ಮೊನ್ನೆ ಕಿವೀಸ್ ವಿರುದ್ಧ ಫೈನಲ್ ಪಂದ್ಯದಲ್ಲಿ ಟೀಂ ಇಂಡಿಯಾ ನಾಲ್ಕು ರನ್ಗಳಿಂದ ವಿರೋಚಿತ ಸೋಲು ಅನುಭವಿಸಿ ಗೆಲ್ಲಬಹುದಾಗಿದ್ದ ಸರಣಿಯನ್ನ ಕೈಚೆಲ್ಲಿಕೊಂಡಿತ್ತು.
ಕೊನೆಯವರೆಗೂ ಹೋರಾಟ ಮಾಡಿದ ರೋಹಿತ್ ಪಡೆ ಗೆಲ್ಲಬಹುದಾಗಿತ್ತು. ಕೊನೆಯ ಓವರ್ನಲ್ಲಿ ತಂಡದ ಅನುಭವಿ ಬ್ಯಾಟ್ಸ್ಮನ್ ದಿನೇಶ್ ಕಾರ್ತಿಕ್ ಮಾಡಿದ ಒಂದು ಯಡವಟ್ಟು ಕೊನೆಯಲ್ಲಿ ಪಂದ್ಯದಲ್ಲಿ ಸೋಲಬೇಕಾಯಿತು. ವೇಗಿ ಟಿಮ್ ಸೌಥಿ ಅವರ ಕೊನೆಯ ಓವರ್ನಲ್ಲಿ ಟೀಂ ಇಂಡಿಯಾಗೆ ಗೆಲ್ಲಲು 16 ರನ್ ಬೇಕಿತ್ತು. ಮೊದಲ ಎಸೆತದಲ್ಲಿ ಸ್ಟ್ರೈಕ್ ನಲ್ಲಿದ್ದ ಕಾರ್ತಿಕ್ 2 ರನ್ ತೆಗೆದ್ರು. ನಂತರದ ಎಸೆತದಲ್ಲಿ ವೇಸ್ಟ್ ಮಾಡಿದ್ರು. ಮೂರನೆ ಎಸೆತವನ್ನ ಐoಟಿg – ಔಟಿನತ್ತ ಬಾರಿಸಿದ್ರು.ಆದರೆ ದಿನೇಶ್ ಕಾರ್ತಿಕ್ ಒಂಟಿ ರನ್ ತೆಗೆಯಲು ನಿರಾಕರಿಸಿದ್ರು.
ಪಂದ್ಯವನ್ನ ನಾನೇ ಗೆಲ್ಲಿಸಿಕೊಡುತ್ತೇನೆ ಎಂದು ಹೊರಟ ದಿನೇಶ್ ಕಾರ್ತಿಕ್ ನಾಲ್ಕನೆ ಎಸೆತದಲ್ಲಿ ಸಿಕ್ಸರ್ ಬಾರಿಸಲು ಆಗದೇ ಒಂದು ರನ್ ತೆಗೆದು ತಂಡವನ್ನ ಸೋಲಿನ ಸುಳಿಯಲ್ಲಿ ಸಿಲುಕಿಸುತ್ತಾರೆ. ಒಂದು ವೇಳೆ ಮೂರನೆ ಎಸೆತದಲ್ಲಿ ನಾನ್ Sಣಡಿiಞeನಲ್ಲಿದ್ದ ಕೃನಾಲ್ಗೆ ಸ್ಟ್ರೈಕ್ ಬಿಟ್ಟುಕೊಟ್ಟಿದಿದ್ದರೇ ಪಂದ್ಯದ ಗತಿಯೇ ಬದಲಾಗಿ ಹೋಗುತ್ತಿತ್ತು. ಕೊನೆಯ ದಿನೇಶ್ ಕಾರ್ತಿಕ್ ಸಿಕ್ಸರ್ ಬಾರಿಸಿದರಾದರೂ ಯಾವುದೇ ಪ್ರಯೋಜನವಾಗಲಿಲ್ಲ.
ಅಭಿಮಾನಿಗಳಿಂದ ಮಂಗಳಾರತಿ ಮಾಡಿಸಿಕೊಂಡಿದ್ದ ದಿನೇಶ್ ಕಾರ್ತಿಕ್
ಕೊನೆಯ ಕ್ಷಣದಲ್ಲಿ ತಂಡದ ಸೋಲಿಗೆ ಕಾರಣರಾದ ದಿನೇಶ್ ಕಾರ್ತಿಕ್ ಬಗ್ಗೆ ಅಭಿಮಾನಿಗಳು ಭಾರೀ ಆಕ್ರೋಶ ವ್ಯಕ್ತಪಡಿಸಿದ್ರು. ಸೋಶಿಯಲ್ ಮೀಡಿಯಾದಲ್ಲಿ ಅಭಿಮಾನಿಗಳು ದಿನೇಶ್ ಕಾರ್ತಿಕ್ ಸರಿಯಾಗಿ ತರಾಟೆಗೆ ತೆಗೆದುಕೊಂಡ್ರು. ಪಂದ್ಯವನ್ನ ಗೆಲ್ಲಿಸಿಕೊಡಲು ನೀನೇನು ಧೋನಿನಾ ಅಂತಾ ಕಿಂಡಲ್ ಮಾಡಿದ್ರು.
ಬ್ಯಾಟಿಂಗ್ ವೈಫಲ್ಯದ ಬಗ್ಗೆ ರಿವೀಲ್ ಮಾಡಿದ ಡಿ.ಕೆ
ಮೊನ್ನೆ ಕಡೆಯಕ್ಷಣದಲ್ಲಿ ಪಂದ್ಯವನ್ನ ಕೈಚೆಲ್ಲಿದ ಬಗ್ಗೆ ಸ್ವತಃ ದಿನೇಶ್ ಕಾರ್ತಿಕ್ ತಾವು ಮಾಡಿದ ತಪ್ಪಿನ ಬಗ್ಗೆ ಹೇಳಿಕೊಂಡಿದ್ದಾರೆ.
