ಅಮೃತಸರ:ಮಾ-16: ದೆಹಲಿ ಮುಖ್ಯಮಂತ್ರಿ ಮತ್ತು ಆಮ್ ಆದ್ಮಿ ಪಕ್ಷದ ರಾಷ್ಟ್ರೀಯ ಸಂಚಾಲಕ ಅರವಿಂದ್ ಕೇಜ್ರಿವಾಲ್, ಪಂಜಾಬ್ ನ ಮಾಜಿ ಸಚಿವ ಬಿಕ್ರಂ ಸಿಂಗ್ ಮಜಿಥಿಯಾ ಅವರ ಕ್ಷಮೆಯಾಚಿಸಿದ ಹಿನ್ನಲೆಯಲ್ಲಿ ಆಮ್ ಆದ್ಮಿ ಪಕ್ಷದ ಪಂಜಾಬ್ ಘಟಕದ ಅಧ್ಯಕ್ಷ ಹಾಗೂ ಸಂಗರೂರ್ ಸಂಸದ ಭಗವಂತ ಮಾನ್ ಅವರು ತಮ್ಮ ಹುದ್ದೆಗೆ ರಾಜೀನಾಮೆ ನೀಡಿದ್ದಾರೆ.
ತಮ್ಮ ರಾಜೀನಾಮೆಯನ್ನು ಟ್ವಿಟರ್ ಮೂಲಕ ದೃಢೀಕರಿಸಿರುವ ಭಗವಂತ ಮಾನ್, “ಆಪ್ ಪಂಜಾಬ್ ಅಧ್ಯಕ್ಷ ಪದಕ್ಕೆ ನಾನು ರಾಜೀನಾಮೆ ನೀಡಿದ್ದೇನೆ. ಪಂಜಾಬಿನ ಆಮ್ ಆದ್ಮಿ ಆಗಿರುವ ನಾನು ರಾಜ್ಯದಲ್ಲಿನ ಡ್ರಗ್ ಮಾಫಿಯ ಮತ್ತು ಭ್ರಷ್ಟಾಚಾರದ ವಿರುದ್ಧದ ಹೋರಾಟವನ್ನು ಮುಂದುವರಿಸುತ್ತೇನೆ ಎಂದು ಹೇಳಿದ್ದಾರೆ.
ಪಂಜಾಬ್ ಮಾಜಿ ಕಂದಾಯ ಸಚಿವರು ತಮ್ಮ ವಿರುದ್ಧ ಹೂಡಿದ್ದ ಮಾನನಷ್ಟ ದಾವೆಯನ್ನು ಅರವಿಂದ ಕೇಜ್ರಿವಾಲ್ ನಿನ್ನೆ ಗುರುವಾರ ಕ್ಷಮೆ ಯಾಚನೆ ಮೂಲಕ ಇತ್ಯರ್ಥಪಡಿಸಿಕೊಂಡಿದ್ದರು.
ಮಾಜಿ ಕಂದಾಯ ಸಚಿವರ ವಿರುದ್ಧ ನಾನು ಮಾಡಿದ್ದ ಎಲ್ಲ ಆಪಾದನೆಗಳು ಆಧಾರರಹಿತವಾದವುಗಳೆಂದು ನಾನು ಕಂಡುಕೊಂಡಿರುವುದರಿಂದ ಆ ಎಲ್ಲ ಆಪಾದನೆಗಳನ್ನು ನಾನು ಹಿಂದೆಗೆದುಕೊಳ್ಳುತ್ತೇನೆ ಮತ್ತು ನಿಮ್ಮಲ್ಲಿ ನಾನು ಅದಕ್ಕಾಗಿ ಕ್ಷಮೆ ಯಾಚಿಸುತ್ತೇನೆ’ ಎಂದು ಬರೆದ ಕ್ಷಮಾಪಣೆ ಕೋರಿಕೆಯ ಹೇಳಿಕೆಯನ್ನು ಕೇಜ್ರಿವಾಲ್ ಕೋರ್ಟಿಗೆ ಸಲ್ಲಿಸುವ ಮೂಲಕ ಮಾನನಷ್ಟ ದಾವೆಯನ್ನು ಪರಿಹರಿಸಿಕೊಂಡಿದ್ದರು. ಈ ಬೆಳವಣಿಗೆ ಬೆನ್ನಲ್ಲೇ ಒಂದು ದಿ ಅದ ಬಳಿಕ ಮಾನ್ ತಮ್ಮ ಸ್ಥಾನಕ್ಕೆ ರಾಜೀನಾಮೆ ನೀಡಿದ್ದಾರೆ.
Bhagwant Mann, resigns,AAP’s Punjab chief,Arvind Kejriwal’s apology,Majithia