ಶ್ರೀನಗರ: ಜಮ್ಮು-ಕಾಶ್ಮೀರ ಲಿಬರೇಷನ್ ಫ್ರಂಟ್ ಮುಖ್ಯಸ್ಥ, ಪ್ರತ್ಯೇಕತಾವಾದಿ ಮುಖಂಡ ಯಾಸಿನ್ ಮಲಿಕ್ ಅವರನ್ನು ಪೊಲೀಸರು ಬಂಧಿಸಿದ್ದಾರೆ.
ಶ್ರೀನಗರದ ಮೈಸುಮಾ ಪ್ರದೇಶದಲ್ಲಿರುವ ಮಲಿಕ್ ಅವರ ನಿವಾಸದಲ್ಲಿ ಪೊಲೀಸರು ಮಲೀಕ್ ರನ್ನು ಬಂಧಿಸಿದ್ದು ಕೊಥಿಬಾಗ್ ಠಾಣೆಯ ಜೈಲಿನಲ್ಲಿ ಇಡಲಾಗಿದೆ.
ಜಮ್ಮು ಕಾಶ್ಮೀರ ಜನರಿಗೆ ವಿಶೇಷ ಹಕ್ಕು ಮತ್ತು ಸವಲತ್ತುಗಳನ್ನು ಕೊಡುವ ಸಂಬಂಧ 35-ಎ ಆರ್ಟಿಕಲ್ ವಿಚಾರಣೆ ಫೆ.25 ದಂದು ಸುಪ್ರೀಂಕೋರ್ಟ್ನಲ್ಲಿ ನಡೆಯಲಿದ್ದು, ಅದಕ್ಕೂ ಎರಡು ದಿನ ಮೊದಲು ಯಾಸಿನ್ ಮಲಿಕ್ ಅವರನ್ನು ಬಂಧಿಸಿದ್ದು ಕುತೂಹಲಕ್ಕೆ ಕಾರಣವಾಗಿದೆ.
ಕಳೆದ ವಾರವಷ್ಟೇ ಜಮ್ಮು-ಕಾಶ್ಮೀರದ ಐವರು ಪ್ರತ್ಯೇಕತಾವಾದಿಗಳಿಗೆ ನೀಡಿದ್ದ ಸರ್ಕಾರಿ ಭದ್ರತಾ ಸೌಕರ್ಯವನ್ನು ಅಲ್ಲಿನ ಆಡಳಿತ ವಾಪಸ್ ಪಡೆದಿತ್ತು.
JKLF Chairman Yasin Malik arrested