ಯುಗಾದಿ ಪ್ರಯುಕ್ತ ಮಹಾರಾಷ್ಟ್ರದ ಥಾಣೆಯಲ್ಲಿ 70 ಕಲಾವಿದರು 900 ಕೆಜಿ ರಂಗೋಲಿ ಪುಡಿ ಬಳಸಿ 18,000 ಚದರ ಅಡಿ ಬೃಹತ್ ರಂಗೋಲಿ ಸೃಷ್ಟಿ

ಥಾಣೆ, ಮಾ.17-ಯುಗಾದಿ ಪ್ರಯುಕ್ತ ಮಹಾರಾಷ್ಟ್ರದ ಥಾಣೆಯಲ್ಲಿ 70 ಕಲಾವಿದರು 900 ಕೆಜಿ ವಿವಿಧ ಬಣ್ಣಬಣ್ಣದ ರಂಗೋಲಿ ಪುಡಿ ಬಳಸಿ 18,000 ಚದರ ಅಡಿ ಬೃಹತ್ ರಂಗೋಲಿ ಸೃಷ್ಟಿಸಿ ಗಮನಸೆಳೆದಿದ್ದಾರೆ. ಈ ರಂಗವಲ್ಲಿ ಚಿತ್ತಾರ ಮೂಡಿಸಲು ಕಲಾವಿದರು ತೆಗೆದುಕೊಂಡ ಸಮಯ 9 ಗಂಟೆಗಳು.
ಮಹಾರಾಷ್ಟ್ರದಲ್ಲಿ ಚೈತ್ರ ಮಾಸದ ಮೊದಲ ದಿನ ಗುಡಿ ಪಡ್ವಾ(ಯುಗಾದಿ). ನವ ಸಂವತ್ಸರವನ್ನು ಈ ಬಾರಿ ಪುಣೆಯಲ್ಲಿ ವಿಶೇಷವಾಗಿ ಸ್ವಾಗತಿಸಲಾಯಿತು. ಥಾಣೆಯ ಗಾಂವೋದೇವಿ ಮೈದಾನದಲ್ಲಿ ಇದಕ್ಕಾಗಿ ಬೃಹತ್ ರಂಗೋಲಿಯ ರಂಗುರಂಗಿನ ಚಿತ್ತಾರ ಬಿಡಿಸಲಾಯಿತು.
ಇದಕ್ಕಾಗಿ ಸಜ್ಜುಗೊಳಿಸಿದ ವೇದಿಕೆಯಲ್ಲಿ 70 ಕಲಾವಿದರು 900 ಕೆಜಿ ವಿವಿಧ ಬಣ್ಣದ ರಂಗೋಲಿ ಪುಡಿ ಬಳಸಿ ಕೇವಲ 9 ಗಂಟೆಗಳಲ್ಲಿ 18,000 ಚ.ಅ. ರಂಗವಲ್ಲಿ ಹಾಕಿದರು. ಈ ರಂಗೋಲಿ ಕಲಾಕೃತಿ ಜನಮನವನ್ನು ವಿಶೇಷವಾಗಿ ಆಕರ್ಷಿಸಿತು.
ಈ ಬೃಹತ್ ರಂಗೋಲಿ ದಾಖಲೆ ಪಟ್ಟಿಗೆ ಸೇರಲಿದೆಯೇ ಎಂಬ ಬಗ್ಗೆ ಪರಿಶೀಲಿಸಲಾಗುತ್ತಿದೆ.

ಸ್ಥಳೀಯ ಸುದ್ದಿ ಮತ್ತು ವೇಗದ ವಿತರಣೆಗಾಗಿ ನಮ್ಮ Android ಅಪ್ಲಿಕೇಶನ್ ಅನ್ನು ಡೌನ್ಲೋಡ್ ಮಾಡಿ