ಕರ್ತವ್ಯ ಲೋಪ ಆರೋ¥: ಪಿಡಿಒ ಅಮಾನತು

 

ಮೈಸೂರು, ಮಾ.17-ಕರ್ತವ್ಯ ಲೋಪ ಆರೋಪದ ಮೇಲೆ ಪಿಡಿಒ ಒಬ್ಬರನ್ನು ಅಮಾನತುಪಡಿಸಲಾಗಿದೆ.

ತಾಲೂಕಿನ ಶ್ರೀರಾಮಪುರ ಗ್ರಾಮ ಪಂಚಾಯ್ತಿಯಲ್ಲಿ ಪಿಡಿಒ ಆಗಿ ಕಾರ್ಯನಿರ್ವಹಿಸುತ್ತಿದ್ದ ಹನುಮಂತರಾಜು ಅಮಾನತುಗೊಂಡಿದ್ದಾರೆ.

ಯುಜಿಡಿ ಕಾಮಗಾರಿ ಹಾಗೂ ಲೈಟ್(ಬಲ್ಬ್) ಖರೀದಿ ಮಾಡುವ ವ್ಯವಹಾರದಲ್ಲಿ ಹಣ ದುರುಪಯೋಗ ಮಾಡಿಕೊಂಡಿರುವ ಬಗ್ಗೆ ಇವರ ವಿರುದ್ಧ ಜಿಲ್ಲಾ ಪಂಚಾಯತ್ ಕಾರ್ಯನಿರ್ವಹಣಾಧಿಕಾರಿಗೆ ಸದಸ್ಯರು ದೂರು ನೀಡಿದ್ದರು.

ಈ ಹಿನ್ನೆಲೆಯಲ್ಲಿ ತನಿಖೆ ನಡೆಸಲಾಗಿ ಹನುಮಂತರಾಜು ಅವರು ಹಣ ದುರುಪಯೋಗಪಡಿಸಿಕೊಂಡಿರುವ ಬಗ್ಗೆ ತನಿಖೆಯಿಂದ ದೃಢಪಟ್ಟ ಹಿನ್ನೆಲೆಯಲ್ಲಿ ಇವರನ್ನು ಅಮಾನತು ಮಾಡಲಾಗಿದೆ.

ಸ್ಥಳೀಯ ಸುದ್ದಿ ಮತ್ತು ವೇಗದ ವಿತರಣೆಗಾಗಿ ನಮ್ಮ Android ಅಪ್ಲಿಕೇಶನ್ ಅನ್ನು ಡೌನ್ಲೋಡ್ ಮಾಡಿ