ಚೆನ್ನೈ: ಮುಂಬರುವ ಲೋಕಸಭಾ ಚುನಾವಣೆ ಹಿನ್ನಲೆಯಲ್ಲಿ ತಮಿಳುನಾಡಿನಲ್ಲಿ ಡಿಎಂಕೆ ಜತೆ ಕಾಂಗ್ರೆಸ್ ಮೈತ್ರಿ ಅಂತಿಮಗೊಂಡಿದ್ದು, ಕಾಂಗ್ರಸ್ ಹಾಗೂ ಇತರ ಮಿತ್ರಪಕ್ಷಗಳ ಒತೆಗೂಡಿ ಡಿಎಂಕೆ ಚುನಾವಣೆ ಎದುರಿಸಲಿದೆ.
ಈ ಕುರಿತು ಸ್ಪಷ್ಟಪಡಿಸಿರುವ ಡಿಎಂಕೆ ಅಧ್ಯಕ್ಷ ಎಂ.ಕೆ.ಸ್ಟಾಲಿನ್ ಕಾಂಗ್ರೆಸ್ ಹಾಗೂ ಇನ್ನಿತರ ಮಿತ್ರ ಪಕ್ಷಗಳಿಗೆ ತಲಾ 10 ಸೀಟುಗಳನ್ನ ಬಿಟ್ಟುಕೊಡಲಾಗುವುದು ಎಂದು ಘೋಷಣೆ ಮಾಡಿದ್ದಾರೆ. ಉಳಿದ 19 ಸ್ಥಾನಗಳಲ್ಲಿ ಡಿಎಂಕೆ ಸ್ಪರ್ಧಿಸಲಿದೆ. ಮಾರ್ಚ್ 7 ರಂದು ಯಾವ ಯಾವ ಸ್ಥಾನಗಳಲ್ಲಿ ಯಾವ ಪಕ್ಷ ಸ್ಪರ್ಧಿಸಬೇಕು ಎಂಬ ನಿರ್ಧಾರ ಕೈಗೊಳ್ಳಲಾಗುವುದು ಎಂದು ಹೇಳಿದರು.
ಇದೇ ವೇಳೆ ದೆಹಲಿಯಲ್ಲಿ ಕಾಂಗ್ರೆಸ್ ಏಕಾಂಗಿಯಾಗಿ ಸ್ಪರ್ಧೆ ಮಾಡಲಿದೆ ಎಂದು ಮಾಜಿ ಸಿಎಂ ಶೀಲಾ ದೀಕ್ಷಿತ್ ಘೋಷಣೆ ಮಾಡಿದ್ದಾರೆ. ಈ ಮೂಲಕ ಅರವಿಂದ್ ಕೇಜ್ರಿವಾಲ್ ಅವರ ಮೈತ್ರಿ ಪ್ರಸ್ತಾವವನ್ನು ತಳ್ಳಿ ಹಾಕಿದ್ದಾರೆ. ಎಎಪಿ ಈಗಾಗಲೇ ದೆಹಲಿ ಲೋಕಸಭಾ ಕ್ಷೇತ್ರಗಳಿಗೆ ತನ್ನ ಅಭ್ಯರ್ಥಿಗಳ ಪಟ್ಟಿಯನ್ನ ಬಿಡುಗಡೆ ಮಾಡಿದೆ.
Congress DMK Alliancefor 2019 Loksabha election