ಕಲರ್ಫುಲ್ ಟೂರ್ನಿಯಲ್ಲಿ ವಿವಾದ ಎಬ್ಬಿಸಿದ ಮನ್ಕಡ್ ಪ್ರಕರಣ: ಕ್ರೀಡಾಸ್ಫೂರ್ತಿ ಮರೆತ ಅಶ್ವಿನ್ಗೆ ಚಾಟಿ ಏಟು

12 ನೇ ಸೀಸನ್ ಐಪಿಎಲ್ನಲ್ಲಿ ಮೊದಲ ವಿವಾದ ಹುಟ್ಟಿಕೊಂಡಿದೆ. ಜೈಪುರದಲ್ಲಿ ರಾಜಸ್ಥಾನ ರಾಯಲ್ಸ್ ಹಾಗು ಕಿಂಗ್ಸ್ ಇಲೆವೆನ್ ಪಂಜಾಬ್ ನಡುವಿನ ಮೊದಲ ಪಂದ್ಯದಲ್ಲಿ, ಜೋಸ್ ಬಟ್ಲರ್ ಔಟಾದ ರೀತಿ ಈಗ ಕ್ರಿಕೆಟ್ ವಲಯದಲ್ಲಿ ತೀವ್ರ ಚರ್ಚಗೆ ಗ್ರಾಸವಾಗಿದೆ.

ಕ್ರೀಡಾ ಸ್ಫೂರ್ತಿ ಮರೆತ ಕೇರಂ ಸ್ಪಿನ್ನರ್
ಮೊನ್ನೆ ರಾಜಸ್ಥಾನ ರಾಯಲ್ಸ್ ತಂಡದ ಓಪನರ್ ಜೋಸ್ ಬಟ್ಲರ್ ಕೇರಂ ಸ್ಪಿನ್ನರ್ ಕೇರಂ ಸ್ಪಿನ್ನರ್ ಆರ್.ಅಶ್ವಿನ್ ಅವರ 13ನೇ ಓವರ್ನಲ್ಲಿ ಅಶ್ವಿನ್ ಬೌಲ್ ಹಾಕುವ ಮೊದಲೇ ಕ್ರೀಸ್ ಬಿಟ್ಟಿದ್ರು. ಇದನ್ನ ನೋಡಿದ ಅಶ್ವಿನ್ ಬಾಲ್ ಎಸೆಯದೇ ವಿಕೆಟ್ ಎಗರಿಸಿ ಮನ್ಕಡ್ ರನೌಟ್ಗಾಗಿ ಅಂಪೈರ್ಗೆ ಮನವಿ ಮಾಡಿದ್ರು. ಆದ್ರೆ ಆನ್ಫೀಲ್ಡ್ ಅಂಪೈರ್ ಥರ್ಡ್ ಅಂಪೈರ್ಗೆ ಮೊರೆ ಹೋದ್ರು.

ಥರ್ಡ್ ಅಂಪೈರ್ ಬಟ್ಲರ್ ಔಟೆಂದು ತೀರ್ಪು ನೀಡಿದ್ರು. ಇದರಿಂದ ಶಾಕ್ಗೊಳಗಾದ ಬಟ್ಲರ್ ಅಶ್ವಿನ್ ಜೊತೆ ವಾಗ್ವಾದಕ್ಕಿಳಿದ್ರು. ಕೊನೆಗೆ ಬೇರೆ ದಾರಿ ಇಲ್ಲದೆ ಪೆವಿಲಿಯನ್ನತ್ತ ನಡೆದ್ರು.

ಕ್ರಿಕೆಟ್ ರೂಲ್ಸ್ ಏನೇಳುತ್ತೆ..?
ಕ್ರಿಕೆಟ್ ರೂಲ್ಸ್ 41.16ರ ಪ್ರಕಾರ ನಾನ್ಸ್ಟ್ರೈಕ್ನಲ್ಲಿರುವ ಬ್ಯಾಟ್ಸ್ಮನ್ ಬೌಲರ್ ಬಾಲ್ ಬಿಡುವುದಕ್ಕಿಂತ ಮುಂಚೆ ಕ್ರೀಸ್ ಬಿಟ್ಟು ಕದಲಬಾರದು. ಒಂದು ವೇಳೆ ಹಾಗೇನಾದ್ರು ಮಾಡಿದ್ರೆ ಬೌಲರ್ಗೆ ರನೌಟ್ ಮಾಡುವ ಅವಕಾಶವಿದೆ.

