2017ರ ಸಿಆರ್​ಪಿಎಫ್​ ಶಿಬಿರದ ಮೇಲೆ ದಾಳಿ ನಡೆಸಿದ್ದ ಉಗ್ರನನ್ನು ಭಾರತಕ್ಕೆ ಒಪ್ಪಿಸಿದ ಯುಎಇ

ನವದೆಹಲಿ: 2017ರಲ್ಲಿ ಸಿಆರ್​ಪಿಎಫ್​ ಶಿಬಿರದ ಮೇಲೆ ದಾಳಿ ನಡೆಸಿ ಯುಎಇಯಲ್ಲಿ ತಲೆಮರೆಸಿಕೊಂಡಿದ್ದ ಪ್ರಮುಖ ಸಂಚುಕೋರ ನಿಸಾರ್​ ಅಹ್ಮದ್​ ತಂತ್ರೆಯನ್ನು ಯುಎಇ ಆಡಳಿತ ಭಾರತದ ವಶಕ್ಕೆ ಒಪ್ಪಿಸಿದೆ.

ಜಮ್ಮು ಮತ್ತು ಕಾಶ್ಮೀರದ ಲೇತ್​ಪೋರಾದಲ್ಲಿ 2017ರ ಡಿಸೆಂಬರ್​ 30ರ ತಡರಾತ್ರಿ ಸಿಆರ್​ಪಿಎಫ್​ ಶಿಬಿರದ ಮೇಲೆ ಜೈಶ್​ ಎ ಮೊಹಮ್ಮದ್​ ಸಂಘಟನೆಯ ಉಗ್ರರು ದಾಳಿ ಮಾಡಿದ್ದರು. ಈ ದಾಳಿಯಲ್ಲಿ ಐವರು ಭದ್ರತಾ ಸಿಬ್ಬಂದಿ ಹುತಾತ್ಮರಾಗಿದ್ದರು.

ವಿಶೇಷ ವಿಮಾನದಲ್ಲಿ ತಂತ್ರೆಯನ್ನು ನವದೆಹಲಿಗೆ ಕರೆತಂದು, ರಾಷ್ಟ್ರೀಯ ತನಿಖಾ ಸಂಸ್ಥೆಯ (ಎನ್​ಐಎ) ಅಧಿಕಾರಿಗಳ ವಶಕ್ಕೆ ಒಪ್ಪಿಸಲಾಗಿದೆ. ಯುಎಇಯಲ್ಲಿ ಅಡಗಿಕೊಂಡಿದ್ದ ತಂತ್ರೆ ವಿರುದ್ಧ ಎನ್​ಐಎ ಅಧಿಕಾರಿಗಳು ಎನ್​ಐಎ ನ್ಯಾಯಾಲಯ ವಾರಂಟ್​ ಹೊರಡಿಸಿತ್ತು.

India gets custody of 2017 CRPF camp attack plotter from UAE

ಸ್ಥಳೀಯ ಸುದ್ದಿ ಮತ್ತು ವೇಗದ ವಿತರಣೆಗಾಗಿ ನಮ್ಮ Android ಅಪ್ಲಿಕೇಶನ್ ಅನ್ನು ಡೌನ್ಲೋಡ್ ಮಾಡಿ