ಮತಾಂತರದ ಕುರಿತು ಅಪ್ರಾಪ್ತ ಬಾಲಕಿಯರು ಸ್ವಯಂ ನಿರ್ಧಾರ ಕೈಗೊಳ್ಳಲಾರರು ಎಂಬುದು ನವ ಪಾಕಿಸ್ತಾನಕ್ಕೆ ಗೊತ್ತಿದ್ದಂತಿಲ್ಲ: ಸುಷ್ಮಾ ಸ್ವಾರಾಜ್

ನವದೆಹಲಿ: ಸಿಂಧ್ ಪ್ರಾಂತ್ಯದಿಂದ ಅಪಹರಣಕ್ಕೀಡಾಗಿ, ಬಲವಂತವಾಗಿ ಮತಾಂತರ ಮಾಡಿರುವ ಇಬ್ಬರು ಬಾಲಕೀಯರನ್ನು ಮರಳಿ ಕುಟುಂಬಕ್ಕೆ ಒಪ್ಪಿಸುವಂತೆ ವಿದೇಶಾಂಗ ಸಚಿವೆ ಸುಷ್ಮಾ ಸ್ಚರಾಜ್ ಒತ್ತಾಯಿಸಿದ್ದಾರೆ.

ಈ ಕುರಿತು ಟ್ವೀಟ್ ಮಾಡಿರುವ ಸಚಿವೆ ಸುಷ್ಮಾ, ಅಪಹರಣಕ್ಕೊಳಗಾಗಿರುವ ಬಾಲಕಿಯರ ವಯಸ್ಸು 15 ಮತ್ತು 13. ಇದರಲ್ಲಿ ಯಾವುದೇ ವಿವಾದವಿಲ್ಲ, ಪಾಕಿಸ್ತಾನದಲ್ಲಿ ಹಿಂದೂ ಬಾಲಕಿಯರನ್ನು ಬಲವಂತದ ಮತಾಂತರಕ್ಕೆ ಒಳಪಡಿಸಲಾಗಿದೆ. ಇಬ್ಬರನ್ನು ಅವರ ಕುಟುಂಬಕ್ಕೆ ಮರಳಿಸುವ ಮೂಲಕ ನ್ಯಾಯ ಸಿಗುವಂತಾಗಬೇಕು ಎಂದು ಹೇಳಿದ್ದಾರೆ.

“ಅಪ್ರಾಪ್ತ ಬಾಲಕಿಯರು ಮತಾಂತರದ ಕುರಿತು ಸ್ವಯಂ ನಿರ್ಧಾರ ಕೈಗೊಳ್ಳುವ ಮನಸ್ಥಿತಿ ತಲುಪಿರುವುದಿಲ್ಲ ಎಂಬುದನ್ನು ನವ ಪಾಕಿಸ್ತಾನದ ಪ್ರಧಾನಿ ನಂಬುವುದಿಲ್ಲ ಎನಿಸುತ್ತಿದೆ ಎಂದು ಪಾಕ್ ಪ್ರಧಾನಿ ಇಮ್ರಾನ್ ಖಾನ್ ರನ್ನು ತರಾಟೆಗೆ ತೆಗೆದುಕೊಂಡಿದ್ದಾರೆ

ಹೋಳಿ ಹಬ್ಬದ ಹಿಂದಿನ ದಿನ ಸಿಂದ್ ಪ್ರಾಂತದ ಬಾಲಕಿಯರನ್ನು ಅಪಹರಿಸಿ, ಮತಾಂತರಗೊಳಿಸಿದ ನಂತರ ಮುಸ್ಲಿಂ ಯುವಕರೊಂದಿಗೆ ಬಲವಂತವಾಗಿ ಮದುವೆ ಮಾಡಲಾಗಿದೆ ಎಂಬ ಸುದ್ದಿ ಆಕ್ರೋಶಕ್ಕೆ ಕಾರಣವಾಗಿದೆ. ಬಾಲಕಿಯರನ್ನು ಮರಳಿಸುವಂತೆ ಆಗ್ರಹಿಸಿ ಪೋಷಕರು ಹಾಗೂ ಸಾರ್ವಜನಿಕರು ಪ್ರತಿಭಟನೆ ನಡೆಸಿದ್ದಾರೆ.

Age Of Girls Not Disputed”: Sushma Swaraj To PM Of Naya Pakistan

ಸ್ಥಳೀಯ ಸುದ್ದಿ ಮತ್ತು ವೇಗದ ವಿತರಣೆಗಾಗಿ ನಮ್ಮ Android ಅಪ್ಲಿಕೇಶನ್ ಅನ್ನು ಡೌನ್ಲೋಡ್ ಮಾಡಿ