ಭೀಮಾ ಕೋರೆಗಾಂವ್ ಹಿಂಸಾಚಾರ ಪ್ರಕರಣ: ಮುಂಬೈ ಹೈಕೋರ್ಟ್ ತೀರ್ಪನ್ನು ತಳ್ಳಿಹಾಕಿದ ಸುಪ್ರೀಂಕೋರ್ಟ್

ನವದೆಹಲಿ, ಫೆ.13- ಭೀಮಾ ಕೋರೆಗಾಂವ್ ಹಿಂಸಾಚಾರ ಪ್ರಕರಣದಲ್ಲಿ ಮುಂಬೈ ಹೈಕೋರ್ಟ್ ತೀರ್ಪನ್ನು ತಳ್ಳಿ ಹಾಕಿದ ಸುಪ್ರೀಂ ಕೋರ್ಟ್‍ಐವರು ಕಾರ್ಯಕರ್ತರಿಗೆ ಜಾಮೀನು ನೀಡಲು ನಿರಾಕರಿಸಿದೆ.

ಸುರೇಂದ್ರ ಗಡ್ಲಿಂಗ್, ಸುದೀರ ಧವಲೆ, ಮಹೇಶ್ ರಾವತ್, ರೊಮ ವಿಲ್ಸನ್ ಮತ್ತು ಸೊಮ ಸೇನ್ ತಪ್ಪಿನ ಲಾಭ ಪಡೆಯುವ ಅವಕಾಶವನ್ನು ಕಳೆದುಕೊಂಡಿದ್ದಾರೆ ಮತ್ತು ಅವರು ಸುಪ್ರೀಂ ಕೋರ್ಟ ನಲ್ಲಿ ಜಾಮೀನು ಪಡೆಯಲು ಸಾಮಾನ್ಯ ಅರ್ಜಿಯನ್ನೇ ಸಲ್ಲಿಸಬೇಕಾಗಿದೆ.

ಕಾನೂನುಬಾಹಿರ ಚಟುವಟಿಕೆಗಳನ್ನು ತಡೆಗಟ್ಟುವ ಕಾಯ್ದೆಯಡಿ ತ್ವರಿತ ವಿಚಾರಣಾಧೀನ ನ್ಯಾಯಾಲಯ ಐವರು ಕಾರ್ಯಕರ್ತರ ಮೇಲೆ ಆರೋಪಪಟ್ಟಿ ಸಲ್ಲಿಸಲು 90 ದಿನಗಳ ಕಾಲಾವಕಾಶವನ್ನು ಮಹಾರಾಷ್ಟ್ರ ಪೊಲೀಸರಿಗೆ ನೀಡಿತ್ತು. ಕ್ರಿಮಿನಲ ವಿಧಾನ ದಂಡಸಂಹಿತೆಯಡಿ 90 ದಿನಗಳ ಕಾಲಾವಕಾಶ ಮುಗಿದಿದೆ.
ಮಹಾರಾಷ್ಟ್ರದ ಭೀಮಾ ಕೋರೆಗಾಂವ್ ಗ್ರಾಮದಲ್ಲಿ ಕಳೆದ ವರ್ಷ ಜನವರಿ 1ರಂದು ಜಾತಿ ಹಿಂಸಾಚಾರ ಸೃಷ್ಟಿಸಿದ ಆರೋಪದ ಮೇಲೆ ವಿವಿಧ ಕಡೆಗಳಿಂದ ಐವರು ಕಾರ್ಯಕರ್ತರನ್ನು ಬಂಧಿಸಲಾಗಿತ್ತು. ಇವರು ಜಾಮೀನಿಗಾಗಿ ಅರ್ಜಿ ಸಲ್ಲಿಸಿದ್ದರು.

ಸ್ಥಳೀಯ ಸುದ್ದಿ ಮತ್ತು ವೇಗದ ವಿತರಣೆಗಾಗಿ ನಮ್ಮ Android ಅಪ್ಲಿಕೇಶನ್ ಅನ್ನು ಡೌನ್ಲೋಡ್ ಮಾಡಿ