ನವದೆಹಲಿ :ಮಾ-18:ಕಂಟೇನರ್‌ಗೆ ಕಾರು ಢಿಕ್ಕಿಯಾದ ಪರಿಣಾಮ ಎಮ್ಸ್‌ನ ಮೂವರು ವೈದ್ಯರು ದಾರುಣವಾಗಿ ಸಾವನ್ನಪ್ಪಿದ ಘಟನೆ ಮಥುರಾ ಬಳಿಯಿರುವ ಯಮುನಾ ಎಕ್ಸ್‌ಪ್ರೆಸ್ ವೇನಲ್ಲಿ ಸಂಭವಿಸಿದೆ.
ಇಂದು ನಸುಕಿನ ಜಾವ 2.30 ರ ವೇಳೆಗೆ ಈ ಅವಘಡ ನಡೆದಿದೆ. ದೆಹಲಿಯಿಂದ ಆಗ್ರಾಕ್ಕೆ ವೈದ್ಯರು ಸಹುದ್ಯೋಗಿಯೋರ್ವರ ಜನ್ಮ ದಿನದ ಸಂಭ್ರಮಾಚರಣೆಗೆ ತೆರಳುತ್ತಿದ್ದ ವೇಳೆ ಅಪಘಾತ ಸಂಭವಿಸಿದ್ದು ಕಾರಿನಲ್ಲಿದ್ದ ಮೂವರು ವೈದ್ಯರು ಸ್ಥಳದಲ್ಲೇ ಸಾವನ್ನಪ್ಪಿದ್ದಾರೆ.
ಕಾರು ಅತೀ ವೇಗದಲ್ಲಿ ಚಲಾಯಿಸುತ್ತಿದ್ದುದೇ ಅವಘಡಕ್ಕೆ ಕಾರಣವಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.
ಗಾಯಾಳುಗಳ ಸ್ಥಿತಿಯೂ ಚಿಂತಾಜನಕವಾಗಿದೆ ಗಾಯಾಳುಗಳನ್ನು ಮಥುರಾ ಆಸ್ಪತ್ರೆಯಿಂದ ಏಮ್ಸ್‌ಗೆ ಕರೆದೊಯ್ಯಲಾಗಿದೆ. ಅಪಘಾತದ ತೀವ್ರತೆಗೆ ಕಾರು ನಜ್ಜುಗುಜ್ಜಾಗಿದೆ.