ಮನೆ ಬೀಗವೊಡೆದು ಹಣ ಮತ್ತು ಚಿನ್ನಾಭರಣ ದೋಚಿದ ಕಳ್ಳರು

ಬೆಂಗಳೂರು, ಮಾ.14-ನಗರದಲ್ಲಿ ಎರಡು ಕಡೆ ಮನೆಗಳ್ಳತನ ನಡೆದಿದ್ದು, ಕಳ್ಳರು ಮನೆಯ ಬೀಗ ಒಡೆದು ಹಣ, ಆಭರಣ ಕದ್ದೊಯ್ದಿದ್ದಾರೆ.

ಎಲೆಕ್ಟ್ರಾನಿಕ್‍ಸಿಟಿ: ನೀಲಾದ್ರಿ ನಗರದ ಶಿವಾನಿ ಶೇಖರ್ ಎಂಬುವರು ಮಾ.10 ರಂದು ಊರಿಗೆ ತೆರಳಿದ್ದರು. ಈ ಸಂದರ್ಭದಲ್ಲಿ ಕಳ್ಳರು ಇವರ ಮನೆಯ ಬೀಗ ಒಡೆದು ಒಳನುಗ್ಗಿ 180 ಬೆಳ್ಳಿ ವಸ್ತುಗಳು, ಚಿನ್ನಾಭರಣ ಹಾಗೂ 1.12 ಲಕ್ಷ ರೂ. ಹಣವನ್ನು ಕಳ್ಳತನ ಮಾಡಿ ಪರಾರಿಯಾಗಿದ್ದಾರೆ.

ನಿನ್ನೆ ರಾತ್ರಿ ಶಿವಾನಿ ಶೇಖರ್ ಮನೆಗೆ ಹಿಂದಿರುಗಿದಾಗಲೇ ಕಳ್ಳತನ ನಡೆದಿರುವುದು ಬೆಳಕಿಗೆ ಬಂದಿದೆ.

ರಾಮಮೂರ್ತಿ ನಗರ: ಹೊರಮಾವು 2ನೇ ಕ್ರಾಸ್, 3ನೇ ಮುಖ್ಯರಸ್ತೆಯಲ್ಲಿ ವಿಜಯ್‍ಕುಮಾರ್ ಎಂಬುವರು ವಾಸವಾಗಿದ್ದು, ಕಾರ್ಯನಿಮಿತ್ತ ನಾಲ್ಕು ದಿನಗಳ ಹಿಂದೆ ಇವರು ಊರಿಗೆ ತೆರಳಿದ್ದರು. ಈ ವೇಳೆ ಕಳ್ಳರು ಇವರ ಮನೆಯ ಬೀಗ ಒಡೆದು 30 ಗ್ರಾಂ ಚಿನ್ನ ಹಾಗೂ 10 ಸಾವಿರ ಹಣವನ್ನು ಕಳ್ಳತನ ಮಾಡಿದ್ದಾರೆ.

ಈ ಎರಡೂ ಪ್ರಕರಣಗಳನ್ನು ಆಯಾ ಠಾಣೆ ಪೊಲೀಸರು ದಾಖಲಿಸಿಕೊಂಡು ಕಳ್ಳರಿಗಾಗಿ ತನಿಖೆ ಕೈಗೊಂಡಿದ್ದಾರೆ.

ಸ್ಥಳೀಯ ಸುದ್ದಿ ಮತ್ತು ವೇಗದ ವಿತರಣೆಗಾಗಿ ನಮ್ಮ Android ಅಪ್ಲಿಕೇಶನ್ ಅನ್ನು ಡೌನ್ಲೋಡ್ ಮಾಡಿ