ಬೆಂಗಳೂರು, ಫೆ.16- ಆತ್ಮಾಹುತಿ ಬಾಂಬ್ ದಾಳಿ ನಡೆಸಿ ದೇಶದ 45ಕ್ಕೂ ಹೆಚ್ಚು ಯೋಧರನ್ನು ಬಲಿ ತೆಗೆದುಕೊಂಡು ಪೈಶಾಚಿಕ ಕೃತ್ಯವನ್ನು ನೃಪತುಂಗ ಕನ್ನಡ ಪ್ರಗತಿಪರ ಸಂಘ ತೀವ್ರವಾಗಿ ಖಂಡಿಸಿದೆ.ಹುತಾತ್ಮ ಯೋಧರ ಬಲಿದಾನಕ್ಕೆ ಸಂತಾಪ ಸೂಚಿಸಿದೆ.
ಸಂಘದ ರಾಜ್ಯಾಧ್ಯಕ್ಷ ಎನ್.ಗಣೇಶ್ಗೌಡ ಈ ಕುರಿತು ಪತ್ರಿಕಾ ಹೇಳಿಕೆ ನೀಡಿ ಉಗ್ರರಿಗೆ ತಕ್ಕ ಶಿಕ್ಷೆ ನೀಡಬೇಕೆಂದು ಆಗ್ರಹಿಸಿದ್ದಾರೆ.
ಈ ಘಟನೆಯಲ್ಲಿ ಕರ್ನಾಟಕ ರಾಜ್ಯದ ವೀರಯೋಧ, ಮಂಡ್ಯದ ಮಣ್ಣಿನ ಮಗ, ದೇಶಪ್ರೇಮಿ ಗುರು ಅವರು ಹುತಾತ್ಮರಾಗಿರುವುದು ನಮ್ಮ ದುರ್ದೈವ. ಅವರ ಆತ್ಮಕ್ಕೆ ಶಾಂತಿ ಸಿಗಲಿ. ಅವರ ಕುಟುಂಬದವರಿಗೆ ದುಃಖ ಭರಿಸುವ ಶಕ್ತಿ ನೀಡಲಿ ಎಂದು ಪ್ರಾರ್ಥಿಸಿದ್ದಾರೆ.