ನವದೆಹಲಿ: ಜಮ್ಮು-ಕಾಶ್ಮೀರದಲ್ಲಿ ಉಗ್ರರ ದಾಳಿ ಮುಂದುವರೆದಿದ್ದು, ಉಗ್ರನೊಬ್ಬ ಸತ್ತಂತೆ ನಟಿಸಿ, ತನ್ನನ್ನು ಸಮೀಪಿಸಿದ ಮೂವರು ಪೊಲೀಸರು ಮತ್ತು ಒಬ್ಬ ನಾಗರಿಕನನ್ನು ಹತ್ಯೆ ಮಾಡಿದ ಘಟನೆ ನಡೆದಿದೆ.
ಕುಪ್ವಾರಾ ಜಿಲ್ಲೆಯ ಬಾಬಾಗುಂದ್ ಲಾಂಗೇಟ್ ಪ್ರದೇಶದಲ್ಲಿ ಉಗ್ರರು ಹಾಗೂ ಭದ್ರತಾ ಪಡೆಗಳ ನಡುವೆ ಸಂಭವಿಸ ಗುಂಡಿನ ಚಕಮಕಿಯಲ್ಲಿ ಇಬ್ಬರು ಉಗ್ರರನ್ನು ಭದ್ರತಾಪಡೆಗಳು ಹತ್ಯೆಗೈದಿರುವುದಾಗಿ ತಿಳಿದಿದ್ದರು. ಆದರೆ ಅವರಲ್ಲಿ ಓರ್ವ ಇನ್ನೂ ಜೀವಂತವಾಗಿದ್ದ. ಆದರೆ ಇಬ್ಬರು ಉಗ್ರರ್ರು ಸತ್ತಿದ್ದಾರೆಂದು ಸಿಆರ್ಪಿಎಫ್ನ ಇಬ್ಬರು ಯೋಧರು ಮತ್ತು ಇಬ್ಬರು ಸ್ಥಳೀಯ ಪೊಲೀಸರು ಉಗ್ರರ ಮೃತದೇಹದ ಪರಿಶೀಲನೆಗೆ ಮುಂದಾಗಿದ್ದರು. ಈ ವೇಳೆ ಸತ್ತು ಬಿದ್ದಂತೆ ನಟಿಸುತ್ತಿದ್ದ ಒಬ್ಬ ಉಗ್ರ ಏಕಾಏಕಿ ಎದ್ದು ಗುಂಡಿನ ಸುರಿಮಳೆಗೈದಿದ್ದಾನೆ. ಸಿಆರ್ಪಿಎಫ್ ಓರ್ವ ಅಧಿಕಾರಿ ಸಹಿತ ಮೂವರು ಯೋಧರು, ಓರ್ವ ನಾಗರಿಕ ಸಾವನ್ನಪ್ಪಿದ್ದಾರೆ.
3 policemen, one civilian killed in Jammu and Kashmir’s Kupwara