ಪುಲ್ವಾಮದಲ್ಲಿ ಉಗ್ರರ ದಾಳಿಗೆ ನಾಲ್ವರು ಯೋಧರು ಹುತಾತ್ಮ

ಶ್ರೀನಗರ: ಜಮ್ಮು-ಕಾಶ್ಮೀರದ ಪುಲ್ವಾಮಾದಲ್ಲಿ ಮತ್ತೆ ಉಗ್ರರು ಅಟ್ಟಹಾಸ ಮೆರೆದಿದ್ದು, ಉಗ್ರರ ಗುಂಡಿನ ದಾಳಿಗೆ ಓರ್ವ ಮೇಜರ್ ಸೇರಿ ನಾಲ್ವರು ಯೋಧರು ಹುತಾತ್ಮರಾಗಿದ್ದಾರೆ.

ಜೈಶ್ ಇ ಮೊಹಮ್ಮದ್ ಉಗ್ರರ ಬೀಕರ ದಾಳಿಗೆ 40 ಯೋಧರು ಬಲಿಯಾದ ಬೆನ್ನಲ್ಲೇ ಪುಲ್ವಾಮಾದಲ್ಲಿ ಉಗ್ರರ ವಿರುದ್ಧ ಸೇನಾ ಕಾರ್ಯಾಚರಣೆ ತೀವ್ರಗೊಂಡಿದ್ದು, ಇಂದು ಬೆಳಿಗ್ಗೆ ಸೇನೆಯ ಜಂಟಿ ಕಾರ್ಯಾಚರಣೆ ವೇಳೆ ಉಗ್ರರು ದಾಳಿ ನಡೆಸಿದ್ದು, ನಾಲ್ವರು ಯೋಧರು ಹುತಾತ್ಮರಾಗಿದ್ದಾರೆ.

ಮೇಜರ್​ ವಿ.ಎಸ್​. ದೌಂಡಿಯಾಲ್​, ಹವಾಲ್ದಾರ್​ ಶೇಹೋ ರಾಮ್​, ಸಿಪಾಯಿ ಅಜಯ್​ಕುಮಾರ್​ ಮತ್ತು ಸಿಪಾಯಿ ಹರಿ ಸಿಂಗ್​ ಹುತಾತ್ಮರಾದ ಯೋಧರು.

ಪುಲ್ವಾಮಾದಲ್ಲಿ ಉಗ್ರರು ಅಡಗಿರುವ ಕುರಿತು ಖಚಿತ ಮಾಹಿತಿ ಮೇರೆಗೆ ಸೇನೆಯ 55ಆರ್​ಆರ್​, ಸಿಆರ್​ಪಿಎಫ್​ ಮತ್ತು ಎಸ್​ಒಜಿ ಜಂಟಿ ಶೋಧ ಕಾರ್ಯಾಚರಣೆ ಕೈಗೊಂಡಿತ್ತು.

4 Army personnel including a Major killed in pulwama

ಸ್ಥಳೀಯ ಸುದ್ದಿ ಮತ್ತು ವೇಗದ ವಿತರಣೆಗಾಗಿ ನಮ್ಮ Android ಅಪ್ಲಿಕೇಶನ್ ಅನ್ನು ಡೌನ್ಲೋಡ್ ಮಾಡಿ