ಪುಲ್ವಾಮಾ ಆತ್ಮಾಹುತಿ ದಾಳಿ ಮಾಸ್ಟರ್ ಮೈಂಡ್ ಎನ್ ಕೌಂಟರ್ ಗೆ ಬಲಿ

ಶ್ರೀನಗರ: ಪುಲ್ವಾಮಾದಲ್ಲಿ ಆತ್ಮಾಹುತಿ ದಾಳಿ ನಡೆಸಿದ ಉಗ್ರ ಮಾಸ್ಟರ್​ ಮೈಂಡ್​ ಮುದಾಸಿರ್​ ಖಾನ್​ ಅಲಿಯಾಸ್​ ಮಹಮ್ಮದ್​ ಭಾಯ್​ ಎನ್​ಕೌಂಟರ್​ನಲ್ಲಿ ಮೃತಪಟ್ಟಿದ್ದಾನೆ ಎನ್ನಲಾಗಿದೆ.

ಮಧ್ಯರಾತ್ರಿ ಪುಲ್ವಾಮಾದ ಟ್ರಾಲ್​ ಪಟ್ಟಣದ ಪಿಂಗ್ಲಿಶ್​ ಪ್ರದೇಶದಲ್ಲಿ ಭದ್ರತಾ ಪಡೆ ಮತ್ತು ಉಗ್ರರ ನಡುವೆ ಗುಂಡಿನ ಚಕಮಕಿ ನಡೆದಿತ್ತು. ಈ ವೇಳೆ ಹತ್ಯೆಯಾದ ಮೂವರು ಉಗ್ರರಲ್ಲಿ ಒಬ್ಬಾತ ಮುದಾಸಿರ್ ಅಹಮದ್​ ಎಂದು ತಿಳಿದುಬಂದಿದೆ.

ಹತ್ಯೆಯಾದ ಮೂವರು ಉಗ್ರರ ದೇಹ ಅವರ ಗುರುತು ಸಿಗದಷ್ಟು ಸುಟ್ಟುಹೋಗಿದೆ. ಪಕ್ಕಾ ಅವರನ್ನು ಗುರುತಿಸಲು ನಾವು ಪ್ರಯತ್ನ ಮಾಡುತ್ತಿದ್ದೇವೆ ಎಂದು ಹೇಳಿದ್ದಾರೆ.

ನಿನ್ನೆ ಉಗ್ರರ ವಿರುದ್ಧ ಭದ್ರತಾ ಪಡೆಗಳು ಕಾರ್ಯಾಚರಣೆ ನಡೆಸಿದ್ದವು. ಈ ವೇಳೆ ಉಗ್ರರು ಭದ್ರತಾ ಪಡೆಗಳ ಮೇಲೆ ಗುಂಡಿನ ದಾಳಿ ನಡೆಸತೊಡಗಿದಾಗ ಅದಕ್ಕೆ ಪ್ರತಿಯಾಗಿ ಇವರೂ ಗುಂಡು ಹಾರಿಸಿದ್ದರು. 23 ವರ್ಷಗಳ ಮುದಾಸಿರ್​ ಖಾನ್​ ಪುಲ್ವಾಮಾ ದಾಳಿಯ ಮಾಸ್ಟರ್​ ಮೈಂಡ್​ ಎಂಬುದನ್ನು ಭದ್ರತಾ ಪಡೆಗಳು ಖಾತರಿ ಪಡಿಸಿದ್ದವು. ಈತ ಪದವೀಧರನಾಗಿದ್ದು ಎಲೆಕ್ಟ್ರಿಷಿಯನ್​ ಆಗಿದ್ದಾನೆ. ಪುಲ್ವಾಮಾದಲ್ಲೇ ವಾಸಿಸುತ್ತಿದ್ದ. 2017ರಲ್ಲಿ ಜೈಶ್​ ಎ ಮೊಹಮ್ಮದ್​ ಸಂಘಟನೆ ಸೇರಿದ್ದ. ಫೆ.14ರ ದಾಳಿಯಂದು ವಾಹನ ಮತ್ತು ಸ್ಫೋಟಕದ ವ್ಯವಸ್ಥೆ ಮಾಡಿದ್ದು ಈತನೇ ಎನ್ನಲಾಗಿದೆ.

ಫೇ. 14ರ ರಂದು ಜಮ್ಮುವಿನಿಂದ ಶ್ರೀನಗರಕ್ಕೆ 78 ಸಿಆರ್ಪಿಎಫ್ ವಾಹನಗಳಲ್ಲಿ 2,547 ಯೋಧರು ಪ್ರಯಾಣಿಸುತ್ತಿದ್ದರು. ಶ್ರೀನಗರಕ್ಕೆ 20 ಕಿ.ಮೀ ದೂರದಲ್ಲಿದ್ದಾಗ 350 ಕೆಜಿ ಸುಧಾರಿತ ಸ್ಫೋಟಕಗಳನ್ನು ತುಂಬಿದ್ದ ಬಿಳಿ ಬಣ್ಣದ ಸ್ಕಾರ್ಪಿಯೋ ಕಾರನ್ನು ಉಗ್ರನೊಬ್ಬ ಹೆದ್ದಾರಿಯಲ್ಲಿ ವಿರುದ್ಧ ದಿಕ್ಕಿನಲ್ಲಿ ಚಲಾಯಿಸಿಕೊಂಡು ಬಂದು ಡಿಕ್ಕಿ ಹೊಡೆದಿದ್ದನು. ಡಿಕ್ಕಿ ಹೊಡೆದ ರಭಸಕ್ಕೆ ಸ್ಫೋಟಕಗಳು ಸ್ಫೋಟಗೊಂಡ ಪರಿಣಾಮ 40 ಮಂದಿ ಸೈನಿಕರು ಹುತಾತ್ಮರಾಗಿದ್ದರು.

Pulwama terror attack key conspirator killed in Kashmir encounter

ಸ್ಥಳೀಯ ಸುದ್ದಿ ಮತ್ತು ವೇಗದ ವಿತರಣೆಗಾಗಿ ನಮ್ಮ Android ಅಪ್ಲಿಕೇಶನ್ ಅನ್ನು ಡೌನ್ಲೋಡ್ ಮಾಡಿ