ಕೈಗಾರಿಕ ಎಸ್ಟೇಟ್‍ಗಳಿಗೆ ಗುಣಮಟ್ಟದ ವಿದ್ಯುತ್ ಸರಬರಾಜು ಸೇರಿದಂತೆ ಮೂಲಭೂತ ಸೌಕರ್ಯಗಳ ಅವಶ್ಯಕತೆಯಿದೆ: ಕಾಸಿಯ ಅಧ್ಯಕ್ಷ ಬಸವರಾಜ್.ಎಸ್.ಜವಳಿ

ಬೆಂಗಳೂರು,ಫೆ.13- ಈಗಿನ ಪರಿಸ್ಥಿತಿಯಲ್ಲಿ ಕೈಗಾರಿಕಾ ಎಸ್ಟೇಟ್‍ಗಳಿಗೆ ನಿರಂತರ ಗುಣಮಟ್ಟದ ವಿದ್ಯುತ್ ಸರಬರಾಜು ಸೇರಿದಂತೆ ಅಗತ್ಯ ಮೂಲ ಸೌಕರ್ಯಗಳ ಅವಶ್ಯಕತೆ ಇದೆ ಎಂದು ಕಾಸಿಯ ಅಧ್ಯಕ್ಷ ಬಸವರಾಜ್ ಎಸ್. ಜವಳಿ ಹೇಳಿದರು.

ಕರ್ನಾಟಕ ಸಣ್ಣ ಕೈಗಾರಿಕೆಗಳ ಸಂಘ ಮತ್ತು ಅಲಯನ್ಸ್ ಫಾರ್ ಆನ್ ಎನರ್ಜಿ ಎಫಿಶಿಯಂಟ್ ಎಕಾನಮಿ ಸಹಯೋಗದೊಂದಿಗೆ ಏರ್ಪಡಿಸಿದ್ದ ವಿದ್ಯುತ್ ವ್ಯಾಪಾರ ಸ್ಪರ್ಧಾತ್ಮಕತೆಗೆ ಇಂಧನ ಸಾಮಥ್ರ್ಯ ಕುರಿತ ವಿಚಾರ ಸಂಕಿರಣದಲ್ಲಿ ಎಂಎಸ್‍ಎಂಇ ಕೈಗಾರಿಕಾ ವಲಯ ಎದುರಿಸುತ್ತಿರುವ ಸಮಸ್ಯೆಗಳನ್ನು ಬಸವರಾಜ್ ಜವಳಿ ವಿವರಿಸಿದರು.

ಗುಣಮಟ್ಟದ ವಿದ್ಯುತ್, ಸಮರ್ಥವಾದ ಮಾನವಶಕ್ತಿ ಮತ್ತು ಸಾಮಗ್ರಿಯ ಗುಣಮಟ್ಟವು ಎಲ್ಲ ಕೈಗಾರಿಕಾ ಎಸ್ಟೇಟ್‍ಗಳಲ್ಲಿ ಕೂಡಲೇ ಅಗತ್ಯವಿದೆ. ಹೊಸ ಉಪಕೇಂದ್ರಗಳನ್ನು ಸ್ಥಾಪಿಸಬೇಕಿದೆ ಮತ್ತು ಅಸ್ತಿತ್ವದಲ್ಲಿರುವ ಉಪಕೇಂದ್ರಗಲ ಸಾಮಥ್ರ್ಯವನ್ನು ಹೆಚ್ಚಿಸಬೇಕು. ಸೌಕರ್ಯ ನಿರ್ವಹಣೆಗೆ ಮೀಲಸಾದ ತಾಂತ್ರಿಕ ಇಂಜಿನಿಯರ್‍ಗಳೊಂದಿಗೆ ಎಲ್ಲಾ ಕೈಗಾರಿಕಾ ಎಸ್ಟೇಟ್‍ಗಳಲ್ಲಿ ಕಾರ್ಯ ನಿರ್ವಹಕ ಘಟಕಗಳನ್ನು ಸ್ಥಾಪಿಸಬೇಕೆಂದು ಒತ್ತಾಯಿಸಿದರು.

ಇಂಧನ ಇಲಾಖೆಯ ಪಿ. ಭಾ.ಆ.ಸೇ. ಸರ್ಕಾರದ ಅಪರ ಮುಖ್ಯ ಕಾರ್ಯದರ್ಶಿ ರವಿಕುಮಾರ್ ಕಾರ್ಯಕ್ರಮ ಉದ್ಘಾಟಿಸಿದರು. ಅಲಯನ್ಸ್ ಫಾರ್ ಆನ್ ಎನರ್ಜಿ ಎಫಿಶಿಯಂಟ್ ಎಕಾನಮಿ ನಿರ್ದೇಶಕ ಡಾ. ಕೋಶಿ ಚೆರೈಲ್, ಕಾಸಿಯಾ ಪದಾಧಿಕಾರಿಗಳಾದ ಗೌರವ ಉಪಾಧ್ಯಕ್ಷರಾದ ಶ್ರೀ ಆರ್ ರಾಜು, ಗೌರವ ಪ್ರಧಾನ ಕಾರ್ಯದರ್ಶಿಗಳಾದ ಶ್ರೀ ರವಿಕಿರಣ ಕುಲಕರ್ಣಿ, ಶ್ರೀ ಸುರೇಶ್ ಎನ್ ಸಾಗರ್, ಗೌರವ ಜಂಟಿ ಕಾರ್ಯದರ್ಶಿಗಳು – ನಗರ, ಶ್ರೀ ಶ್ರೀನಾಥ್ ಭಂಡಾರಿ ಉದ್ಯಾವರ್, ಗೌರವ ಖಜಾಂಚಿಗಳು, ಶ್ರೀ ಎಸ್.ಎಂ.ಹುಸೇನ್, ಛೇರ್‍ಮನ್ ಎನರ್ಜಿ ಪ್ಯಾನಲ್, ಕಾಸಿಯಾ ರವರು ಉಪಸ್ಥಿತರಿದ್ದಾರೆ.

ಸ್ಥಳೀಯ ಸುದ್ದಿ ಮತ್ತು ವೇಗದ ವಿತರಣೆಗಾಗಿ ನಮ್ಮ Android ಅಪ್ಲಿಕೇಶನ್ ಅನ್ನು ಡೌನ್ಲೋಡ್ ಮಾಡಿ