ವದಂತಿಗಳಿಗೆ ತೆರೆ ಎಳೆದ ಬಾಲಿವುಡ್ ನಟ ಸಂಜಯ್ ದತ್

ಮುಂಬೈ: ಲೋಕಸಭೆ ಚುನಾವಣೆಗೆ ಸ್ಪರ್ಧಿಸುತ್ತಾರೆ ಎಂಬ ವದಂತಿಗಳಿಗೆ ತೆರೆ ಎಳೆದ ಬಾಲಿವುಡ್ ನಟ ಸಂಜಯ್ ದತ್, ತಾವು ಚುನಾವಣೆಗೆ ಸ್ಪರ್ಧಿಸುವುದಿಲ್ಲ ಎಂದು ಸ್ಪಷ್ಟಪಡಿಸಿದ್ದಾರೆ.

ಸಂಜಯ್ ದತ್ ಅವರು ತಮ್ಮ ತಂದೆ ನಟ, ಕಾಂಗ್ರೆಸ್ ಸಂಸದರಾಗಿದ್ದ ದಿ. ಸುನಿಲ್ ದತ್ ಅವರ ಹಾದಿ ತುಳಿಯಲಿದ್ದು, ಘಾಜಿಯಾಬಾದ್ ನಿಂದ ಚುನಾವಣಾ ಕಣಕ್ಕಿಳಿಯುವ ಸಾಧ್ಯತೆ ಇದೆ ಎನ್ನಲಾಗಿತ್ತು. ಆದರೆ ನಾನು ಚುನವಾಣೆಗೆ ಸ್ಪರ್ಧಿಸುತ್ತೇ ಎಂಬುದು ಕೇವಲ ವದಂತಿ. ಚುನಾವಣೆಗೆ ಸ್ಪರ್ಧಿಸುತ್ತಿರುವ ನನ್ನ ಸಹೋದರಿ, ಕಾಂಗ್ರೆಸ್ ಸಂಸದೆ ಪ್ರಿಯಾ ದತ್ ಅವರಿಗೆ ನನ್ನ ಬೆಂಬಲವಿದೆ ಎಂದು ಸಂಜಯ್ ದತ್ ಟ್ವೀಟ್ ಮಾಡಿದ್ದಾರೆ.

ಇನ್ನು ಹೆಚ್ಚಿನ ಸಂಖ್ಯೆಯಲ್ಲಿ ಮತಗಟ್ಟೆಗೆ ಆಗಮಿಸಿ ಜನರು ಮತ ಚಲಾಯಿಸಬೇಕು ಎಂದು ಸಂಜಯ್ ದತ್ ಮನವಿ ತಿಳಿಸಿದ್ದಾರೆ.

Sanjay Dutt Denies Rumours About Contesting Lok Sabha Polls

ಸ್ಥಳೀಯ ಸುದ್ದಿ ಮತ್ತು ವೇಗದ ವಿತರಣೆಗಾಗಿ ನಮ್ಮ Android ಅಪ್ಲಿಕೇಶನ್ ಅನ್ನು ಡೌನ್ಲೋಡ್ ಮಾಡಿ