ಅಶ್ವಿನ್ ಮಂಕಡ್ ಶೈಲಿಯಲ್ಲಿ ಔಟ್ ಮಾಡಿದ್ದು ಇದೇ ಮೊದಲಲ್ಲ ಈ ಹಿಂದೆ ಶ್ರೀಲಂಕಾ ವಿರುದ್ಧದ ಏಕದಿನ ಪಂದ್ಯದಲ್ಲಿ ಶ್ರೀಲಂಕಾಬ್ಯಾಟ್ಸ್ಮನ್ ಲಹಿರು ತಿರುಮನ್ನೆ ಅವರನ್ನ ಮಂಕಡ್ ಶೈಲಿಯಲ್ಲಿ ಔಟ್ ಮಾಡಿದ್ರು.

ಸೋಶಿಯಲ್ ಮೀಡಿಯಾದಲ್ಲಿ ಟ್ರೋಲ್ ಆದ ಅಶ್ವಿನ್
ಜೋಸ್ ಬಟ್ಲರ್ ಅವರನ್ನ ಅಶ್ವಿನ್ ವಿರುದ್ಧ ಇದೀಗ ಸೋಷಿಯಲ್ ಮೀಡಿಯಾದಲ್ಲಿ ನೆಗೆಟಿವ್ ಆಗಿ ಟ್ರೋಲ್ ಮಾಡಲಾಗುತ್ತಿದೆ. ಗೆಲುವಿಗಾಗಿ ಕ್ರೀಡಾಸ್ಫೂರ್ತಿ ಮರೆತು ಅಶ್ವಿನ್ ಆಡಿದ್ದಾರೆ. ಬೇಕು ಅಂತಲೇ ಬಟ್ಲರ್ ಕ್ರೀಸ್ ಬಿಡೋವರೆಗು ಕಾದುನೋಡಿ ಔಟ್ಮಾಡಿದ್ದಾರೆ. ಇದು ರಿಪ್ಲೈನಲ್ಲಿ ಸ್ಪಷ್ಟವಾಗಿ ಕಾಣುತ್ತಿದೆ ಎಂದು ಫ್ಯಾನ್ಸ್ ಅಶ್ವಿನ್ ವಿರುದ್ಧ ಹರಿಹಾಯ್ದಿದ್ದಾರೆ.

ಅಶ್ವಿನ್ಗೆ ಬೌಲಿಂಗ್ ಹಾಕು ಉದ್ದೇಶವಿರಲ್ಲಿಲ್ಲ
ಒಬ್ಬ ವ್ಯಕ್ತಿಯಾಗಿ ಮತ್ತು ನಾಯಕನಾಗಿರುವ ಅಶ್ವಿನ್ ಬಗ್ಗೆ ಬೇಸರವಾಯಿತು. ಕ್ರೀಡಾ ಸ್ಪೂರ್ತಿಯಿಂದ ಆಡುವುದಾಗಿ ಐಪಿಎಲ್ನ ಗೋಡೆ ಮೇಲೆ ಎಲ್ಲ ನಾಯಕರು ಸಹಿ ಹಾಕುತ್ತಾರೆ. ಅಶ್ವಿನ್ಗೆ ಬೌಲಿಂಗ್ ಹಾಕು ಉದ್ದೇಶವಿರಲ್ಲಿಲ್ಲ. ಅದನ್ನ ಡೆಡ್ ಬಾಲ್ ಎಂದು ನಿರ್ಧಾರಕ್ಕೆ ಬರಬೇಕಿತ್ತು. ಓವರ್ ಟು ಬಿಸಿಸಿಐ – ಇದು ಐಪಿಎಲ್ಗೆ ಒಳ್ಳೆಯದಲ್ಲ ಶೇನ್ ವಾರ್ನ್ ಎಂದು ಹೇಳಿದ್ದಾರೆ.

