ಏರ್ ಸ್ಟ್ರೈಕ್ ಸಾಕ್ಷಿ ತರಲು ಬಾಲಕೋಟ್ ಗೆ ಹೋಗುತ್ತೀರಾ…?: ಕಪಿಲ್ ಸಿಬಲ್ ಗೆ ಕೇಂದ್ರ ಸಚಿವ ರಾಜ್ಯವರ್ಧನ್ ಸಿಂಗ್ ರಾಥೋಡ್ ಪ್ರೆಶ್ನೆ

ನವದೆಹಲಿ: ಏರ್ ಸ್ಟ್ರೈಕ್ ದಾಳಿಗೆ ಸಾಕ್ಷಿ ತರಲು ಪಾಕಿಸ್ತಾನಕ್ಕೆ ಹೋಗುತ್ತಿರಾ ಎಂದು ಕೇಂದ್ರ ಸಚಿವ ರಾಜ್ಯವರ್ಧನ್ ಸಿಂಗ್ ರಾಥೋಡ್ ಕಾಂಗ್ರೆಸ್ ನಾಯಕ ಕಪಿಲ್ ಸಿಬಲ್ ಅವರಿಗೆ ಪ್ರಶ್ನಿಸಿದ್ದಾರೆ.

ಫಬ್ರವರಿ 26ರಂದು ಭಾರತದ ವಾಯುಪಡೆ ನಡೆಸಿರುವ ಏರ್ ಸ್ಟ್ರೈಕ್‍ಗೆ ವಿಪಕ್ಷಗಳು ಸಾಕ್ಷಿ ಕೇಳುತ್ತಿವೆ. ಮಾಜಿ ಕೇಂದ್ರ ಸಚಿವ, ಕಾಂಗ್ರೆಸ್ ನಾಯಕ ಕಪಿಲ್ ಸಿಬಲ್ ಸಹ ವಾಯುದಾಳಿಗೆ ಸರ್ಕಾರ ಸಾಕ್ಷಿ ನೀಡಬೇಕು. ಮೋದಿ ಸರ್ಕಾರ ವಾಯುಸೇನೆಯನ್ನು ರಾಜಕೀಯಕ್ಕೆ ಬಳಸಿಕೊಳ್ಳುತ್ತಿದೆ ಎಂದು ಆರೋಪಿಸಿದ್ದರು. ಕಪಿಲ್ ಸಿಬಲ್ ಹೇಳಿಕೆಗೆ ಕೇಂದ್ರ ಸಚಿವರು ತಿರುಗೇಟು ನೀಡಿದ್ದು, ಕಪಿಲ್ ಸಿಬಲ್ ಜಿ, ನೀವು ನಮ್ಮ ಗುಪ್ತಚರದಳ ಮತ್ತು ವಾಯುಸೇನೆಯ ಶಕ್ತಿಯ ಬಗ್ಗೆ ನಿಮಗೆ ನಂಬಿಕೆಯಿಲ್ಲ. ಬದಲಾಗಿ ಅಂತರಾಷ್ಟ್ರೀಯ ಮಾಧ್ಯಮಗಳು ಬಿತ್ತರಿಸುವ ಸುದ್ದಿಗಳ ಮೇಲೆ ನೀವು ಹೆಚ್ಚು ನಂಬಿಕೆಯನ್ನು ಹೊಂದಿದ್ದೀರಿ. ವಾಯುದಾಳಿಯಲ್ಲಿ ಯಾವುದೇ ಪ್ರಾಣಪಾಯ ಆಗಿಲ್ಲ ಅಂದ್ರೆ ನಿಮ್ಮ ಮುಖದ ಮೇಲೆ ನಗು ಕಾಣುತ್ತದೆ. ಇವಿಎಂ ವಿರುದ್ಧ ಸಾಕ್ಷ್ಯಾಧಾರಕ್ಕಾಗಿ ಲಂಡನ್ ವರೆಗೂ ಹೋಗಿ ಬಂದಿದ್ದೀರಿ. ಇದೀಗ ಏರ್ ಸ್ಟ್ರೈಕ್ ಸಾಕ್ಷಿಗಾಗಿ ಬಾಲಕೋಟ್‍ಗೆ ಹೋಗಲು ಸಿದ್ಧರಿದ್ದೀರಾ ಎಂದು ರಾಜ್ಯವರ್ಧನ್ ಸಿಂಗ್ ಪ್ರಶ್ನೆ ಮಾಡಿದ್ದಾರೆ.

ಅಂತರಾಷ್ಟ್ರೀಯ ಮಾಧ್ಯಮಗಳು ಬಾಲಕೋಟ್ ನಲ್ಲಿ ಯಾವುದೇ ಉಗ್ರರು ಹತರಾಗಿರುವ ವರದಿ ಆಗಿಲ್ಲ ಎಂದು ಹೇಳುತ್ತಿವೆ. ಹಾಗಾದ್ರೆ ಅವರೆಲ್ಲರೂ ಪಾಕಿಸ್ತಾನದ ಬೆಂಬಲಿಗರಾ? ನೀವು ಭಯೋತ್ಪದನೆ ಹೆಸರಿನಲ್ಲಿ ರಾಜಕೀಯ ಮಾಡಲು ಹೊರಟಿದ್ದೀರಾ ಎಂದು ಕಪಿಲ್ ಸಿಬಲ್ ತಮ್ಮ ಟ್ವಿಟ್ಟರ್ ನಲ್ಲಿ ಬರೆದುಕೊಂಡಿದ್ದರು.

Will you go to Balakot to check losses in IAF strikes? – Union minister Rajyavardhan Rathore asks Kapil Sibal

ಸ್ಥಳೀಯ ಸುದ್ದಿ ಮತ್ತು ವೇಗದ ವಿತರಣೆಗಾಗಿ ನಮ್ಮ Android ಅಪ್ಲಿಕೇಶನ್ ಅನ್ನು ಡೌನ್ಲೋಡ್ ಮಾಡಿ