ಪುಲ್ವಾಮಾ ದಾಳಿಯ ಮಾಸ್ಟರ್ ಮೈಂಡ್ ಹಾಗೂ ಉಗ್ರರ ಕಮಾಂಡರ್ ಹತ್ಯೆಗೈದ ಸೇನೆ

ಶ್ರೀನಗರ: ಜಮ್ಮು-ಕಾಶ್ಮೀರದ ಪುಲ್ವಾಮಾದಲ್ಲಿ ನಡೆದ ಉಗ್ರರ ದಾಳಿಗೆ ಭಾರತೀಯ ಸ್ನೆ ಪ್ರತಿಕಾರ ತೀರಿಸಿಕೊಳ್ಲುತ್ತಿದ್ದು, ಉಗ್ರರ ವಿರುದ್ಧದ ಕಾರ್ಯಾಚರಣೆ ಚುರುಕುಗೊಳಿಸಿದೆ. ಇಂದು ಬೆಳಿಗ್ಗೆ ಪುಲ್ವಾಮಾ ದಾಳಿಯ ಮಾಸ್ಟರ್ ಮೈಂಡ್ ಸೇರಿ ಇಬ್ಬರು ಜೈಶ್ ಇ ಮೊಹಮ್ಮದ್ ಉಗ್ರರನ್ನು ಸದೆಬಡಿದಿದೆ.

ಪುಲ್ವಾಮದ ಪಿಂಗ್ಲಾನ್ ಪ್ರದೇಶದಲ್ಲಿ ಸಿಆರ್ ಪಿಎಫ್ ವಾಹನದ ಮೇಲೆ ದಾಳಿ ನಡೆಸಲು ಉಗ್ರರಿಗೆ ತರಬೇತಿ ನೀಡಿದ್ದ ಮಾಸ್ಟರ್ ಮೈಂಡ್ ರಶೀದ್ ಘಾಜಿ ಹಾಗೂ ಕಮಾಂಡರ್ ಕಮ್ರಾನ್ ನನ್ನು ಸೇನೆ ಹೊಡೆದುರುಳಿಸಿದೆ.

ಅಫ್ಘಾನ್ ಪ್ರಜೆಯಾಗಿರುವ ರಶೀದ್ ಘಾಜಿ, ಅಜರ್ ಮಸೂದ್ ನ ಆಪ್ತನಾಗಿದ್ದ. ಈತ ಅಫ್ಘಾನಿಸ್ತಾನದಲ್ಲಿ ಉಗ್ರ ಚಟುವಟಿಕೆಯಲ್ಲಿ ಸಕ್ರಿಯನಾಗಿದ್ದ, ಅಲ್ಲದೇ ಐಇಡಿ ತಜ್ಞನಾಗಿದ್ದ ಎಂದು ತಿಳಿದುಬಂದಿದೆ. ಡಿಸೆಂಬರ್ 9ರಂದು ಗಡಿಯೊಳಕ್ಕೆ ರಶೀದ್ ನುಸುಳಿದ್ದ. ಅಫ್ಘಾನ್ ನಲ್ಲಿ ಬಾಂಬ್ ತಯಾರಿಕೆಯ ತರಬೇತಿ ಪಡೆದಿದ್ದ.

ಉಗ್ರ ಮಸೂದ್ ಅಜರ್ ಜತೆ ನೇರ ಸಂಪರ್ಕದಲ್ಲಿದ್ದ ಘಾಜಿ ಜಮ್ಮು ಕಾಶ್ಮೀರದ ಪುಲ್ವಾಮ ದಾಳಿ ನಡೆಸಲು ಅದಿಲ್ ದಾರ್ ಎಂಬಾತನಿಗೆ ತರಬೇತಿ ನೀಡಿದ್ದ. ಕಮ್ರಾನ್ ಪಾಕ್ ಭಯೋತ್ಪಾದಕ ಸಂಘಟನೆಯ ಅಜರ್ ನ ನಿಕಟವರ್ತಿಯಾಗಿದ್ದ.

ಇಂದು ನಡೆದ ಉಗ್ರರ ವಿರುದ್ಧದ ಕಾರ್ಯಾಚರಣೆಯಲ್ಲಿ ಈ ಇಬ್ಬರೂ ಉಗ್ರರನ್ನು ಹತ್ಯೆಗೈಯ್ಯಲಾಗಿದ್ದು, ಪಿಂಗ್ಲಾನ್ ಪ್ರದೇಶ್ಜದಲ್ಲಿ ಇನ್ನೂ 6 ಉಗ್ರರು ಅಡಗಿರುವ ಶಂಕೆಯಿದೆ. ಈ ಹಿನ್ನಲೆಯಲ್ಲಿ ಭಾರತೀಯ ಸೇನೆ ಕಾರ್ಯಾಚರಣೆ ಮುಂದುವರೆಸಿದೆ.

Two terrorists including Pulwama attack mastermind killed in encounter

ಸ್ಥಳೀಯ ಸುದ್ದಿ ಮತ್ತು ವೇಗದ ವಿತರಣೆಗಾಗಿ ನಮ್ಮ Android ಅಪ್ಲಿಕೇಶನ್ ಅನ್ನು ಡೌನ್ಲೋಡ್ ಮಾಡಿ