ಮನ್ ಕಡ್’ ಮೂಲಕ ಜಾಸ್ ಬಟ್ಲರ್ ರನ್ನು ರನೌಟ್ ಮಾಡಿದ ಪಂಜಾಬ್ ತಂಡದ ನಾಯಕ ಆರ್ ಅಶ್ವಿನ್ ನಡೆಗೆ ಪರ-ವಿರೋಧ ನಿಲುವುಗಳು ವ್ಯಕ್ತವಾಗುತ್ತಿರುವಂತೆಯೇ ಐಪಿಎಲ್ ಚೇರ್ಮನ್ ರಾಜೀವ್ ಶುಕ್ಲಾ ಮನ್ ಕಡ್ ಗೆ ವಿರುದ್ಧವಾಗಿ ಹೇಳಿಕೆ ನೀಡುವ ಮೂಲಕ ಅಶ್ವಿನ್ ಗೆ ಶಾಕ್ ನೀಡಿದ್ದಾರೆ.ಈ ಬಗ್ಗೆ ಮಾತನಾಡಿರುವ ಅವರು, ಐಪಿಎಲ್ ಟೂರ್ನಿಯ ಆರಂಭಕ್ಕೂ ಮೊದಲೇ ಎಲ್ಲ ತಂಡಗಳ ನಾಯಕರೊಂದಿಗಿನ ಸಭೆಯಲ್ಲಿ ಈ ಕುರಿತು ಚರ್ಚಿಸಲಾಗಿತ್ತು. ಅದರಂತೆ ಸೌಜನ್ಯದ ಆಧಾರದ ಮೇಲೆ ‘ಮನ್ ಕಡ್’ (ನಾನ್ ಸ್ಟ್ರೈಕರ್ ನಲ್ಲಿರುವ ಬ್ಯಾಟ್ಸಮನ್ ಬೌಲರ್ ಬಾಲ್ ಎಸೆಯುವ ಮೊದಲೇ ಕ್ರೀಸ್ ಬಿಟ್ಟರೆ ರನೌಟ್ ಮಾಡುವುದು)ಗೆ ಮಾನ್ಯತೆ ಇಲ್ಲ ಎಂದು ನಿರ್ಧರಿಸಲಾಗಿತ್ತು ಎಂದು ಹೇಳಿದ್ದಾರೆ.

ಹ್ಯಾಂಡ್ ಶೇಕ್ ಮಾಡ್ಲಿಲ್ಲ ಜೋಸ್ ಬಟ್ಲರ್
ಪಂದ್ಯ ಮುಗಿದ ಬಳಿಕ ಉಭಯ ತಂಡಗಳ ಆಟಗಾರರು ಎದುರು ಬದುರಾದರು. ಜೋಸ್ ಬಟ್ಲರ್ ಆರ್.ಅಶ್ವಿನ್ಗೆ ಹ್ಯಾಂಡ್ ಶೇಕ್ ಮಾಡಲಿಲ್ಲ. ಇದು ಅಲ್ಲಿದ್ದವರೆನ್ನೆಲ್ಲ ಅಚ್ಚರಿ ಮೂಡಿಸಿತು. ಆಶ್ವಿನ್ ಕೂಡ ಅಚ್ಚರಿಗೆ ಒಳಗಾದವರಂತೆ ಕಂಡರು.

ಒಟ್ಟಾರೆ ಕ್ರಿಕೆಟ್ ನಿಯಮದ ಪ್ರಕಾರ ಅಶ್ವಿನ್ ಔಟ್ ಮಾಡಿದ್ದು ಸರಿನೆ ಆದ್ರೆ ಜಂಟಲ್ಮನ್ ಗೇಮ್ನಲ್ಲಿ ಕ್ರೀಡಾ ಸ್ಪೂರ್ತಿಯಿಂದ ಎಲ್ಲ ಆಟಗಾರರು ಆಡಲೇಬೇಕು ಅನ್ನೋದು ಅಭಿಮಾನಿಗಳು ಆಶಯವಾಗಿದೆ.

ಸ್ಥಳೀಯ ಸುದ್ದಿ ಮತ್ತು ವೇಗದ ವಿತರಣೆಗಾಗಿ ನಮ್ಮ Android ಅಪ್ಲಿಕೇಶನ್ ಅನ್ನು ಡೌನ್ಲೋಡ್ ಮಾಡಿ