀಸ್ ಜಾರಿ ಮಾಡಿದೆ.

ಯಂಗ್ ಇಂಡಿಯಾ(ನ್ಯಾಷನಲ್ ಹೆರಾಲ್ಡ್‌ )ದ ಬಹುಪಾಲು ಶೇರುಗಳನ್ನು ಕಾಂಗ್ರೆಸ್ ಅಧ್ಯಕ್ಷ ರಾಹುಲ್ ಗಾಂಧಿ, ಅವರ ತಾಯಿ ಸೋನಿಯಾ ಗಾಂಧಿ ಮತ್ತು ಆಸ್ಕರ್ ಫರ್ನಾಂಡಿಸ್ ಹೊಂದಿದ್ದಾರೆ. ಎಐಸಿಸಿಗೆ ಕೇವಲ 50 ಲಕ್ಷ ರೂ ಪಾವತಿಸಿ ಎಜೆಎಲ್‌ನ 90 ಕೋಟಿ ರೂ ಸಾಲದ ಹೊರೆಯನ್ನು ಯಂಗ್ ಇಂಡಿಯಾ ಖರೀದಿಸಿತ್ತು.

ಕಟ್ಟಡದ ಲೀಸ್ ಷರತ್ತಿನಲ್ಲಿ ಬದಲಾವಣೆಯಾಗಿದೆ ಎಂಬ ಹಿನ್ನೆಲೆಯಲ್ಲಿ ಕಟ್ಟಡ ತೆರವು ಆದೇಶವನ್ನು ಫೆಬ್ರವರಿಯಲ್ಲಿ ದೆಹಲಿ ಹೈಕೋರ್ಟ್ ಎತ್ತಿಹಿಡಿದಿತ್ತು.

2018ರ ಡಿಸೆಂಬರ್ 21ರಂದು ಏಕಸದಸ್ಯ ನ್ಯಾಯಪೀಠ ನೀಡಿದ್ದ ತೀರ್ಪಿನ ವಿರುದ್ಧ ಎಜೆಎಲ್ ಮೇಲ್ಮನವಿ ಸಲ್ಲಿಸಿತ್ತು. ಆ ತೀರ್ಪಿನಲ್ಲಿ, ಎರಡು ವಾರದೊಳಗೆ ಕಟ್ಟಡ ತೆರವುಗೊಳಿಸುವಂತೆ ಎಜೆಎಲ್‌ಗೆ ಆದೇಶಿಸಲಾಗಿತ್ತು.

National Herald case: SC stays Delhi High Court’s order on Herald

ಸ್ಥಳೀಯ ಸುದ್ದಿ ಮತ್ತು ವೇಗದ ವಿತರಣೆಗಾಗಿ ನಮ್ಮ Android ಅಪ್ಲಿಕೇಶನ್ ಅನ್ನು ಡೌನ್ಲೋಡ್ ಮಾಡಿ