ಹಚ್ಚೇವು ಕನ್ನಡದ ದೀಪದ ಬದಲಿಗೆ ಮುಚ್ಚೇವು ಕನ್ನಡದ ಶಾಲೆ-ಪರಿಸ್ಥಿತಿ ನಿರ್ಮಾಣ-ಪ್ರೊ.ಎಸ್.ಜಿ.ಸಿದ್ದರಾಮಯ್ಯ

ಬೆಂಗಳೂರು, ಮಾ.8- ಹಚ್ಚೇವು ಕನ್ನಡದ ದೀಪ ಎಂಬುದರ ಬದಲಿಗೆ ಈಗ ಮುಚ್ಚೇವು ಕನ್ನಡದ ಶಾಲೆ ಎಂಬ ಪರಿಸ್ಥಿತಿ ನಿರ್ಮಾಣವಾಗಿದೆ ಎಂದು ಕನ್ನಡ ಅಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ಪ್ರೊ.ಎಸ್.ಜಿ.ಸಿದ್ದರಾಮಯ್ಯ ವಿಷಾದಿಸಿದರು.

ಪ್ರೆಸ್‍ಕ್ಲಬ್‍ನ ಆವರಣದಲ್ಲಿಂದು ಕನ್ನಡ ಸಂಪಿಗೆ ಕನ್ನಡ ದಿನಪತ್ರಿಕೆ ಬೆಂಗಳೂರು ಆವೃತ್ತಿ ಬಿಡುಗಡೆ ಮಾಡಿ ಮಾತನಾಡಿದ ಅವರು, ಮಕ್ಕಳಿಗೆ ಮಾತೃಭಾಷೆಯ ಶಿಕ್ಷಣವನ್ನು ಮನೆಯಲ್ಲಿ ಒಂದು ಹಂತದಲ್ಲಿ ಕಲಿಸಬೇಕು. ಇಂಗ್ಲೀಷ್‍ನಲ್ಲಿ 100ರಲ್ಲಿ ಶೇ.1ರಷ್ಟು ಮಾತ್ರ ಬೆಳೆಸಬೇಕು. ಅದರಲ್ಲಿ ವಿಜೃಂಭಣೆ ಮಾಡುವುದು ಸರಿಯಲ್ಲ ಎಂದರು.

ಇತ್ತೀಚಿನ ದಿನಗಳಲ್ಲಿ ಶಿಕ್ಷಣವು ವ್ಯಾಪಾರೀಕರಣವಾಗುತ್ತಿದೆ. ಶಿಕ್ಷಣಕ್ಕೆ ಸಂಬಂಧಪಟ್ಟಂತೆ ಶಾಸಕಾಂಗ, ಕಾರ್ಯಾಂಗ, ನ್ಯಾಯಂಗ ತನ್ನ ಮಹತ್ವ ಕಳೆದುಕೊಂಡಿವೆ ಎಂದು ವಿಷಾದಿಸಿದರು.

ಪತ್ರಿಕೆಗಳು ಕೇವಲ ಸುದ್ದಿಗಳನ್ನು ಕೊಡುವುದು ಮಾತ್ರವಲ್ಲದೆ ಜನರಲ್ಲಿ ಅರಿವು ಮೂಡಿಸುವಂತಹ ಕೆಲಸವನ್ನು ಮಾಡಬೇಕು ಎಂದು ಹೇಳಿದರು.

ಕಾರ್ಯಕ್ರಮದಲ್ಲಿ ಶಾಸಕ ರಘುಮೂರ್ತಿ,ಬೆಂಗಳೂರು ಪ್ರೆಸ್‍ಕ್ಲಬ್ ಅಧ್ಯಕ್ಷ ಸದಾಶಿವ ಶಣೈ ಮುಂತಾದವರಿದ್ದರು.

ಸ್ಥಳೀಯ ಸುದ್ದಿ ಮತ್ತು ವೇಗದ ವಿತರಣೆಗಾಗಿ ನಮ್ಮ Android ಅಪ್ಲಿಕೇಶನ್ ಅನ್ನು ಡೌನ್ಲೋಡ್ ಮಾಡಿ