ಚಿಕಾಗೋ, ಫೆ.16- ಅಮೆರಿಕದ ಚಿಕಾಗೋ ಹೊರವಲಯದಲ್ಲಿನ ಕೈಗಾರಿಕಾ ಪ್ರದೇಶವೊಂದರಲ್ಲಿ ಬಂದೂಕುದಾರಿಯೊಬ್ಬ ನಡೆಸಿದ ದಾಳಿಯಲ್ಲಿ ಐವರು ಮೃತಪಟ್ಟು, ಪೊಲೀಸ್ ಅಧಿಕಾರಿಗಳೂ ಸೇರಿದಂತೆ ಅನೇಕರು ತೀವ್ರ ಗಾಯಗೊಂಡಿದ್ದಾರೆ.
ಈ ದಾಳಿಯ ನಂತರ ನಡೆದ ಗುಂಡಿನ ಕಾಳಗದಲ್ಲಿ ಹಂತಕನನ್ನು ಪೊಲೀಸರು ಕೊಂದಿದ್ದಾರೆ. ಗ್ಯಾರಿ ಮಾರ್ಟಿನ್(45) ಮೃತ ಗನ್ಮ್ಯಾನ್, ಈತ ಈ ಕೈಗಾರಿಕಾ ಪ್ರದೇಶದ ಓರ್ವ ಉದ್ಯೋಗಿ.
ಚಿಕಾಗೋದಿಂದ 65 ಕಿ.ಮೀ.ದೂರದಲ್ಲಿರುವ ಇಲಿನೊಯ್ನಸ್ನ ಆರೊರಾ ಪಟ್ಟಣದ ಕಾರ್ಖಾನೆಯಲ್ಲಿ ಈ ಗುಂಡಿನ ದಾಳಿ ನಡೆದಿದೆ.
ಈ ದಾಳಿಗೆ ನಿಖರ ಕಾರಣ ತಿಳಿದುಬಂದಿಲ್ಲವಾದರೂ, ನೌಕರಿ ಕಳೆದುಕೊಂಡ ಗ್ಯಾರಿ ಹತಾಶೆಯಿಂದ ಈ ಕೃತ್ಯ ಎಸಗಿದ್ದಾನೆ ಎಂದು ಪ್ರತ್ಯಕ್ಷದರ್ಶಿಯೊಬ್ಬರು ತಿಳಿಸಿದ್ದಾರೆ.
ಗನ್ಮ್ಯಾನ್ ದಾಳಿಯಲ್ಲಿ ಐವರು ಮೃತಪಟ್ಟು, ಪೆÇಲೀಸ್ ಅಧಿಕಾರಿಗಳೂ ಸೇರಿದಂತೆ ಅನೇಕರು ಗಾಯಗೊಂಡಿದ್ದಾರೆ. ತೀವ್ರ ಗಾಯಾಳುಗಳನ್ನು ಹೆಚ್ಚಿನ ಚಿಕಿತ್ಸೆಗೆ ಹೆಲಿಕಾಪ್ಟರ್ ಮೂಲಕ ಚಿಕಾಗೋಗೆ ರವಾನಿಸಲಾಗಿದೆ. ಘಟನೆ ಬಗ್ಗೆ ತನಿಖೆ ಮುಂದುವರಿದಿದೆ.