ನಾನೊಬ್ಬ ಮಧ್ಯಮ ಕ್ರಮಾಂಕದ ಬ್ಯಾಟ್ಸ್ಮನ್ನ್ನಾಗಿ ಒತ್ತಡದ ಸಮಯದಲ್ಲಿ ದೊಡ್ಡ ಹೊಡೆತಗಳನ್ನ ಹೊಡೆಯಬಹುದೆಂದು ನಮ್ಮ ಸಾಮರ್ಥ್ಯವನ್ನ ನಂಬಬೇಕಾಗುತ್ತದೆ. ಇಂಥ ಸಂದರ್ಭದಲ್ಲಿ ಜೊತೆಗಾರನನ್ನ ನಂಬುವುದು ಅಷ್ಟೆ ಮುಖ್ಯವಾಗುತ್ತದೆ. ಆ ಸಂದರ್ಭದಲ್ಲಿ ಇದು ನನಗೆ ಆ ಕ್ಷಣ ನನಗೆ ಮನವರಿಕೆಗೆ ಆಗಲಿಲ್ಲ ದಿನೇಶ್ ಕಾರ್ತಿಕ್ ಹೇಳಿಕೊಂಡಿದ್ದಾರೆ.
ಇನ್ನು ಕೃನಾಲ್ ಗೆ ಸ್ಟ್ರೈಕ್ ನೀಡದಿರುವ ಬಗ್ಗೆಯೂ ಕಾರ್ತಿಕ್ ಮಾತನಾಡಿದ್ದಾರೆ
ಆ ಪಂದ್ಯದಲ್ಲಿ ಕೃನಾಲ್ ಮತ್ತು ನಾನು ಚೆನ್ನಾಗಿ ಆಡಿದೆವು. ನಾವು ಚೆನ್ನಾಗಿ ಬ್ಯಾಟಿಂಗ್ ಮಾಡಿದ್ದರಿಂದ ಕಿವೀಸ್ ಬೌಲರ್ಸ್ಗಳು ಒತ್ತಡದಲ್ಲಿ ಸಿಲುಕುವಂತೆ ಮಾಡಿದೆವು. ಆದರೆ ಆ ಸಂದರ್ಭದಲ್ಲಿ ನಾನು ಸಿಕ್ಸರ್ ಬಾರಿಸಬಹುದೆಂದು ಭಾವಿಸಿ ಒಂಟಿ ರನ್ ತೆಗೆಯಲು ನಿರಾಕರಿಸಿದೆ ಎಂದು ದಿನೇಶ್ ಕಾರ್ತಿಕ್ ಹೇಳಿದ್ದಾರೆ.
ಪಂದ್ಯ ಸೋಲಿನಿಂದ ವಿಚಲಿತರಾಗಾದ ತಮಿಳುನಾಡು ಬ್ಯಾಟ್ಸ್ಮನ್
ಮೊನ್ನೆ ಕಿವೀಸ್ ವಿರುದ್ಧ ವಿರೋಚಿತ ಸೋಲಿನ ಬಗ್ಗೆ ದಿನೇಶ್ ಕಾರ್ತಿಕ್ ವಿಚಲಿತರಾಗಿಲ್ಲ. ತಂಡದ ಆಟಗಾರರಿಗೆ ಸಂದರ್ಭ ಹೇಗಿತ್ತು ಅನ್ನೋದು ಎಲ್ಲರಿಗೂ ಗೊತ್ತು. ನಾವು ಕಡೆಯವರೆಗೂ ಹೋರಾಡಿದೆವು. ಆ ದಿನ ನಮ್ಮದಾಗಿರಲಿಲ್ಲ. ನಮ್ಮ ಗೇಮ್ ಪ್ಲಾನ್ನನ್ನ ನಮ್ಮ ಕೋಚ್ಗಳು ಕೂಡ ಅರ್ಥ ಮಾಡಿಕೊಂಡ್ರು.ಅಂಥ ಸಂದರ್ಭವನ್ನ ಎದುರಿಸಲು ಪ್ರಾಕ್ಟೀಸ್ ಮಾಡುತ್ತಲೇ ಇರಬೇಕು. ಮಿಡ್ಲ್ ಆರ್ಡರ್ನಲ್ಲಿ ಈ ಕೆಲಸ ಮಾಡಲು ನನ್ನನ್ನು ನಂಬಿದ್ದೇನೆ. ಇಂಥ ಸೋಲುಗಳಿಂದ ಹೊರ ಬಂದಾಗ ನಾವು ಇನ್ನಷ್ಟು ಬಲಿಷ್ಠರಾಗಿ ಗೇಮ್ ಫಿನಿಶರ್ರಾಗಲು ಸಾಧ್ಯ. ಎಂದು ದಿನೇಶ್ ಕಾರ್ತಿಕ್ ಹೇಳಿದ್ದಾರೆ.
ಒಟ್ಟಾರೆ ದಿನೇಶ್ ಕಾರ್ತಿಕ್ ಕಿವೀಸ್ ವಿರುದ್ಧ ಫ್ಲಾಪ್ ಆಗಿದ್ದು ಒಂದು ಪಾಠವಾಗಿದೆ. ಮುಂದೆ ಇಂಥ ಸಂದರ್ಭಗಳು ಬಂದಾಗ ಗೆದ್ದು ಬರಲಿ ಅನ್ನೋದೇ ಅಭಿಮಾನಿಗಳ ಆಶಯವಾಗಿದೆ