ಬೋಯಿಂಗ್ 737- ಮ್ಯಾಕ್ಸ್ ವಿಮಾನ ರದ್ದು ಹಿನ್ನಲೆ: ದುಪ್ಪಟ್ಟಾದ ವಿಮಾನ ಪ್ರಯಾಣ ದರ

ಮುಂಬೈ: ಇಥಿಯೋಪಿಯಾ ವಿಮಾನಯಾನ ಸಂಸ್ಥೆಯ ಬೋಯಿಂಗ್ 737- ಮ್ಯಾಕ್ಸ್ ವಿಮಾನ ಪತನದ ನಂತರ ಈ ಸರಣಿಯ ವಿಮಾನಗಳ ಹಾರಾಟವನ್ನು ಸುರಕ್ಷತೆ ಕಾರಣ ರದ್ದುಗೊಳಿಸಿರುವುದರಿಂದ ಈಗ ಪ್ರಯಾಣ ದರ ದುಪ್ಪಟ್ಟಾಗಿದ್ದು, ಇದರಿಂದ ಪ್ರಯಾಣಿಕರು ಪರದಾಡುವಂತಾಗಿದೆ.

ಬೋಯಿಂಗ್ 737 ಮ್ಯಾಕ್ಸ್ ವಿಮಾನ ಹಾರಾಟ ರದ್ದುಗೊಂಡಿರುವ ಕಾರಣ ಈ ವಿಮಾನದಲ್ಲಿ ಸೀಟು ಕಾಯ್ದಿರಿಸಿದ್ದ ಪ್ರಯಾಣಿಕರು ಬೇರೆ ವಿಮಾನಗಳಲ್ಲಿ ಸೀಟು ಕಾಯ್ದಿರಿಸಲು ಮುಂದಾಗಿದ್ದಾರೆ. ಕೊನೆಯ ಘಳಿಗೆಯಲ್ಲಿ ಸೀಟು ಕಾಯ್ದಿರಿಸುವ ಕಾರಣ ಪ್ರಯಾಣದ ದರ ಅಧಿಕವಾಗುತ್ತಿದೆ.

ದೆಹಲಿ- ಮುಂಬೈ, ಮುಂಬೈ-ಚೆನ್ನೈ, ಮುಂಬೈ-ಕೋಲ್ಕತ ಮತ್ತು ಮುಂಬೈ-ಬೆಂಗಳೂರು ಮಾರ್ಗಗಳ ವಿಮಾನದಲ್ಲಿ ಪ್ರಯಾಣ ದರ ದುಪ್ಪಟ್ಟು ಹೆಚ್ಚಳವಾಗಿದೆ ಎಂದು ವಿಮಾನಯಾನ ವಲಯದ ಮೂಲಗಳು ತಿಳಿಸಿವೆ.

ಮುಂಬೈ-ಚೆನ್ನೈ ಪ್ರಯಾಣದರ 26 ಸಾವಿರದ ಗಡಿ ದಾಟಿದೆ. ಕಳೆದ ವರ್ಷ ಈ ಸಮಯದಲ್ಲಿ -ರೂ 5,359 ಇತ್ತು.

Boeing 737 Max ban: Brace yourself for flight cancellations, ticket price hickes

ಸ್ಥಳೀಯ ಸುದ್ದಿ ಮತ್ತು ವೇಗದ ವಿತರಣೆಗಾಗಿ ನಮ್ಮ Android ಅಪ್ಲಿಕೇಶನ್ ಅನ್ನು ಡೌನ್ಲೋಡ್ ಮಾಡಿ