ಪ್ರತಿಪಕ್ಷದ ಧ್ವನಿ ಕಿತ್ತುಕೊಂಡ ಕೇಂದ್ರ: ಲೋಕಪಾಲ್ ಆಯ್ಕೆ ಸಮಿತಿ ಸಭೆಗೆ ಹೋಗಲ್ಲವೆಂದ ಖರ್ಗೆ

ನವದೆಹಲಿ: ಲೋಕಪಾಲ್ ಆಯ್ಕೆ ಸಮಿತಿ ಸಭೆಗೆ ಹಾಜರಾಗುವುದಿಲ್ಲ ಎಂದು ಲೋಕಸಭೆ ವಿಪಕ್ಷ ನಾಯಕ ಮಲ್ಲಿಕಾರ್ಜುನ ಖರ್ಗೆ ಕೇಂದ್ರ ಸರ್ಕಾರದ ವಿರುದ್ಧ ಕಿಡಿ ಕಾರಿದ್ದಾರೆ.

ಲೋಕಪಲ್​ ಆಯ್ಕೆ ಸಮಿತಿಗೆ ನನ್ನನ್ನು ವಿಶೇಷ ಆಹ್ವಾನಿತನನ್ನಾಗಿ ಕರೆಯಲಾಗಿದೆ. ಆದರೆ ವಿಶೇಷ ಆಹ್ವಾನಿತರಿಗೆ ಲೋಕಪಾಲ್​ ಆಯ್ಕೆ ಪ್ರಕ್ರಿಯೆಯಲ್ಲಿ ಯಾವುದೇ ಅಧಿಕಾರವಿಲ್ಲ. ಇಂತಹ ಗಂಭೀರ ಸಂಗತಿಯಲ್ಲಿ ಪ್ರತಿಪಕ್ಷದ ಧ್ವನಿ ಕಿತ್ತುಕೊಂಡಿರುವುದನ್ನು ನಾನು ಖಂಡಿಸುತ್ತೇವೆ ಎಂದು ಆಕ್ರೋಶ ವ್ಯಕ್ತಪಡಿಸಿದ್ದಾರೆ.

2014ರಿಂದಲೂ ಕೇಂದ್ರ ಸರ್ಕಾರ ಲೋಕಪಾಲ್​ರನ್ನು ನೇಮಿಸುವ ಸಂಬಂಧ ಯಾವುದೇ ಕ್ರಮ ಕೈಗೊಂಡಿಲ್ಲ. ಈ ಬಗ್ಗೆ ಕಾಯ್ದೆಗೆ ಅಗತ್ಯ ತಿದ್ದುಪಡಿ ತರುವ ಸಣ್ಣ ಪ್ರಯತ್ನವನ್ನೂ ಮಾಡಿಲ್ಲ ಎಂದು ಅಸಮಾಧಾನ ವ್ಯಕ್ತಪಡಿಸಿದರು.

ಲೋಕಪಾಲ್​ ಆಯ್ಕೆ ಸಮಿತಿಯನ್ನು ಸುಪ್ರೀಂಕೋರ್ಟ್​ನ ನಿವೃತ್ತ ನ್ಯಾಯಮೂರ್ತಿ ರಂಜನಾ ಪ್ರಕಾಶ್​ ದೇಸಾಯಿ ಅವರ ನೇತೃತ್ವದಲ್ಲಿ ಕಳೆದ ವರ್ಷ ರಚನೆ ಮಾಡಲಾಗಿದೆ. ಮಾರ್ಚ್​ 7ರಂದು ಕೇಂದ್ರ ಸರ್ಕಾರ ಎಂದು ಆಯ್ಕೆ ಸಮಿತಿ ಸಭೆ ನಡೆಸುತ್ತೆ ಎಂಬುದನ್ನು ಇನ್ನು 10 ದಿನಗಳಲ್ಲಿ ತಿಳಿಸಬೇಕು ಎಂದು ಹೇಳಿತ್ತು. ಅದರಂತೆ ಇಂದು ಸಭೆ ನಡೆಯಲಿದೆ.

Kharge to Boycott Lokpal Meet Today, Tells PM Modi Oppn Can’t be ‘Voiceless’

ಸ್ಥಳೀಯ ಸುದ್ದಿ ಮತ್ತು ವೇಗದ ವಿತರಣೆಗಾಗಿ ನಮ್ಮ Android ಅಪ್ಲಿಕೇಶನ್ ಅನ್ನು ಡೌನ್ಲೋಡ್ ಮಾಡಿ